ಸಂಸದ, ಟೀಮ್ ಇಂಡಿಯಾದ ಮಾಜಿ ಆಟಗಾರ ಆಗಿದ್ದ ಗೌತಮ್ ಗಂಭೀರ್ ಅವರು ಕೊರೊನಾ ವಿರುದ್ಧ ಹೋರಾಟಕ್ಕೆ, ಪಿಎಂ ಪರಿಹಾರ ನಿಧಿಗೆ ತಮ್ಮ ಎರಡು ವರ್ಷದ ವೇತನವನ್ನು ದೇಣಿಗೆಯಾಗಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅವರು ಸಂಸದರ ಒಂದು ತಿಂಗಳ ವೇತನದ ಜೊತೆಗೆ, ಸಂಸದರ ನಿಧಿಯಿಂದ ಒಂದು ಕೋಟಿ ರೂಪಾಯಿ ಮೊತ್ತವನ್ನು ಕೂಡಾ ನೀಡಿದ್ದರು. ವೈದ್ಯಕೀಯ ಪರಿಕರಗಳ ಖರೀದಿಗಾಗಿ ಅವರು ದೆಹಲಿ ಸರ್ಕಾರಕ್ಕೆ 50 ಲಕ್ಷ ರೂ ದೇಣಿಗೆ ಯನ್ನು ಸಹಾ ನೀಡಿದ್ದಾರೆ. ಅವರು ಹೆಚ್ಚೆಚ್ಚು ದೇಣಿಗೆಯನ್ನು ನೀಡಲು ಜನರು ಮುಂದಾಗಬೇಕೆಂಬ ಮನವಿಯನ್ನು ಕೂಡಾ ಮಾಡಿದ್ದಾರೆ.

ಇದೇ ವೇಳೆ ಬಾಲಿವುಡ್ ನಟ ಶಾರೂಖ್ ಖಾನ್ ತಮ್ಮ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮೀರ್ ಫೌಂಡೇಶನ್ ವತಿಯಿಂದ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸರ್ಕಾರಗಳಿಗೆ ಐವತ್ತು ಸಾವಿರ ಸುರಕ್ಷಿತ ಕಿಟ್ ಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಕಾಮನ್ ವೆಲ್ತ್ ಗೇಮ್ ನಲ್ಲಿ ಸ್ವರ್ಣ ಪದಕ ಪಡೆದ ಅಪೂರ್ವಿ ಚಂಡಾಲಾ ಅವರು ಐದು ಲಕ್ಷ ದೇಣಿಗೆಯನ್ನು ನೀಡಲು ಮುಂದಾಗಿದ್ದು, ಇದರಲ್ಲಿ ಮೂರು ಲಕ್ಷವನ್ನು ಪ್ರಧಾನಿಯವರ ಪರಿಹಾರ ನಿಧಿಗೆ, ಉಳಿದ ಎರಡು ಲಕ್ಷ ರಾಜಸ್ಥಾನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದಾರೆ.

ಇದೇ ಮಾರ್ಗದಲ್ಲಿ ನಡೆದ ಟೀಂ ಇಂಡಿಯಾದ ಆಟಗಾರರು ಕೂಡಾ ತಮ್ಮ ತಮ್ಮ ದೇಣಿಗೆ ನೀಡಿದ್ದಾರೆ. ಟಿಮ್ ಇಂಡಿಯಾ ನಾಯಕ ಕೊಹ್ಲಿ, ಕ್ರಿಕೆಟ್ ಆಟಗಾರರಾದ ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ, ಸುರೇಶ್ ರೈನಾ ಇನ್ನಿತರೆ ಹಲವು ಕ್ರೀಡಾಪಟುಗಳು ಪಿಎಂ ಅವರ ಪರಿಹಾರ ನಿಧಿಗೆ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ದೇಣಿಗೆಯನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here