ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಅಪರೂಪವಾದ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು‌ ಅಲ್ಲಿ ನಡೆದ ಮನ ಮಿಡಿಯುವ ಒಂದು ಸನ್ನಿವೇಶ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ನಲ್ಲಿ ಕಳೆದ ಬುಧವಾರ ಭಾರತೀಯ ವಾಯು ಸೇನೆಯ ಎಂಐ-17 ಯುದ್ಧ ವಿಮಾನ ಪತನವಾದಾಗ ಪೈಲಟ್ ಸಿದ್ಧಾರ್ಥ ವಸಿಷ್ಠ ಅವರು ಹುತಾತ್ಮರಾಗಿದ್ದರು. ಅವರ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಚಂಡೀಗಢದಲ್ಲಿ ನೆರವೇರಿಸಲಾಯಿತು. ಆ ಸಂದರ್ಭದಲ್ಲಿ ಅಲ್ಲಿ ನೆರೆದ ಬಂಧು ಮಿತ್ರರೆಲ್ಲಾ ಸಿದ್ಧಾರ್ಥ್ ಅವರು ಕಡಿಮೆ ವಯಸ್ಸಿನಲ್ಲೇ ಅಮಿತವಾದುದನ್ನು ಸಾಧಿಸಿದ್ದಾರೆ, ಆದರೆ ಈ ವಯಸ್ಸಿನಲ್ಲೇ ಎಲ್ಲರನ್ನೂ ಅಗಲಿದರೆಂಬ ದುಃಖದಿಂದ ಕಣ್ಣೀರು ಸುರಿಸಿದ್ದುಂಟು. ಆದರೆ ಅವರ ಪತ್ನಿಯ ಭಾವನೆಗಳು ನಿಜಕ್ಕೂ ಪ್ರತಿಯೊಬ್ಬರಲ್ಲೂ ಒಂದು ಆತ್ಮ ವಿಶ್ವಾಸ ಮೂಡಿಸುವಂತಿತ್ತು.

ಕಣ್ಣಲ್ಲಿ ದುಃಖದ ಸಾಗರವೇ ಅಡಗಿದ್ದರೂ ಅವರು ದುಃಖವನ್ನು ಕಣ್ಣಿನಿಂದ ಹೊರಬರದಂತೆ ತಡೆದು ಒಬ್ಬ ವೀರ ಯೋಧನಿಗೆ ವಿರೋಚಿತವಾದ ಅಂತಿಮ ಬೀಳ್ಕೊಡುಗೆಯನ್ನು ಕೊಟ್ಟಿದ್ದಾರೆ. ಮೂವತ್ತೊಂದು ವರ್ಷದ ಸಿದ್ದಾರ್ಥ ವಸಿಷ್ಠ ಅವರ ಪತ್ನಿ ಅವರ ಮುಂದೆ ಭಾವುಕರಾಗದೆ ನಿಂತಿದ್ದು, ನೋಡಿದವರ ಮನ ಕಲಕುವಂತೆ ಕಂಡಿತ್ತು. ಪತಿಯ ಪಾರ್ಥಿವ ಶರೀರದ ಮುಂದೆ ಆಕೆ ಯೂನಿಫಾರಂ ಧರಿಸಿ ನಿಂತ ದೃಶ್ಯ ಒಬ್ಬ ಹುತಾತ್ಮ ಯೋಧನಿಗೆ ನಿಜ ಅರ್ಥದಲ್ಲಿ ಗೌರವ ವಂದನೆಯನ್ನು ನೀಡುತ್ತಿರುವಂತೆ ಕಂಡಿತ್ತು. ಯೋಧರ ಪತ್ನಿಯರು ನಿಜಕ್ಕೂ ಧೀರ ನಾರಿಯರೇ ಎಂಬುದನ್ನು ನಾವೆಲ್ಲಾ ಒಪ್ಪಲೇ ಬೇಕು.

ಸಿದ್ಧಾರ್ಥ ವಸಿಷ್ಠ ಅವರ ಪತ್ನಿ ಆರತಿ ಸಿಂಗ್ ಒಬ್ಬ ಐಎಎಸ್ ಅಧಿಕಾರಿಯಾಗಿದ್ದು, ಶ್ರೀನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಎರಡು ವರ್ಷದ ಮಗನಿದ್ದಾನೆ. ಅವರು ಪತಿಯ ಪಾರ್ಥಿವ ಶರೀರದ ಮುಂದೆ ನಿಂತ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಆಕೆಯ ದಿಟ್ಟತನಕ್ಕೆ ಎಲ್ಲರೂ ತಲೆ ಬಾಗುವಂತಿದೆ. ಸಿದ್ಧಾರ್ಥ ಅವರ ಕುಟುಂಬವೇ ಸೈನ್ಯಕ್ಕೆ ತಮ್ಮನ್ನು ತಾವು ಮೀಸಲಿರಿಸಿದ್ದಾರೆ. ಅವರ ಕುಟುಂಬದ ಹಲವರು ಸೇನೆಯ ವಿವಿಧ ವಿಭಾಗಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಕೇರಳ ಪ್ರವಾಹ ಸಮಯದಲ್ಲೂ ಕೂಡಾ ವಸಿಷ್ಠ ಅವರು ಜನರ ನೆರವಿಗೆ ಧಾವಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here