ಈ ವರ್ಷದ ಬ್ಲಾಕ್ ಬಸ್ಟರ್  ಚಿತ್ರಗಳ ಪೈಕಿ ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಸೂಪರ್ ಹಿಟ್ ಸಿನಿಮಾ ಐ ಲವ್ ಯೂ ಸಹ ಒಂದು.  ಐ ಲವ್ ಯು ತೆರೆಕಂಡು  ಈಗಾಗಲೇ 50 ದಿನಗಳನ್ನು ಪೂರೈಸಿ 75ನೇ ದಿನದತ್ತ ಮುನ್ನುಗ್ಗುತ್ತಿದೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಐ  ಲವ್ ಯು ಸಿನಿಮಾ ತೆರೆಗೆ ಬರುವ ಮುನ್ನವೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿತ್ತು. ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಎನಿಸಿರುವ ಅರ್. ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ಎರಡನೇ ಚಿತ್ರ ಇದಾಗಿತ್ತು. ಮೊದಲಿನಿಂದಲೂ ಸದಭಿರುಚಿ ಚಿತ್ರಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದ r.ಚಂದ್ರು ಐ ಲವ್ ಯು ಚಿತ್ರದ ಮೂಲಕ ಉಪೇಂದ್ರ ಅವರನ್ನು ಉಪ್ಪಿ ಸ್ಟೈಲ್ ನಲ್ಲಿ ನೋಡುವ ಅಭಿಮಾನಿಗಳಿಗೆ ಇಷ್ಟವಾಗುವಂತೆ ತೋರಿಸಿದ್ದರು.

ಐ ಲವ್ ಯು ಚಿತ್ರವನ್ನು ಕಮರ್ಷಿಯಲ್ಲಾಗಿ ನಿರ್ದೇಶಿಸಿದ್ದ r.ಚಂದ್ರು  ಕೊನೆಯಲ್ಲಿ ಉತ್ತಮ ಸಾಮಾಜಿಕ ಸಂದೇಶ ಸಾರುವಂತೆ ಕ್ಲೈಮ್ಯಾಕ್ಸ್ ಮಾಡಿದ್ದು ನೋಡುಗರಿಗೆ ಇಷ್ಟವಾಗಿತ್ತು. ಐ ಲವ್ ಯು ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು ಐಲವ್ಯು ಚಿತ್ರ ತೆರೆಗೆ ಬಂದ ಬಳಿಕ ಉಪೇಂದ್ರ ಮತ್ತು ರಚಿತರಾಮ್ ನಡುವಿನ ಕಾಂಬಿನೇಶನ್  ಜನಪ್ರಿಯವಾಗಿತ್ತು.

ಇದೀಗ ಯೂಟ್ಯೂಬ್ ಲ್ಲಿ ಮಾತನಾಡಿ ಮೌನವಾದೆ ಎನ್ನುವ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು  ಮೋಡಿ ಮಾಡುತ್ತಿದೆ. ಉಪೇಂದ್ರ ಜೊತೆಗಿನ ರಚಿತರಾಮ್ ಕೆಮಿಸ್ಟ್ರಿ ನೋಡಿದ ಅಭಿಮಾನಿಗಳೆಲ್ಲರೂ ಈ ಹಾಡನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು.  ಈ ಹಾಡು ಮಾಡಿದ್ದಕ್ಕಾಗಿ ರಚಿತರಾಮ್ ಕಣ್ಣಿಟ್ಟಿರುವ ಪ್ರಸಂಗ ನಡೆದಿತ್ತು. ಆದರೆ  ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ವಿವಾದ ತಣ್ಣಗಾಗಿತ್ತು ಎಂದು ಹೇಳಬಹುದು. ಇದೀಗ ಐ ಲವ್ ಯು ಚಿತ್ರದ ಸೂಪರ್ ಹಿಟ್ ಅಂತ ಮಾತನಾಡು ಮೌನವಾದೆ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here