ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನಾಪಡೆ ಮತ್ತೊಂದು ಧಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಭಾರತ ಮತ್ತೊಂದು ಸೂಪರ್ ಶಾಕ್ ನೀಡಿದೆ. ದಾಳಿಯಿಂದ ನೀಲಂ ಝೇಲಂ ಪ್ರಾಜೆಕ್ಟ್ ಗೆ ಭಾರೀ ಹಾನಿ ಉಂಟಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪೀ.ಓ.ಕೆ ಬಳಿ ಮೂವತ್ತು ಕಿಲೋ ಮೀಟರ್ ಒಳನುಗ್ಗಿ ಧಾಳಿ ನಡೆಸಿರುವ ಭಾರತೀಯ ಸೇನೆ ಹಲವಾರು ಉಗ್ರರರನ್ನು ಸೆದೆಬಡಿದಿದೆ. ಈ ಧಾಳಿಯ ವೇಳೆ ಪಾಕಿಸ್ತಾನದ ನೀಲಂ ಝೇಲಂ ಪ್ರಾಜೆಕ್ಟ್ ಗೆ ಅನಾಹುತ ಎದುರಾಗಿದೆ. ಪಾಕಿಸ್ತಾನದ ಮಹಾತ್ವಾಂಕ್ಷೆಯ ಜಲವಿದ್ಯುತ್ ಯೋಜನೆ ಇದಾಗಿದ್ದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಈ ಧಾಳಿ ನಡೆದಿದೆ.

ನಿನ್ನೆಯಷ್ಟೇ ಭಾರತ ಸರ್ಕಾರ ಕಾಶ್ಮೀರಕ್ಕೆ ಮೂವತ್ತೈದು ಸಾವಿರ ಹೆಚ್ಚುವರು ಸೈನಿಕರನ್ನು ಕಳುಹಿಸಿದ್ದು ಭಾರತೀಯರ ಪವಿತ್ರ ಅಮರನಾಥ ಯೋಜನೆಯನ್ನೂ ರದ್ದುಗೊಳಿಸಿದ್ದು ಭಾರತ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ವಶಪಡಿಸಿಕೊಳ್ಳಲು ಮುಂದಾಗಿದೆಯಾ ಎಂಬ ಅನುಮಾನ ಮೂಡಿದೆ. ಅಲ್ಲದೆ ಮೂವತ್ತು ಕಿಲೋಮೀಟರ್ ದೂರದ ವರೆಗೆ ಭಾರತೀಯ ಸೇನೆ ಧಾಳಿ ನಡೆಸುವ ಸಂಧರ್ಭದಲ್ಲಿ ಹಲವು ಉಗ್ರರ ಅಡಗುತಾಣಗಳ ದ್ವಂಶವಾಗಿವೆ ಎಂಬ ಮಾಹಿತಿ ದೊರಕಿದೆ. ಬಾಲಕೋಟ್ ಧಾಳಿಯ ನಂತರ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಹೈ ಅಲರ್ಟ್ ಆಗಿದೆ.

ವರ್ಷಾರಂಭದಲ್ಲಿ ಪುಲ್ವಾಮ ಧಾಳಿ ನಡೆಸಿದ್ದ ಉಗ್ರರು ಭಾರತ ಐವತ್ತಕ್ಕೂ ಹೆಚ್ಚು ಸೈನಿಕರನ್ನು ಆಹುತಿ ಪಡೆದಿದ್ದರು. ಇದಕ್ಕೆ ಪ್ರತ್ಯುತ್ತರ ಕೊಟ್ಟ ಭಾರತೀಯ ಸೇನಾಪಡೆಗಳು ಬಾಲಕೋಟ್ ಪಾಕ್ ಉಗ್ರ ನೆಲೆಗಳ ಮೇಲೆ ಧಾಳಿ ನಡೆಸಿ ಮುನ್ನೂರಕ್ಕು ಅಧಿಕ ಉಗ್ರರನ್ನು ಸೆದೆ ಬಡಿದಿದ್ದರು. ನಂತರ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ಮತ್ತೆ ವಶಪಡಿಸಿಕೊಳ್ಳಬೇಕು ಎಂಬ ಕೂಗು ಕೇಳಿಬಂದಿದ್ದು ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಂತಹ ಸಾಹಸಕ್ಕೆ ಸ್ಕೆಚ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here