ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಗೆದ್ದು ಆ ಸಂಭ್ರಮ ಕ್ರಿಕೆಟ್ ಅಭಿಮಾನಿಗಳಲ್ಲಿ ಇನ್ನೂ ಇದೆ. ಭಾರತೀಯ ಅಭಿಮಾನಿಗಳು ಒಂದೆಡೆ ಸಂಭ್ರಮಿಸುತ್ತಿದ್ದರೆ, ಅಲ್ಲೇ ಅಂದರೆ ಲಂಡನ್ ನ ಕ್ರೀಡಾಂಗಣದಲ್ಲಿ ಇಬ್ಬರು ಅಭಿಮಾನಿಗಳು ತಮ್ಮ ಹೊಸ ಜೀವನದ ಕಡೆಗೆ ಅಡಿಯಿಟ್ಟಿರುವ ಒಂದು ಅಪರೂಪದ ಘಟನೆ ನಡೆದಿದೆ. ಒಂದೆಡೆ ಇಂಡೋ-ಪಾಕ್ ಕ್ರಿಕೆಟ್ ನಡೆಯುತ್ತಿದ್ದರೆ, ಇನ್ನೊಂದೆಡೆ ಭಾರತೀಯ ಅಭಿಮಾನಿ ನಿಖಿಲ್ ಎನ್ನುವವರು , ತನ್ನ ಗೆಳತಿ ಅನ್ವಿತಾ ಗೆ ರಿಂಗ್ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿದ ಘಟನೆಯೊಂದು ನಡೆದಿದೆ.

ಹೈ ವೋಲ್ಟೇಜ್ ಕ್ರಿಕೆಟ್ ಪಂದ್ಯಾವಳಿಯಾದ್ದರಿಂದ ಗ್ಯಾಲರಿಯಲ್ಲಿ ಅಸಂಖ್ಯಾತ ಜನರು ತುಂಬಿದ್ದರು‌. ಆ ಜನಜಂಗುಳಿಯ ನಡುವೆಯೇ ನಿಖಿಲ್ ತಮ್ಮ ಗೆಳತಿಗೆ ಮಂಡಿಯೂರಿ, ಕೈ ಯಲ್ಲಿ ರಿಂಗ್ ಹಿಡಿದು ಪ್ರಪೋಸ್ ಮಾಡಿದ್ದು, ಅನಿರೀಕ್ಷಿತವಾಗಿ ಗೆಳೆಯನು ನೀಡಿದ ಪ್ರಪೊಸಲ್ ಕಡೆ ಅಚ್ಚರಿಯ ಕಣ್ಣುಗಳಿಂದ ನೋಡಿದ ಅನ್ವಿತ ಕೂಡಾ ಸಂತೋಷದಿಂದ ಪ್ರೇಮ ನಿವೇದನೆಯನ್ನು ಸ್ವೀಕಾರ ಮಾಡಿದ್ದಾರೆ. ಗೆಳೆಯನ ನಿರೀಕ್ಷೆಗೆ ಹಸಿರು ನಿಶಾನೆಯನ್ನು ನೀಡಿದ್ದಾರೆ ಅನ್ವಿತ.
ನಿಖಿಲ್ ಗ್ಯಾಲರಿಯಲ್ಲೇ ಗೆಳತಿಗೆ ಉಂಗುರ ತೊಡಿಸಿದ್ದಾರೆ.

ನೆರೆದಿದ್ದ ಜನರು, ಕ್ರಿಕೆಟ್‌ ಅಭಿಮಾನಿಗಳು ಕೂಡಾ ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದರು. ಅಲ್ಲಿ ನೆರೆದಿದ್ದವರು ಈ ಪ್ರೇಮಿಗಳಿಗೆ ಶುಭ ಹಾರೈಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸ್ವತಃ ಅನ್ವಿತ ಅವರು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ. ಇನ್ನು ನಿಖಿಲ್ ಗೆ ಒಂದೆಡೆ ಭಾರತ ಪಂದ್ಯದಲ್ಲಿ ಗೆದ್ದ ಸಂಭ್ರಮವಿದ್ದರೆ, ಇನ್ನೊಂದೆಡೆ ಅನ್ವಿತ ತಮ್ಮ ಪ್ರೇಮವನ್ನು ಒಪ್ಪಿಕೊಂಡ ಖುಷಿ ಸೇರಿ ಅವರ ಸಂತಸ ದುಪ್ಪಟ್ಟಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here