ಬಿಗ್ ಬಾಸ್ ಸ್ಪರ್ಧಿ, ನಟ ಹುಚ್ಚ ವೆಂಕಟ್, ರಾಮನಗರದಲ್ಲಿ ಪ್ರತ್ಯಕ್ಷವಾಗಿದ್ದಾನೆ ರಾಮನಗರಕ್ಕೆ ಕಾರ್ ನಲ್ಲಿ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್, ಸ್ಥಳೀಯರ ಜೊತೆ ಜಗಳಕ್ಕೆ ನಿಂತಿದ್ದಾನೆ. ಕೆಲವು ಯುವಕರ ಜೊತೆ ಮನಬಂದಂತೆ ಮಾತನಾಡಿ ಆವಾಜ್ ಹಾಕಿದ್ರೆ, ಮತ್ತೆ ಕೆಲವರಿಗೆ ಊಟ ಆಯ್ತಾ ಎಂದಷ್ಟೇ ಕೇಳಿ ಮುಂದಕ್ಕೆ ಸಾಗಿದ್ದಾನೆ. ತಮಾಷೆ ಸಂಗತಿ ಅಂದ್ರೆ, ನಾನೇ ದೇವರು ಎಂದು ಕೆಲವರ ಜೊತೆ ಜಗಳ ತೆಗೆದ ಹುಚ್ಚ ವೆಂಕಟ್, ನಾನೇಕೆ ದೇವಸ್ಥಾನಕ್ಕೆ ಹೋಗಬೇಕು ಎಂದು ರಾಂಗ್ ಆಗಿದ್ದಾನೆ. ಒಂದಷ್ಟು ಹೊತ್ತು ಸ್ಥಳೀಯರ ಜೊತೆ ಮಾತನಾಡಿ ನಂತರ ಕಾರಿನಲ್ಲಿ ಬೆಂಗಳೂರು ಕಡೆಗೆ ಹೊರಟ ಎಂದು ತಿಳಿದುಬಂದಿದೆ.

ಕೆಲವೇ ಗಂಟೆಗಳ ಹಿಂದೆ ಮಂಡ್ಯದಲ್ಲಿದ್ದ ಹುಚ್ಚ ವೆಂಕಟ್, ಅಲ್ಲಿಯೂ ಹುಚ್ಚಾಟ ಮೆರೆದು ಸುದ್ದಿಯಾಗಿದ್ದ ಹುಚ್ಚ ವೆಂಕಟ್ ಮಂಡ್ಯದಿಂದ ಸೀದಾ ರಾಮನಗರಕ್ಕೆ ಬಂದ ಅಲ್ಲಿದ್ದ ಬೇಕರಿ ಬಳಿ ಹುಚ್ಚ ವೆಂಕಟ್ ಟೀ ಕುಡಿಯುತ್ತಾ ಯುವಕನೋರ್ವನಿಗೆ ಯಾವ್ ಭಾಷೆ ಮಾತನಾಡ್ತಿದ್ಯಾ ಎಂದು ಅವಾಜ್ ಹಾಕಿದ್ದಾರೆ. ತನ್ನ ಬಳಿ ಬಂದ ಸಾರ್ವಜನಿಕರಿಗೆ ಊಟ ಆಯ್ತಾ ಎಂದು ಸಹಜವಾಗಿಯೇ ಮಾತನಾಡಿಸಿದರು. ಈ ನಡುವೆ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಫೋಸ್ ಕೊಟ್ಟಿದ್ದಾರೆ.

ರಾಮದೇವರ ಬೆಟ್ಟದ ಕಡೆಯಿಂದ ಹುಚ್ಚ ವೆಂಕಟ್ ಬಂದಿದ್ದನ್ನು ನೋಡಿದ್ದ ಗ್ರಾಮಸ್ಥರು, ದೇವಸ್ಥಾನಕ್ಕೆ ಹೋಗಿದ್ರಾ ಎಂದು ಪ್ರಶ್ನಿಸಿದರು. ಏಕಾಏಕಿ ಧ್ವನಿ ಏರಿಸಿದ ಪೈರಿಂಗ್ ಸ್ಟಾರ್, ನಾನೇ ದೇವರು. ನಾನ್ಯಾಕೆ ದೇವಸ್ಥಾನಕ್ಕೆ ಹೋಗಲಿ, ಮುಂದೆ ಕಾಣುತ್ತಿರುವ ವಿಜಯನಗರದ ಓವರ್ ಹೆಡ್ ವಾಟರ್ ಟ್ಯಾಂಕ್‍ನ ನಮ್ಮಪ್ಪ ಕಟ್ಟಿಸಿದ್ದು ಎಂದು ರಂಪಾಟ ಮಾಡಿದರು. ನಂತರ ಅಲ್ಲಿಂದ ಬೆಂಗಳೂರು ಕಡೆಗೆ ಕಾರಿನಲ್ಲಿ ಪ್ರಯಾಣಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here