ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ  ದಾಳಿಯಲ್ಲಿ ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಯೋಧ ರಾಹುಲ್ ಭೈರು ಸುಳಗೇಕರ (25) ಹುತಾತ್ಮರಾಗಿದ್ದಾರೆ.ಪಾಕ್ ಪಡೆಗಳು ಗುರುವಾರ ರಾತ್ರಿ ಕದನ ವಿರಾಮ ಉಲ್ಲಂಘಿಸಿ ಜಮ್ಮು-ಕಾಶ್ಮೀರದ ಕೃಷ್ಣಘಾಟಿ ಸೆಕ್ಟರ್​ನಲ್ಲಿ ಅಪ್ರಚೋದಿತ ದಾಳಿ ಆರಂಭಿಸಿದ್ದವು. ಪಾಕ್​ ಪುಂಡಾಟಕ್ಕೆ ಭಾರತದ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲಾರಂಭಿಸಿದವು. ಈ ವೇಳೆ ರಾಹುಲ್ ಸುಳಗೇಕರ ಗುಂಡು ತಗುಲಿ ವೀರಮರಣ ಹೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ  ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಯೋಧ ರಾಹುಲ್ ಸುಳಗೇಕರ (24)ನಮ್ನನ್ನು ಅಗಲಿದ್ದಾರೆ .

ರಾತ್ರಿ 2.30 ರ ಸುಮಾರಿಗೆ ಜಮ್ಮು- ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ನಡೆಸಿತು. ಇದಕ್ಕೆ ಭಾರತೀಯ ಯೋಧರು ಪ್ರತಿಯಾಗಿ ಪ್ರತ್ಯುತ್ತರ ನೀಡಿದ್ದಾರೆ. ಈ ವೇಳೆ ಗುಂಡು ತಗುಲಿ ರಾಹುಲ್ ವೀರಮರಣವನ್ನಪ್ಪಿದ್ದಾರೆ.ನಾಲ್ಕು ವರ್ಷಗಳ ಹಿಂದೆಯಷ್ಟೇ ಸೇನೆ ಸೇರಿದ್ದ ರಾಹುಲ್ ದೇಶ ಸೇವೆಯ ಕನಸು ಕಂಡಿದ್ದರು.

ಇತ್ತೀಚೆಗಷ್ಟೇ ಗಣೇಶ ಹಬ್ಬದ ವೇಳೆ ರಜೆ ಮೇಲೆ ಬಂದಿದ್ದ ರಾಹುಲ್ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ರಾಹುಲ್ ಅವರ ತಂದೆ ಕೂಡ ನಿವೃತ್ತ ಯೋಧರಾಗಿದ್ದಾರೆ. ಅವರ ಸಹೋದರ ಮಯೂರ್ ಅವರು ಕೂಡ ಸೇನೆಯಲ್ಲಿದ್ದಾರೆ. ಯೋಧ ರಾಹುಲ್ ಸುಳಗೇಕರ ಅವರ ಪಾರ್ಥೀವ ಶರೀರ ಶುಕ್ರವಾರ ಸಂಜೆ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here