ಯುವ ಜೋಡಿಗಳಿಗೆ ಪ್ರೀತಿ ಪ್ರೇಮದ ಗುಂಗಿನಲ್ಲಿ ಮೈಮರೆತಾಗ ಏನೆಲ್ಲಾ ಆಗುತ್ತದೆ ಎಂಬ ಅರಿವೇ ಇರುವುದಿಲ್ಲ. ‌ಹುಡುಗ ಹುಡುಗಿಯರು ಮೋಹದ ಬಲೆಯಲ್ಲಿ ಬಿದ್ದಾಗ ನಾವು ಎಲ್ಲಿದ್ದೇವೆ ಹೇಗೆ ವರ್ತಿಸುತ್ತಿದ್ದೇವೆ ಎಂಬ ಸಾಮಾನ್ಯ ಪರಿಕಲ್ಪನೆ ಇರಬೇಕಾಗುತ್ತದೆ. ಕೆಲ ಜೋಡಿಗಳು ಪಾರ್ಕ್ , ಬಸ್ ಸ್ಟಾಪ್ , ಹೋಟೇಲ್ ಗಳಲ್ಲಿ ಸುತ್ತಮುತ್ತಲಿನ ಜನರ ಅರಿವಿಲ್ಲದೆ ತಬ್ಬಿಕೊಳ್ಳುವುದು ಮುತ್ತು ನೀಡುವುದು ಅಭ್ಯಾಸವಾಗಿಹೋಗಿದೆ. ಅಂತಹುದರಲ್ಲಿ ಯಾರು ಇಲ್ಲದ ಸ್ಥಳ ಸಿಕ್ಕರೆ ಸುಮ್ಮನಿರುತ್ತಾರೆಯೇ. ? ಹೌದು ಈಗ ಆಗಿರುವುದು ಅದೇ ಕಳೆದ ಒಂದು ವಾರದಲ್ಲಿ ಹಲವಾರು ಜೋಡಿಗಳು ತಬ್ಬಿಕೊಂಡು ತುಟಿಗೆ ತುಟಿ ಸೇರಿಸಿ ಮೈಮರೆತ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.

ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಯುವ ಜೋಡಿಗಳು ಮೈಮರೆತು ಚುಂಬಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಯಾವ ನಿಲ್ದಾಣದಲ್ಲಿ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಹೀಗಾಗಿ ಸ್ಥಳ ಪತ್ತೆ ಮಾಡಿದ ಬಳಿಕ ಪೊಲೀಸರು ಸೂಕ್ತ ತನಿಖೆ ನಡೆಸಲಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಹೈದರಾಬಾದ್ ಮೆಟ್ರೊ ನಿಲ್ದಾಣದಲ್ಲಿ ಈ ರೀತಿಯ ಅಸಹ್ಯಕರ ಘಟನೆ ನಡೆದಿದೆ. ಯುವ ಜೋಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೈದರಾಬಾದ್ ಮೆಟ್ರೊ ರೈಲ್‌ನ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಎಸ್. ರೆಡ್ಡಿ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here