ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೈನಿಕರು ನಮಗಾಗಿ ಪ್ರತಿದಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಚಳಿಗಾಳಿ ಹಿಮಮಳೆ ಯಾವುದನ್ನೂ ಲೆಕ್ಕಿಸದೆ ಸೈನಿಕರು ಬಾರ್ಡರ್ ನಲ್ಲಿ ನಮಗಾಗಿ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಿರುತ್ತಾರೆ.ಮಳೆ ಇರಲಿ, ಚಳಿ ಇರಲಿ, ಬಿಸಿಲೇ ಬರಲೇ, ದೇಶ ಕಾಯೋ ಯೋಧರಿಗೂ ಇದ್ಯಾವುದು ಲೆಕ್ಕವಿಲ್ಲ. ದೇಶಕ್ಕೊಸ್ಕರ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರ ತ್ಯಾಗ ಬಲಿದಾನಗಳಿಂದ ನಮ್ಮ ಸುಂದರ ನಾಳೆಗಳು ನಿಂತಿದೆ.

ಹೀಗೆ ಜಮ್ಮ ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಕರ್ತವ್ಯ ಸಲ್ಲಿಸುತ್ತಿರುವ CRPF ಯೋಧನಿಗೆ ಭಾರತೀಯರು ಸಲಾಂ ಹೇಳಿದ್ದಾರೆ. CRPF ಅಸಿಸ್ಟೆಂಟ್ ಕಮಾಂಡರ್ ಕಶ್ಯಪ್ ಕಡಗತ್ತೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತೆ.

ಇವರು ಬ್ಯಾಟ್‌ಮ್ಯಾನ್ ಅಲ್ಲ(ಬ್ರಿಟೀಷ್ ಸೇನಾಧಿಕಾರಿ), ಇವರು ಕೇಂದ್ರಾಡಳಿತ ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರತ CRPF ಕಾನ್ಸ್ಟೇಬಲ್ ಐಜಾಝ್. ಹಿಮಾಪಾತವಾಗುತ್ತಿದ್ದರೂ ಕರ್ತವ್ಯ ಮಾಡುತ್ತಿರುವ ಸೈನಿಕ. ವೃತ್ತಿಪರತೆಗೆ ಮತ್ತೊಂದು ಹೆಸರ CRPF ಎಂದು ಕಶ್ಯಪ್ ಕಡಗತ್ತೂರ್ ಟ್ವೀಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಭಾರತೀಯರು ತಕ್ಷಣವೇ CRPF ಯೋಧನಿಗೆ ಸಲಾಂ ಹೇಳಿದ್ದಾರೆ. ನಿಮ್ಮ ಸೇವೆಯಿಂದಲೇ ನಾವು ಸುಖವಾಗಿದ್ದೇವೆ ಎಂದಿದ್ದಾರೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here