ಭಾರತವು ಬ್ರಿಟಿಷ್ ಆಡಳಿತಕ್ಕೆ ಅಂತ್ಯ ಹಾಡಿ ಸ್ವತಂತ್ರವನ್ನು ಗಳಿಸಿದ ಮಹತ್ವದ ಹಾಗೂ ಪ್ರತಿಯೊಬ್ಬ ಭಾರತೀಯನೂ ಕೂಡಾ ಹೆಮ್ಮೆ ಪಡುವಂತಹ ಪರ್ವ ದಿನ ಇಂದು. ಆಗಸ್ಟ್ 15 ರ ಸ್ವತಂತ್ರ ದಿನವೆಂದರೆ ಇದು ವಿಶ್ವದಾದ್ಯಂತ ನೆಲೆಸಿರುವ ಎಲ್ಲಾ ಭಾರತೀಯರ ಪಾಲಿಗೂ ಕೂಡಾ ಹೆಮ್ಮೆ ಪಡುವ ದಿನವಾಗಿದ್ದು, ಇಂದು ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ಭಾರತೀಯರು ಕೂಡಾ ಸಂಭ್ರಮದಿಂದ ಈ ದಿನವನ್ನು ಆಚರಣೆ ಮಾಡುತ್ತಿದ್ದಾರೆ. ಈ ಪರ್ವದಿನದಂದು ಅನ್ಯ ರಾಷ್ಟ್ರಗಳು ಕೂಡಾ ಭಾರತಕ್ಕೆ ಶುಭಾಶಯಗಳನ್ನು ಕೋರಿದೆ.

ಭಾರತದಲ್ಲಿರುವ ಅಮೆರಿಕಾ ರಾಯಭಾರಿ ಕಛೇರಿ ವಿಭಿನ್ನವಾದ ರೀತಿಯಲ್ಲಿ ಸ್ವತಂತ್ರ ದಿನವನ್ನು ಆಚರಣೆ ಮಾಡಿದೆ. ಅಮೆರಿಕಾ ತನ್ನ ಮಿತ್ರ ರಾಷ್ಟಕ್ಕೆ ಸ್ವತಂತ್ರ ದಿನಾಚರಣೆಯ ಶುಭಾಶಯಗಳು ಎಂದು ಹಾರೈಸಿದೆ.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಟ್ವೀಟ್ ಮಾಡಿ ಸ್ವಾತಂತ್ರ್ಯ ದಿನದಂದು ನರೇಂದ್ರ ಮೋದಿ ಮತ್ತು ಭಾರತದ ಜನರಿಗೆ ಶುಭಾಶಯಗಳು. ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಆಳವಾದ ಸ್ನೇಹ ಮತ್ತು ಪಾಲುದಾರಿಕೆಯನ್ನು ಭರವಸೆ, ಗೌರವ ಮತ್ತು ಸಮಾನತೆಯ ಮೌಲ್ಯಗಳ ಮೇಲೆ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಎಂದಿದ್ದಾರೆ.

ಭಾರತದ ಮಿತ್ರ ರಾಷ್ಟ್ರ ಇಸ್ರೇಲ್ ತನ್ನ ಟ್ವೀಟ್ ನಲ್ಲಿ ಉತ್ತಮ ಗೆಳೆಯ ಪ್ರಧಾ‌ನಿ ನರೇಂದ್ರ ಮೋದಿ ಮತ್ತು ಭಾರತದ ಎಲ್ಲಾ ಪ್ರಜೆಗಳಿಗೆ ಸ್ವತಂತ್ರ ದಿನಾಚರಣೆಯ ಶುಭಾಶಯ ಎಂದು ಟ್ವೀಟ್ ಮಾಡಿದೆ. ಭಾರತದ ಮತ್ತೊಂದು ಮಿತ್ರ ರಾಷ್ಟ್ರವಾದ ರಷ್ಯಾ ಕೂಡಾ ಶುಭಾಶಯವನ್ನು ಕೋರಿದ್ದು, ಇದರ ಜೊತೆಗೆ ಚೀನಾ ಸೇರಿದಂತೆ ಭಾರತದ ನೆರೆಹೊರೆಯ ರಾಷ್ಟ್ರಗಳು ಹಾಗೂ ವಿಶ್ವದ ಇತರೆ ರಾಷ್ಟ್ರಗಳು ಕೂಡಾ ಇಂದು ವಿಶೇಷ ಶುಭಾಶಯವನ್ನು ಕೋರಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here