ಸದ್ಯ ಭಾರತ ಕ್ರಿಕೆಟ್ ತಂಡಕ್ಕೆ ಮುಟ್ಟಿದ್ದೆಲ್ಲಾ ಚಿನ್ನ . ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಸೀರೀಸ್ ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿದೆ. ಇಂದು ಕಲ್ಕತಾದ ಈಡನ್​ಗಾರ್ಡನ್ಸ್​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್​ಇಂಡೀಸ್​ ಭಾರತ ಐದು ವಿಕೆಟ್ ಗಳ‌ ಭರ್ಜರಿ‌ ಜಯ ಗಳಿಸಿದೆ.ಭಾರತ ಕ್ರಿಕೆಟ್ ತಂಡದ ಆಟಗಾರರ ಆಲ್ ರೌಂಡ್ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.ಅದರಲ್ಲೂ ಭಾರತದ ಯುವ ಬೌಲರ್ ಗಳು ಉತ್ತಮ ಬೌಲಿಂಗ್ ದಾಳಿ ನಡೆಸಿದ ಕಾರಣ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮನ್ ಗಳಿಗೆ ಭಾರತದ ಬೌಲರ್ ಗಳು ಕಂಟಕವಾದರು.

ಟಾಸ್​ಗೆದ್ದ ಭಾರತ ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತ್ತು. ವೆಸ್ಟ್ಇಂಡೀಸ್​ ತನ್ನ ಎಂಟು ವಿಕೆಟ್​ ಕಳೆದುಕೊಂಡು 109ರನ್​ ಗಳಿಸಿದೆ. ಶಾಯ್ ಹೋಪ್ 14, ದಿನೇಶ್ ರಾಮ್‌ದಿನ್ 2, ಶಿಮ್ರಾನ್​ ಹ್ಯಾಟ್ಮೇರ್​ 10, ಕೀರಾನ್​ ಪೊಲ್ಲಾರ್ಡ್​ 14, ರೋವ್‌ಮ್ಯಾನ್ ಪೊವೆಲ್ 4, ನಾಯಕ ಕಾರ್ಲೋಸ್ ಬ್ರಾತ್‌ವೇಟ್ 4, ಡರ್ರೆನ್​ ಬ್ರಾವೋ 5, ಫಾಬಿಯಾನ್‌ ಆಲನ್‌ 27, ಕಿಮೋ ಪೌಲ್​ ಅಜೇಯ 15 ಹಾಗೂ ಖೇರಿ ವೈರೆ ಅಜೇಯ 9 ರನ್​ ಗಳಿಸಿದರು.

ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ವೆಸ್ಟ್
ವಿಂಡೀಸ್ ನೀಡಿದ 110 ರನ್​ಗಳ ಗುರಿಯನ್ನ ಬೆನ್ನಟ್ಟಿತು. ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಪಡೆ, ಐದು ವಿಕೆಟ್​ಗಳನ್ನ ಕಳೆದುಕೊಂಡು ಗುರಿ ಮುಟ್ಟಿತು. 17.5 ಓವರ್​​ನಲ್ಲಿ ಟೀಂ ಇಂಡಿಯಾ 110 ರನ್​​ಗಳ ಗುರಿ ಮುಟ್ಟಿತು. ಭಾರತದ ಪರ ರೋಹಿತ್ ಶರ್ಮಾ 6, ಶಿಖರ್ ಧವನ್ 3, ಲೋಕೇಶ್ ರಾಹುಲ್ 16, ರಿಶಬ್ ಪಂಥ್ 1, ಮುನೀಷ್ ಪಾಂಡ್ಯ 19, ದಿನೇಶ್ ಕಾರ್ತಿಕ್ 34, ಕೃನಲ್ ಪಾಂಡ್ಯ 19 ರನ್​​ ಗಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here