ಪೊಲೀಸ್ ಠಾಣೆ ಎಂದರೆ ಜನರಿಗೆ ಏನೋ ಒಂದು ರೀತಿಯ ಹಿಂಜರಿಕೆ, ಅಲ್ಲಿಗೆ ಹೋಗಲು ಹಿಂದೇಟು ಹಾಕುವುದಲ್ಲದೆ, ಪೋಲಿಸರ ವರ್ತನೆ ಹೇಗಿರುತ್ತದೆ ಎಂದೆಲ್ಲಾ ಆಲೋಚಿಸುತ್ತಾರೆ. ಆದರೆ ರಾಜಸ್ಥಾನದ ಬಿಕಾನೇರ್ ನ ಕಾಲೂ ಪೋಲಿಸ್ ಠಾಣೆ ಮಾತ್ರ ದೇಶದ ಎತರೆ ಎಲ್ಲಾ ಪೋಲಿಸ್ ಠಾಣೆಗಳಿಗಿಂತ ಭಿನ್ನವಾಗಿದ್ದು, ದೇಶದಲ್ಲೇ ಅತ್ಯುತ್ತಮ ಪೋಲೀಸ್ ಠಾಣೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಾಗಾದರೆ ಏನು ಈ ಠಾಣೆಯ ವಿಶೇಷ ಎಂಬುದನ್ನು ಒಮ್ಮೆ ತಿಳಿಯೋಣ ಬನ್ನಿ. ರಾಜಸ್ಥಾನ ಎಂದರೆ ಅಲ್ಲಿ ಬಿಸಿ ಹೆಚ್ಚು. ಇಂತಹ ಪ್ರದೇಶದಲ್ಲಿ ಇರುವ ಈ ಠಾಣೆಗೆ ಬರುವವರಿಗೆ ಆದರಾತಿಥ್ಯ ನೀಡಲಾಗುತ್ತದೆ.

ಬಿಸಿಲಿನಲ್ಲಿ ಯಾರಾದರೂ ಠಾಣೆಗೆ ಬಂದರೆ ಮೊದಲು ಅವರಿಗೆ ಕುಡಿಯಲು ತಣ್ಣಗಿನ ನೀರು ಕೊಡಲಾಗುತ್ತದೆ. ಅನಂತರ ಅವರಿಗೆ ಟೀ ನೀಡುವ ವ್ಯವಸ್ಥೆ ಕೂಡಾ ಇದೆ. ಬಹಳ ದೂರದಿಂದ ದೂರು ದಾಖಲಿಸಲು ಬರುವವರಿಗೆ ಊಟದ ವ್ಯವಸ್ಥೆ ಕೂಡಾ ಮಾಡಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಎಎಸ್ಐ ಅವರು. ಠಾಣೆಯ ಪರಿಸರದಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಮಹಿಳೆಯರಿಗಾಗಿ ಪ್ರತ್ಯೇಕ ಸಹಾಯ ನೀಡುವ ವ್ಯವಸ್ಥೆ ಕೂಡಾ ಇದೆ. ಪೋಲಿಸ್ ಠಾಣೆಯ ಆವರಣದಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ಸಂಪೂರ್ಣ ಡಿಜಿಟಲ್ ಆದ ಠಾಣೆ ಇದಾಗಿದ್ದು , ವೈ ಫೈ ಸೌಲಭ್ಯ ಕೂಡಾ ಇಲ್ಲಿದೆ.

ಠಾಣೆಯ ಪರಿಸರದಲ್ಲಿ ಎಂಟು ಸಿಸಿ ಕ್ಯಾಮರಾಗಳಿದ್ದು ಸುತ್ತಮುತ್ತಲಿನ ಪರಿಸರದ ಮೇಲೆ ಕಣ್ಣಿಡಲಾಗಿದೆ. ಠಾಣೆಯ ಬಳಿ ಆಟದ ಮೈದಾನ ಹಾಗೂ ಜಿಮ್ ಕೂಡಾ ಇದ್ದು ಇದನ್ನು ಸಾರ್ವಜನಿಕರಿಗಾಗಿ ತೆರೆಯಲಾಗಿದೆ. ಮಕ್ಕಳಿಗಾಗಿ ಉಚಿತ ಕಂಪ್ಯೂಟರ್ ತರಬೇತಿ ಕೂಡಾ ಇಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಠಾಣೆಯ ಸಿಬ್ಬಂದಿ ಬೆಳಿಗ್ಗೆ 6:30 ರ ವೇಳೆಗೆ ತಮ್ಮ ಕೆಲಸಕ್ಕೆ ಹಾಜರಾಗುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 80 ಬಾಲ್ಯ ವಿವಾಹಗಳನ್ನು ನಿಲ್ಲಿಸಿದ ಕೀರ್ತಿ ಈ ಠಾಣೆಗೆ ಸೇರಿದೆ. ಇಂತಹ ಸಮಾಜ ಮುಖಿ ಠಾಣೆಗೆ ದೇಶದಲ್ಲೇ ಅತ್ಯುತ್ತಮ ಪೋಲಿಸ್ ಠಾಣೆಯ ಬಿರುದು ಬಂದಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here