ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಎರಡು ಲಕ್ಷದ ಗಡಿಯತ್ತ ನಡೆದಿದೆ. ಸೋಮವಾರ ಹೊಸದಾಗಿ 7512 ಪ್ರಕರಣಗಳು ದಾಖಲಾಗಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1,92,174 ಆಗಿದ್ದು ಇದರಲ್ಲಿ 94,879 ಮಂದಿ ಗುಣಮುಖರಾಗಿ ಮನೆಗಳಿಗೆ ಸೇರಿದ್ದಾರೆ. ಒಂದೇ ದಿನದಲ್ಲಿ ಸಾವಿನ ಸಂಖ್ಯೆ 174 ಆಗಿದ್ದು, ದೇಶದಲ್ಲಿ ಕೊರೊನಾ ಸೋಂಕಿನಿಂದ ಸಂಭವಿಸಿರುವ ಒಟ್ಟು ಸಾವುಗಳ ಸಂಖ್ಯೆ 5394 ಕ್ಕೆ ಏರಿದೆ. ಇನ್ನು ಕೊರೊನಾ ಪ್ರಕರಣಗಳು ಅತಿ ಹೆಚ್ಚು ದಾಖಲಾಗಿರುವ ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಇಟಲಿಯ ನಂತರದ ಸ್ಥಾನವನ್ನು ಪಡೆದು 7 ಸ್ಥಾನವನ್ನು ತಲುಪಿದೆ.

ಭಾರತದಲ್ಲಿ ಸೋಂಕಿತರ ಸಂಖ್ಯೆ ಹೀಗೆ ದಿನೇ ದಿನೇ ಹೆಚ್ಚಿದರೆ ಬಹುಶಃ ಮುಂಬರುವ ದಿನಗಳಲ್ಲಿ ಇಟಲಿ ಭಾರತವನ್ನು ಹಿಂದಿಕ್ಕಿ ಮುಂದಕ್ಕೆ ಹೋಗುವ ಸಾಧ್ಯತೆಗಳು ಇವೆ. ದೇಶದ ರಾಜಧಾನಿ ಎನಿಸಿದ ದೆಹಲಿಯಲ್ಲಿ ಕೊರೊನಾ ಪ್ರಕರಣಗಳು 20 ಸಾವಿರದ ಗಡಿ ತಲುಪಿದ್ದರೆ, ತಮಿಳು ನಾಡಿನಲ್ಲಿ ಇದು 23 ಸಾವಿರ ದಾಟಿದೆ, ಗುಜರಾತಿನಲ್ಲಿ ಈ ಪ್ರಮಾಣ 17 ಸಾವಿರದ ಗಡಿ ದಾಟಿದೆ. ಆದರೆ ಇದೇ ಸಂದರ್ಭದಲ್ಲಿ
ದೇಶದಲ್ಲಿ 94 ಸಾವಿರಕ್ಕಿಂತ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ ಎಂಬುದು ಒಂದು ಒಳ್ಳೆಯ ಸುದ್ದಿ ಎನ್ನಬಹುದಾಗಿದೆ.

ದೇಶದಲ್ಲಿ ಲಾಕ್ ಡೌನ್ ನ ಐದನೇ ಹಂತ ಈಗ ಮುಂದುವರೆದಿದ್ದು, ಪ್ರಸ್ತುತ ಕೆಲವು ಸಡಿಲಿಕೆ ಗಳನ್ನು ಕೂಡಾ ನೀಡಲಾಗಿದ್ದು, ಜನ ಜೀವನ ಸಾಮಾನ್ಯವಾಗುತ್ತಿದೆ. ಆದರೂ ಸಂಪೂರ್ಣ ಕೊರೊನಾ ಮುಕ್ತವಾಗಿರದ ಕಾರಣ ಎಲ್ಲಿ ಸೋಂಕು ಹರಡುವುದೋ ಎಂಬ ಭೀತಿಯಂತೂ ಪ್ರಸ್ತುತ ಎಲ್ಲೆಡೆ ಇದ್ದೇ ಇದೆ. ಕೊರೊನಾ ಮೆರೆಯುತ್ತಿರುವ ಅಟ್ಟಹಾಸ ಯಾವಾಗ ಅಂತ್ಯವಾಗಲಿದೆಯೆಂದು ಕಾದು ಕೂರುವ ಪರಿಸ್ಥಿತಿ ನೆಲೆಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here