ಭಾರತೀಯ ಸೇನೆ ಮತ್ತೊಮ್ಮೆ ತನ್ನ ಔನತ್ಯವನ್ನು ಜಗತ್ತಿಗೆ ಸಾರುವಂತಹ ಕೆಲಸವನ್ನು ಮಾಡಿದೆ‌. ಆ ಮೂಲಕ ಮಾನವೀಯತೆ ತೋರುವುದರಲ್ಲೂ ತಾವು ಹಿಂದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಭಾರತೀಯ ಸೇನೆಯಿಂದ ಹತರಾದಂತಹ ಇಬ್ಬರು ಪಾಕ್ ಸೈನಿಕರ ಮೃತದೇಹವನ್ನು, ತಮ್ಮ ಸುಪರ್ದಿಗೆ ಪಡೆದುಕೊಳ್ಳಲು, ಪಾಕಿಸ್ತಾನದ ಸೇನೆಯು ಶ್ವೇತ ಬಾವುಟವನ್ನು ತೋರಿಸಿ, ನಾವು ಶರಣಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿದಾಗ, ಅವರಿಗೆ ಹತರಾದ ಸೈನಿಕರ ಮೃತ ದೇಹಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ ಭಾರತೀಯ ಸೇನೆ. ಸೇನೆಯ ಈ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

ಪಾಕಿಸ್ತಾನದ ಸೈನಿಕರು ಕದನ ವಿರಾಮವನ್ನು ಉಲ್ಲಂಘನೆ ಮಾಡಿದ ಕಾರಣ, ಇದೇ ಸೆಪ್ಟೆಂಬರ್ 10, 11 ರಂದು ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಾಜಿಪುರ ಸೆಕ್ಟರ್ ನಲ್ಲಿ ನಡೆಸಿದ ಗುಂಡಿನ ಧಾಳಿಯಲ್ಲಿ ಪಂಜಾಬ್ ಪ್ರಾಂತ್ಯದ ಗುಲಾಮ್ ರಸೂಲ್ ಎಂಬ ಸೈನಿಕನು ಬಲಿಯಾಗಿದ್ದನು. ಇದಾದ ನಂತರ ರಸೂಲ್ ದೇಹವನ್ನು ಪಡೆಯಲು ಪಾಕ್ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ ಮಾಡಿ, ನಡೆಸಿದ ಗುಂಡಿನ ಭಾರತೀಯ ಸೈನ್ಯ ನೀಡಿದ ಉತ್ತರದಲ್ಲಿ ಮತ್ತೊಬ್ಬ ಪಾಕಿಸ್ತಾನಿ ಸೈನಿಕ ಹತನಾದನು.

ಈ ಸೈನಿಕರ ಮೃತದೇಹವನ್ನು ಪಡೆದುಕೊಳ್ಳಲು ಬೇರೆ ಯಾವ ದಾರಿಯಿಲ್ಲದೆ, ಪಾಕಿಸ್ತಾನದ ಸೈನಿಕರು ಬಿಳಿ ಧ್ವಜವನ್ನು ತೋರಿಸಿದ್ದಾರೆ. ಶ್ವೇತ ಧ್ವಜ ತೋರಿಸಿದ್ದರಿಂದ ಭಾರತೀಯ ಸೇನೆ ಕೂಡಾ ಅವರ ಮೇಲೆ ಗುಂಡಿನ ಧಾಳಿ ನಡೆಸದೆ ಮೃತ ದೇಹಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟು, ಶರಣಾಗತಿ ಕೋರಿದವರನ್ನೂ ಸಹಾ ಗೌರವಿಸುವ ಸಂಸ್ಕೃತಿ ನಮ್ಮದು ಎಂದು ಭಾರತೀಯ ಸೈನಿಕರು ತೋರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here