ನ್ಯೂಯಾರ್ಕ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಕ್ ವರದಿಗಾರರೊಬ್ಬರು, ಪ್ರಶ್ನೆ ಕೇಳುತ್ತಾ, ಭಾರತ ಹಾಗೂ ಕಾಶ್ಮೀರದ ಬಗ್ಗೆ ಪ್ರಶ್ನಿಸಿದ್ದ ವೇಳೆಯಲ್ಲಿ ಆ ವರದಿಗಾರನಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಉತ್ತರ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕ್ ನ ಕಡೆ ನೋಡಿ ನಗುವಂತಾಗಿದೆ. ಟ್ರಂಪ್ ಅವರು ವರದಿಗಾರನಿಗೆ ಉತ್ತರ ನೀಡುತ್ತಲೇ ಪಾಕ್ ಗೆ ಸರಿಯಾಗಿ ಟಾಂಗ್ ಕೊಟ್ಟಿದ್ದು, ವೇದಿಕೆ ಮೇಲೆಯೇ ಪಾಕ್ ಪ್ರಧಾನಿಯ ಮಾರ್ಯದೆ ತೆಗೆದಂತೆ ಆಗಿದೆ. ಆ ಸಂಭಾಷಣೆಯ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಭಾರತೀಯರು ಈ ವಿಡಿಯೋವನ್ನು ಹೆಚ್ಚು ಶೇರ್ ಮಾಡುವ ಮೂಲಕ ಸುದ್ದಿ ಎಲ್ಲರ ಗಮನವನ್ನು ಸೆಳೆದಿದೆ.

ಪಾಕ್ ನ ವರದಿಗಾರ ಕಾಶ್ಮೀರದ ಬಗ್ಗೆ ಟ್ರಂಪ್ ಅವರನ್ನು ಪ್ರಶ್ನಿಸುತ್ತಾ, ಭಾರತ ಸರ್ಕಾರವು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿದ ನಂತರ ಅಲ್ಲಿ ಜನರು ಸಂಕಷ್ಟ ಅನುಭವಿಸುತ್ತಿದ್ದು, ಇಂಟರ್‌ನೆಟ್ ಹಾಗೂ ಫೋನ್ ಸೌಲಭ್ಯ ಕೂಡಾ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ನೀವು ಏಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಆಗ ಟ್ರಂಪ್ ಅವರು ಇಮ್ರಾನ್ ಖಾನ್ ಅವರತ್ತ ನೋಡುತ್ತಾ ನೀಡಿದ ವ್ಯಂಗ್ಯ ಮಾಡುವಂತ ಉತ್ತರವೇ ಈಗ ವೈರಲ್ ಆಗಿರುವುದು.

ಟ್ರಂಪ್ ಅವರು ಉತ್ತರ ನೀಡುತ್ತಾ, ಇವರು ನಿಮ್ಮ ತಂಡದವರಾ? ಇಂಥವರನ್ನ ಎಲ್ಲಿಂದ ಹುಡುಕಿ ಕರೆ ತರುವಿರಿ? ಇವರೆಲ್ಲಾ ಅದ್ಭುತ ವ್ಯಕ್ತಿಗಳು ಎಂದು ಪಕ್ಕದಲ್ಲಿದ್ದ ಇಮ್ರಾನ್ ಖಾನ್ ಅವರಿಗೆ ಹೇಳಿ ಅವರ ಕಾಲೆಳೆದಿದ್ದಾರೆ. ಹಾಗೆ ಅವರು ವರದಿಗಾರನಿಗೆ, ನೀವು ಪ್ರಶ್ನೆ ಕೇಳುತ್ತಿಲ್ಲ ಬದಲಾಗಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೀರೆಂದು ಉತ್ತರಿಸಿ ವರದಿಗಾರನು ತೆಪ್ಪಗಾಗುವಂತೆ ಮಾಡಿದ್ದಾರೆ. ವಿಡಿಯೋ ಎಲ್ಲೆಡೆ ಶೇರ್ ಆದ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಕಳೆದುಕೊಂಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here