ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸದ್ಯಕ್ಕೆ ಯುಎಇ‌ ನಲ್ಲಿ ನೆಲೆಸಿರುವ ಅವರು ಪುಲ್ವಾಮ ಧಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಎದ್ದಿರುವ ಸಮಸ್ಯೆಯ ಕುರಿತಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ. ಪಾಕಿಸ್ತಾನ ಏನಾದರೂ ಒಂದು ನ್ಯೂಕ್ಲಿಯರ್ ಬಾಂಬಿನಿಂದ ಭಾರತದ ಮೇಲೆ ಧಾಳಿ ಮಾಡಲು ಯತ್ನ ಮಾಡಿದರೆ, ಭಾರತವು 20 ನ್ಯೂಕ್ಲಿಯರ್ ಬಾಂಬ್ ಗಳ ಮೂಲಕ ಧಾಳಿ ಮಾಡಿ ಸಂಪೂರ್ಣ ಪಾಕಿಸ್ತಾನವನ್ನು ನಾಶ ಮಾಡುತ್ತದೆ ಎಂದು ತಿಳಿಸಿದ್ದಾರೆ. ಸದ್ಯ ಅವರು ಸ್ವಯಂ ಗಡಿಪಾರಿನಿಂದ ಪಾಕಿಸ್ತಾನದ ಹೊರಗೆ ನೆಲೆಸಿದ್ದಾರೆ. ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ ನಲ್ಲಿ ನಡೆದ ಸಮಾವೇಶವೊಂದರಲ್ಲಿ ಅವರು ಈ ರೀತಿ ಹೇಳಿದ್ದಾರೆ.

ಪುಲ್ವಾಮ ಧಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧಗಳು ಅಪಾಯದ ಮಟ್ಟವನ್ನು ಮೀರಿದೆಯೆಂದು ಹೇಳಿದ ಅವರು ಯುದ್ಧವೇನಾದರೂ ಸಂಭವಿಸಿದರೆ ಪಾಕಿಸ್ತಾನ ಒಂದು ನ್ಯೂಕ್ಲಿಯರ್ ಬಾಂಬನ್ನು ಬಳಸಿದರೆ ಅದಕ್ಕೆ ತಿರುಗೇಟು ನೀಡಲು ಭಾರತವು ಇಪ್ಪತ್ತು ನ್ಯೂಕ್ಲಿಯರ್ ಬಾಂಬುಗಳನ್ನು ಬಳಸುತ್ತದೆ ಎಂದಿದ್ದಾರೆ. ಹಾಗೇನಾದರೂ ಆದರೆ ಸಂಪೂರ್ಣ ಪಾಕಿಸ್ತಾನ ನಾಶವಾಗಿ ಬಿಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅದರ ಜೊತೆಗೆ ಅವರು ಇದಕ್ಕೊಂದು ಉಪಾಯ ಕೂಡಾ ಇದೆ ಎಂದೂ ಕೂಡಾ ಹೇಳಿದ್ದಾರೆ.

ಭಾರತವನ್ನು ಎದುರಿಸಬೇಕಾದರೆ ಮೊದಲು ಪಾಕಿಸ್ತಾನ 50 ನ್ಯೂಕ್ಲಿಯರ್ ಬಾಂಬ್ ಗಳನ್ನು ಇಟ್ಟುಕೊಂಡು ಧಾಳಿ ಮಾಡಬೇಕಿದೆ. ಆಗ ಭಾರತ ಇಪ್ಪತ್ತು ಬಾಂಬ್‌ಗಳನ್ನು ಬಳಸಿ ಪಾಕಿಸ್ತಾನದ ಮೇಲೆ ಧಾಳಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಪಾಕಿಸ್ತಾನದ ಸೈನ್ಯ ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದಾರೆ‌. ಪುಲ್ವಾಮ ಧಾಳಿ ನಡೆದ ಸುಮಾರು ಎಂಟು ದಿನಗಳ ನಂತರ ಇದೀಗ ಪಾಕಿಸ್ತಾನದ ಮಾಜಿ ಅಧ್ಯಕ್ಷ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರ ಈ ಮಾತುಗಳಲ್ಲಿ ಅವರು ಪಾಕಿಸ್ತಾನದ ರಾಜಕೀಯಕ್ಕೆ ಮರಳಲು ಮಾಡುತ್ತಿರುವ ಯತ್ನ ಕೂಡಾ ಇದಾಗಿರಬಹುದು ಎಂಬಂತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here