ಭಾರತೀಯ ಸೈ‌ನಿಕರು ಗಡಿಯಲ್ಲಿ ಮಾನವೀಯತೆಯ‌ನ್ನು ಮೆರೆದಿದ್ದಾರೆ. ದೇಶಗಳ ನಡುವಿನ ದ್ವೇಷಕ್ಕಿಂತ, ಮನುಷ್ಯರ ನಡುವಿನ ಮಾನವೀಯತೆ ದೊಡ್ಡದು ಎಂಬುದನ್ನು ಸಾರಿ ಹೇಳಿದ್ದಾರೆ. ಗಡಿಯಲ್ಲಿ ಒಂದು ಮನ ಮಿಡಿಯುವ ಘಟನೆ ನಡೆದಿದೆ. ಶತೃಗಳ ನಾಶಕ್ಕೆ ನಿಂತ ಸೈನಿಕರು ಮಾಡಿರುವ ಕೆಲಸ ಈಗ ಶ್ಲಾಘನೆಗೆ ಪಾತ್ರವಾಗಿದೆ.
ಗಡಿಯಾಚೆಗೆ ಇರುವವರು ಭಾರತದ ಶತೃ ರಾಷ್ಟ್ರದವರು ಎಂದು ತಿಳಿದಿದ್ದರೂ,‌ ಅಲ್ಲಿನ ಸಾಮಾನ್ಯ ನಾಗರಿಕರ ಬಗ್ಗೆ ಮಾನವೀಯತೆ ಮಿಡಿಯುವ ಔದಾರ್ಯ ನಮ್ಮ ಭಾರತೀಯ ಸೈನಿಕರದು.

ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಹರಿಯುವ ಕಿಶನ್ ಗಂಗಾ ನದಿಯಿಂದ ಭಾರತದ ಗಡಿಯನ್ನು ದಾಟಿ 7 ವರ್ಷದ ಬಾಲಕನ ಶವವೊಂದು ಕೊಚ್ಚಿಕೊಂಡು ಬಂದಿದೆ. ಪಾಕ್ ಆಕ್ರಮಿತ ಕಾಶ್ಮೀರದ ಗುರೆಜ್ ಗ್ರಾಮದ ಅಚೂರಾ ಸಿಂಧಿಯಾಲ್ ಪ್ರದೇಶದ ಆದಿಲ್ ಅಬ್ದುಲ್ ಶೇಖ್ ಎಬ ಬಾಲಕನು ನದಿಯಲ್ಲಿ ಮೀನು ಹಿಡಿಯಲು ಹೋದಾಗ, ದುರಾದೃಷ್ಟವಶಾತ್ ನದಿ ನೀರಿಗೆ ಜಾರಿ ಬಿದ್ದು ಮೃತನಾಗಿ, ಆತನ ಶವ ಪಾಕ್ ಗಡಿ ದಾಟಿ ಭಾರತದೊಳಕ್ಕೆ ಪ್ರವೇಶಿಸಿತ್ತು.
ಬಾಲಕನ ಶವದ ಕುರಿತು ಸೈನಿಕರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಆಗ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಪಾಕಿಸ್ತಾನ ಸೇನಾಧಿಕಾರಿಗಳೊಂದಿಗೆ ಮಾತನಾಡಿ, ಬಾಲಕನ ಶವವನ್ನು ಪಾಕ್ ಸೈನ್ಯಕ್ಕೆ ಹಸ್ತಾಂತರ ಮಾಡಿದ್ದಾರೆ. ತಮ್ಮ ಮಗನ ಶವ ಹಸ್ತಾಂತರಿಸಲು ಬಾಲಕನ ತಂದೆ ಭಾರತೀಯ ಸೇನೆಗೆ ಮಾಡಿದ ಮನವಿಯನ್ನು ಪುರಸ್ಕರಿಸಿದೆ ಭಾರತೀಯ ಸೇನೆ. ಅದಾದ ಮೇಲೆ ಬಾಲಕನ ಶವವನ್ನು ಸೈನಿಕರೇ ಹೊತ್ತು ತಂದು ಪಾಕ್ ಸೇನೆಗೆ ಹಸ್ತಾಂತರ ಮಾಡಿದ್ದಾರೆ. ಬಾಲಕನ ತಂದೆಯ ಮನವಿಗೆ ಮಿಡಿದ ಭಾರತೀಯ ಸೇನೆ ಅಂತಾರಾಷ್ಟ್ರೀಯ ಗಡಿ ನಿಯಮವನ್ನು ಮೀರಿ, ಮಾನವೀಯತೆಯನ್ನು ಎತ್ತಿ ಹಿಡಿದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here