ಹಿಜ್ಬುಲ್ ಮುಜಾಹುದ್ದೀನ್ ಉಗ್ರರ ಜೊತೆಗೆ ವಾಹನವೊಂದರಲ್ಲಿ ತೆರಳುತ್ತಿದ್ದ ವೇಳೆ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದ ಡಿವೈಎಸ್ಪಿ ದವೀಂದರ್ ಸಿಂಗ್ ಅವರು ಈ ಉಗ್ರರಿಗೆ ತಮ್ಮ ಮನೆಯಲ್ಲೇ ಆಶ್ರಯವನ್ನು ನೀಡಿದ್ದು ಮಾತ್ರವಲ್ಲದೇ, ಅವರನ್ನು ಸುರಕ್ಷಿತವಾಗಿ ಅವರ ಸ್ಥಳಕ್ಕೆ ಸೇರಿಸಲು ಸುಮಾರು 12 ಲಕ್ಷ ರೂಪಾಯಿಗಳನ್ನು ಕೂಡಾ ಈ ಅಧಿಕಾರಿ ಸ್ವೀಕರಿಸಿದ್ದರು ಎನ್ನುವ ಆಘಾತಕಾರಿ ವಿಷಯವು ತನಿಖೆಯಲ್ಲಿ ತಿಳಿದು ಬಂದಿದೆ. ಶ್ರೀನಗರದ ಬದಾಮಿ ಬಾಗ್ ಕಂಟೋನ್ಮೆಂಟ್ ನ ಪಕ್ಕದಲ್ಲೇ ಇವರ ಮನೆಯಿದ್ದು, ಈ ಅಧಿಕಾರಿ ಉಗ್ರರಿಗೆ ಅಲ್ಲೇ ಆಶ್ರಯ ನೀಡಿದ್ದರು ಎಂಬುದು ಕೂಡಾ ಆತಂಕವನ್ನು ಉಂಟು ಮಾಡುವ ವಿಷಯವಾಗಿದೆ.

ತನಿಖೆಯ ಸಂದರ್ಭದಲ್ಲಿ ಅವರ ಮನೆಯಲ್ಲಿ ಅವರು ಉಗ್ರರಿಗೆ ಆಶ್ರಯ ನೀಡಿದ್ದರು ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ ಹಿಜ್ಜುಲ್ ಕಮಾಂಡರ್ ನವೀದ್ ಬಾಬು, ಆತನ ಇಬ್ಬರು ಸಹಚರರಾದ ರಫಿ ಮತ್ತು ಇರ್ಫಾನ್ ಮೂವರು ದವೀಂದರ್ ಸಿಂಗ್ ಮನೆಯಲ್ಲೇ ಉಳಿದುಕೊಂಡಿದ್ದು, ಅವರನ್ನು ಅಲ್ಲಿಂದ ಶನಿವಾರ ದೆಹಲಿಗೆ ಕರೆತರುವ ಯೋಜನೆಯನ್ನು ಮಾಡಲಾಗಿತ್ತು. ಆದರೆ ಪೋಲಿಸರ ಕಾರ್ಯಾಚರಣೆಯಲ್ಲಿ ಎಲ್ಲರೂ ಸಿಕ್ಕಿ ಬಿದ್ದಿದ್ದಾರೆ.
ದವೀಂದರ್ ಸಿಂಗ್ ಅವರನ್ನು ಈಗಾಗಲೇ ಅವರ ಸೇವೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಅವರಿಗೆ ಕಳೆದ ಆಗಸ್ಟ್ ನಲ್ಲಿ ನೀಡಿದ ಶೌರ್ಯ ಪ್ರಶಸ್ತಿಯನ್ನು ಕೂಡಾ ಹಿಂಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

57 ವರ್ಷದ ದವೀಂದರ್ ಸಿಂಗ್ ಅವರು ನಿವೃತ್ತಿಗೆ ಹತ್ತಿರವಿರುವಾಗಲೇ ಇಂತಹುದೊಂದು ಪ್ರಕರಣದಲ್ಲಿ ಸಿಲುಕಿ ತಮ್ಮ ಸೇವಾ ನಿಷ್ಠೆಗೆ ತಾವೇ ಮಸಿ ಬಳಿದು ಕೊಂಡಿದ್ದಾರೆ. ದವೀಂದರ್ ಸಿಂಗ್ ಅವರ ಚಲನ ವಲನಗಳ ಮೇಲೆ ಕೆಲವು ದಿನಗಳಿಂದಲೂ ನಿಗಾ ಇಡಲಾಗಿತ್ತು ಎನ್ನಲಾಗಿದೆ. ಅಲ್ಲದೆ ಇವರ ಹೆಸರು ಇನ್ನೂ ಕೆಲವು ಪ್ರಕರಣಗಳಲ್ಲಿ ತಳಕು ಹಾಕಿಕೊಂಡಿತ್ತು. ಆದರೆ ಅದೃಷ್ಟವಶಾತ್ ಎಲ್ಲದರಿಂದಲೂ ಅವರು ಸೇಫ್ ಆಗಿದ್ದರು. ಆದರೆ ಈ ಬಾರಿ ಅವರು ಉಗ್ರರ ಜೊತೆಗೆ ಸಿಕ್ಕಿ ಹಾಕಿಕೊಂಡಿರುವುದು ಅವರ ಮೇಲೆ ಅನುಮಾನಗಳನ್ನು ಹುಟ್ಟು ಹಾಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here