ಬೆಂಗಳೂರು,ಸೆ.12: ಬಂದ್ ಹಾಗೂ ಪಗ್ರತಿಭಟನೆ ವೇಳೆ ನಷ್ಟ ಪ್ರಯಾಣಿಕರಿಲ್ಲದೇ ನಷ್ಟ ಅನುಭವಿಸುತ್ತಿದ್ದ ಸರ್ಕಾರಿ ಸಾರಿಗೆ ನಿನ್ನೆಯ ಬೆಂಗಳೂರು ಬಂದ್ ನಿಂದಾಗಿ ಸುಮಾರು ೬ ಕೋಟಿ ಗೂ ಹೆಚ್ಚು ಲಾಭವಾಗಿದೆ. ಖಾಸಗಿ ಸಾರಿಗೆ ವಾಹನಗಳ ಮುಷ್ಕರದಿದಂದ ಸರ್ಕಾರಿ ವಾಹನಗಳಾದ ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳಿಗೆ ಭರ್ಜರಿ ಲಾಭವಾಗಿದೆ. ಹೌದು, ನಿನ್ನೆ ರ ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಪರಿಣಾಮವಾಗಿ, ಅದರ ಬದಲಾಗಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ನಿಗಮಗಳಿಂದ ಹೆಚ್ಚುವರಿ ಬಸ್ಗಳನ್ನು ಸಂಚಾರಕ್ಕೆ ಬಿಡಲಾಗಿತ್ತು.