ಫ್ರೆಂಚ್ ಪಟ್ಟಣವಾದ ಬೋರ್ಡೆಕ್ಸ್‌ನಲ್ಲಿ ಭಾರತೀಯ ವಾಯುಪಡೆಗೆ ಡಸಾಲ್ಟ್ ಏವಿಯೇಷನ್‌ನಿಂದ 36 ರಾಫೆಲ್ ಫೈಟರ್ ಜೆಟ್‌ಗಳಲ್ಲಿ ಮೊದಲನೆಯದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಔಪಚಾರಿಕವಾಗಿ ನಡೆದ ಹಸ್ತಾಂತರ ಸಮಾರಂಭದಲ್ಲಿ ಸ್ವೀಕರಿಸಿದ್ದಾರೆ. ಇನ್ನು ನಾಲ್ಕು ರಾಫೆಲ್ ಜೆಟ್‌ಗಳ ಮೊದಲ ಬ್ಯಾಚ್ 2020 ರ ಮೇ ವೇಳೆಗೆ ಭಾರತದ ತಮ್ಮ ನೆಲೆಗೆ ಹಾರಲಿವೆ. ಹಸ್ತಾಂತರ ಸಮಾರಂಭದಲ್ಲಿ ರಾಜನಾಥ್ ಸಿಂಗ್ ಅವರು , ಇದನ್ನು ಭಾರತೀಯ ಪಡೆಗಳಿಗೆ ಒಂದು ಐತಿಹಾಸಿಕ ದಿನ ಮತ್ತು ಇಂಡೋ-ಫ್ರೆಂಚ್ ದ್ವಿಪಕ್ಷೀಯ ಸಂಬಂಧಗಳಿಗೆ ಒಂದು ಮೈಲಿಗಲ್ಲು ಎಂದು ಕರೆದಿದ್ದಾರೆ. ಅಲ್ಲದೆ ನಿಗಧಿತ ಸಮಯದಲ್ಲಿ ಹಸ್ತಾಂತರ ಮಾಡುವ ಡಸಾಲ್ಟ್ ಏವಿಯೇಷನ್ ಕಾರ್ಯವನ್ನು ಅವರು ಮೆಚ್ಚಿದರು.

“ರಫೇಲ್ ವಿತರಣೆಯು ನಿಗದಿತ ಸಮಯದಲ್ಲಿ ನಡೆದಿದೆ ಎಂದು ನನಗೆ ಸಂತೋಷವಾಗಿದೆ. ಈ ಹೊಸ ಜೆಟ್ ನಮ್ಮ ಪಡೆಗಳ ಬಲವನ್ನು ಹೆಚ್ಚಿಸುತ್ತದೆ” ಎಂದು ಅವರು ಹೇಳಿದರು. ಇನ್ನು ರಫೇಲ್ ಜೆಟ್ ರಾಫೆಲ್ ಒಂದು ಅವಳಿ-ಜೆಟ್ ಯುದ್ಧ ವಿಮಾನವಾಗಿದ್ದು, ವಿಮಾನವಾಹಕ ನೌಕೆ ಮತ್ತು ತೀರದ ನೆಲೆಯಿಂದ ಎರಡೂ ಕಡೆ ಇದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರ ತಯಾರಕರು ಇದನ್ನು ಸಂಪೂರ್ಣ ಬಹುಪಯೋಗಿ ವಿಮಾನ ಎಂದು ವಿವರಿಸಿದ್ದು, ಇದು ವಾಯು ಶ್ರೇಷ್ಠತೆ ಮತ್ತು ವಾಯು ರಕ್ಷಣೆ, ನಿಕಟ ವಾಯು ಬೆಂಬಲ, ಆಳವಾದ ಸ್ಟ್ರೈಕ್, ವಿಚಕ್ಷಣ, ಹಡಗು ವಿರೋಧಿ ಸ್ಟ್ರೈಕ್ ಮತ್ತು ಪರಮಾಣು ತಡೆಗಟ್ಟುವಿಕೆಯನ್ನು ಸಾಧಿಸಲು ಎಲ್ಲಾ ಯುದ್ಧ ವಿಮಾನಯಾನ ಕಾರ್ಯಗಳನ್ನು ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ ಎನ್ನಲಾಗಿದೆ.

ಭಾರತಕ್ಕಾಗಿ ಉದ್ದೇಶಿಸಲಾದ ರಾಫೆಲ್ ಜೆಟ್‌ಗಳು ಐಎಎಫ್‌ಗಾಗಿ ಕೆಲವು ಬೆಸ್ಪೋಕ್ ಮಾರ್ಪಾಡುಗಳೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು ಭಾರತದ ಮಧ್ಯಮ ಮಲ್ಟಿ-ರೋಲ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಫ್ಲೀಟ್‌ಗೆ ಒಂದು ಬಹುಮುಖ್ಯವಾದ ಸೇರ್ಪಡೆ ಇದು ಎಂದು ನಿರೀಕ್ಷಿಸಲಾಗಿದೆ. ಮೊದಲ ರಾಫೆಲ್ ಜೆಟ್ ಸಂಖ್ಯೆ ಆರ್.ಬಿ. 001 ನೊಂದಿಗೆ ಬರಲಿದ್ದು, ಏರ್ ಚೀಫ್ ಮಾರ್ಷಲ್ ರಾಕೇಶ್ ಭದೌರಿಯಾ ಅವರ ಮೊದಲಕ್ಷರಗಳನ್ನು ಆರ್.ಬಿ. ಸೂಚಿಸುತ್ತದೆ, ಐಎಎಫ್ ಉಪ ಮುಖ್ಯಸ್ಥರಾಗಿರುವ ಅವರು ಜೆಟ್‌ಗಳಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here