ಹೆಂಡತಿಗೆ ಸರ್ಪ್ರೈಸ್ ನೀಡುವುದಾಗಿ ಹೇಳಿದ ಕ್ರೂರಿಯಾದ ಪತಿಯೊಬ್ಬನು ಮೆರೆದಿರುವ ಕ್ರೌರ್ಯಕ್ಕೆ ಪತ್ನಿ ತನ್ನ ಬಲಗೈನ ಬೆರಳುಗಳನ್ನು ಕಳೆದುಕೊಂಡ ಮನ ಕಲಕುವ ಘಟನೆಯೊಂದು ನೆರೆಯ ಬಾಂಗ್ಲಾ ದೇಶದಲ್ಲಿ ನಡೆದಿದೆ. ಈ ಘಟನೆಗೆ ಕಾರಣ ಪತ್ನಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎಂಬ ಒಂದೇ ಕಾರಣಕ್ಕಾಗಿ ಎಂಬುದು ನಿಜಕ್ಕೂ ಆ ವ್ಯಕ್ತಿಯ ಸೀಮಿತ ಆಲೋಚನೆ ಹಾಗೂ ಸಂಕುಚಿತ ಮನೋಭಾವ ಅಲ್ಲದೆ ಅವನ ಕ್ರೌರ್ಯತೆಯನ್ನು ಮೆರೆಯುವಂತಿದ್ದು ಮಾನವೀಯತೆ ಇಲ್ಲದ ಮೃಗದ ರೀತಿ ವರ್ತಿಸಿದ್ದಾನೆ ಆ ವ್ಯಕ್ತಿ.

ಇಸ್ಲಾಂ ಯುನೈಟೆಡ್ ಅರಬ್ ಎಮಿರೇಟ್ಸ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಫೀಕುಲ್ ಇಸ್ಲಾಂ ಎನ್ನುವ ವ್ಯಕ್ತಿ ತನ್ನ ಹೆಂಡತಿಗೆ ಆಕೆ ವಿದ್ಯಾಭ್ಯಾಸವನ್ನು ಮುಂದುವರೆಸದಂತೆ ಈ ಹಿಂದೆಯೇ ತಾಕೀತು ಮಾಡಿದ್ದಾನೆ. ಅಲ್ಲದೆ ತನ್ನ ಮಾತು ಮೀರಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುವುದು ಎಂದು ಕೂಡಾ ಎಚ್ಚರಿಕೆಯನ್ನು ನೀಡಿದ್ದಾನೆ. ಇದಾದ ನಂತರ ಬಾಂಗ್ಲಾ ದೇಶಕ್ಕೆ ಹಿಂತಿರುಗಿದ ನಂತರ ಆತನ ಪತ್ನಿ ಹವ ಅಕ್ತರ್ ತಾನು ಪದವಿ ವಿದ್ಯಾಭ್ಯಾಸ ಮಾಡುವ ಬಗ್ಗೆ ಯೋಚಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದ್ದಾಳೆ. ಇದಾದ ಮೇಲೆ ಒಂದು ದಿನ ರಫೀಕುಲ್ ಅನಿರೀಕ್ಷಿತವಾದ ಅನಾಹುತ ಸೃಷ್ಟಿಸಿದ್ದಾನೆ.

ಹೆಂಡತಿಗೆ ಸರ್ಪ್ರೈಸ್ ಉಡುಗೊರೆ ನೀಡುವುದಾಗಿ, ಕಣ್ಮುಚ್ಚಿ ಕೈ ಮುಂದೆ ಚಾಚುವಂತೆ ಹೇಳಿದ್ದಾನೆ. ಆಕೆ ಕೈ ಚಾಚಿದಾಗ, ಆಕೆಯ ಬಾಯಿ ಮುಚ್ಚಿ, ಬಲಗೈನ ಬೆರಳುಗಳನ್ನು ಚಾಕುವಿನಿಂದ ಕತ್ತರಿಸಿ ಹಾಕಿದ್ದಾನೆ. ವೈದ್ಯರು ಆ ಬೆರಳುಗಳನ್ನು ಮತ್ತೆ ಅಳವಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸಂಬಂಧಿಕರು ಅವನ್ನು ಎಸೆದಿದ್ದಾರೆ. ಬಾಂಗ್ಲಾ ಪೋಲಿಸರು ರಫೀಕುಲ್ಲಾನನ್ನು ಅರೆಸ್ಟ್ ಮಾಡಿದ್ದು, ಆತ ತಾನು ಎಂಟನೇ ತರಗತಿ ಓದಿದ್ದು, ಹೆಂಡತಿ ತನಗಿಂತ ಹೆಚ್ಚು ಓದುವುದು ಇಷ್ಟವಿಲ್ಲದೆ , ಅಸೂಯೆಯಿಂದ ಈ ಕುಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇವನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಮಾನವ ಹಕ್ಕುಗಳ ಆಯೋಗ ಒತ್ತಾಯ ಮಾಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here