ಚೀನಾ ಮತ್ತು ಅಮೆರಿಕ ಸೇರಿದಂತೆ ಇಡೀ ಜಗತ್ತು ಕರೋನವೈರಸ್ ವಿರುದ್ಧ ಹೋರಾಡಲು ವಿಫಲವಾಗಿರುವ ನಡುವೆ ಭಾರತ ಮತ್ತೊಮ್ಮೆ ಇಡೀ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ದೇಶದಲ್ಲಿ ಕೊರೋನಾ ವಿರುದ್ಧ ಹೋರಾಡಬಹುದಾದ ಲಸಿಕೆ ಸಿದ್ಧಪಡಿಸಲಾಗುತ್ತಿದ್ದು ಪ್ರಾಯೋಗಿಕ ಪರೀಕ್ಷೆಗಳು ಕೂಡ ಪ್ರಾರಂಭವಾಗಿದೆ. ಶೀಘ್ರದಲ್ಲೇ ಈ ಲಸಿಕೆ ಭಾರತ ಸೇರಿದಂತೆ ವಿಶ್ವದಾದ್ಯಂತದ ಜನರ ಪ್ರಾಣ ಉಳಿಸಲು ಸಹಾಯಕವಾಗಲಿದೆ ಎಂದು ತಿಳಿದುಬಂದಿದೆ. ಲಸಿಕೆ ತಯಾರಕಾ ಕಂಪನಿ ಭಾರತ್ ಬಯೋಟೆಕ್ (Bharat Biotech) ಕರೋನಾ ವೈರಸ್ ನಿರೋಧಕ ಲಸಿಕೆಯನ್ನು ಕಂಡುಹಿಡಿದಿದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ದೇಶವು ತನ್ನ ಲಸಿಕೆಯನ್ನು ಸಿದ್ಧಪಡಿಸಿದೆ ಎಂದು ಕಂಪನಿಯ ಅಧ್ಯಕ್ಷ ಡಾ. ಕೃಷ್ಣ ಅಲ್ಲಾ ಹೇಳಿದರು. ಕರೋನಾ ವೈರಸ್ ಸೋಂಕಿನಿಂದ ರಕ್ಷಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾದ ದೇಶದ ಮೊದಲ ಲಸಿಕೆ ಇದಾಗಿದೆ. ಈ ಲಸಿಕೆಯನ್ನು ಕೋರೋ-ವ್ಯಾಕ್ (‘Coro Vac’) ಎಂದು ಹೆಸರಿಸಲಾಗಿದೆ. ವೈರಸ್ಸುಗಳಿಂದ ರಕ್ಷಿಸಲು ಇದನ್ನು ಮೂಗಿನಲ್ಲಿ ಹಾಕಲಾಗುತ್ತದೆ. ಕಂಪನಿಯು ಅಮೆರಿಕದಲ್ಲಿ ಈ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಡಾ. ಅಲ್ಲಾ ತಿಳಿಸಿದ್ದಾರೆ. ಅಮೆರಿಕಾದಲ್ಲಿ ಪ್ರಾಣಿ ಮತ್ತು ಮಾನವರ ಮೇಲೆ ಈ ಕ್ಲಿನಿಕಲ್ ಪ್ರಯೋಗಗಳು ಏಕಕಾಲದಲ್ಲಿ ನಡೆಯುತ್ತವೆ. ಈ ಕಾರಣದಿಂದಾಗಿ ಲಸಿಕೆ ಸುರಕ್ಷತಾ ಮಾನದಂಡಗಳನ್ನು ಅನುಮೋದಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅಮೆರಿಕಾದಲ್ಲಿ ಸುರಕ್ಷತಾ ಮಾನದಂಡಗಳನ್ನು ಅನುಮೋದಿಸಿದ ನಂತರ ಈ ಲಸಿಕೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಈ ಸ್ಥಳೀಯ ಕಂಪನಿಯು ಸಾಂಕ್ರಾಮಿಕ ಲಸಿಕೆಗಳನ್ನು ತಯಾರಿಸುವಲ್ಲಿ ಪರಿಣಿತಿ ಪಡೆದಿದೆ. ನಮ್ಮ ದೇಶದ ಈ ಕಂಪನಿಯು ವಿಶ್ವದ ಅನೇಕ ಪ್ರಮುಖ ಸಾಂಕ್ರಾಮಿಕ ಕಾಯಿಲೆಗಳಿಗೆ ಲಸಿಕೆ ಕಂಡು ಹಿಡಿಯುವಲ್ಲಿ ಅಗ್ರಸ್ಥಾನದಲ್ಲಿದೆ. ಹಿಂದೆ ಜಿಕಾ ವೈರಸ್ ಸೋಂಕು ಹರಡುತ್ತಿದ್ದಾಗ ಅದರಿಂದ ಜಗತ್ತನ್ನು ರಕ್ಷಿಸಲು ಲಸಿಕೆ ಕಂಡುಹಿಡಿದಿದ್ದು ಇಂಡಿಯಾ ಬಯೋಟೆಕ್ ಸಂಸ್ಥೆ. ಅಂತೆಯೇ ಈ ಕಂಪನಿಯು ಎಚ್ 1 ಎನ್ 1 ಸೋಂಕಿನ ಆರಂಭಿಕ ಲಸಿಕೆಯನ್ನು ಸಹ ಸಿದ್ಧಪಡಿಸಿತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here