ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಒಬ್ಬರು ಪುಟ್ಟ ಬಾಲಕನನ್ನು ಎತ್ತಿಕೊಂಡು , ಮುಖದಲ್ಲಿ ನೋವಿನ ಭಾವನೆಯೊಂದಿಗೆ ನಡೆಯುತ್ತಿರುವ ಫೋಟೋ ಒಂದು ಎಲ್ಲೆಡೆ ವೈರಲ್ ಆಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ಮೆರೆದ ವಿಕೃತ ಅಟ್ಟಹಾಸದಿಂದ ನಲುಗಿದ ಅಧಿಕಾರಿಯೊಬ್ಬರ ಮಗನೇ ಆ ಬಾಲಕ. ಜಮ್ಮು ಕಾಶ್ಮೀರದ ಅನಂತನಾಗ್ ನಲ್ಲಿ ಉಗ್ರರು ನಡೆಸಿದ ಧಾಳಿಯಲ್ಲಿ ಪೊಲೀಸ್ ಅಧಿಕಾರಿ ಅರ್ಷದ್ ಖಾನ್ ಅವರು ಹುತಾತ್ಮರಾಗಿದ್ದಾರೆ. ವೃತ್ತಿಯಿಂದ ಇನ್ಸ್‌ಪೆಕ್ಟರ್ ಆದ ಅರ್ಷದ್ ಅವರು ಉಗ್ರರ ಗುಂಡಿನ ಧಾಳಿಯಲ್ಲಿ ಬಲಿಯಾಗಿದ್ದಾರೆ.

ಹುತಾತ್ಮರಾದ ಆ ಪೋಲಿಸ್ ಅಧಿಕಾರಿಗೆ ಅಂತಿಮ ನಮನವನ್ನು ಸಲ್ಲಿಸುವ ವೇಳೆಯಲ್ಲಿ ಅವರ ಕುಟುಂಬ, ಪೊಲೀಸ್ ಇಲಾಖೆಯ ಪ್ರಮುಖರು ಹಾಜರಾಗಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಯಾದ ಹಸೀಬ್ ಮುಗಲ್ ಅವರು ಅರ್ಷದ್ ಅವರ ಮಗ ನಾಲ್ಕು ವರ್ಷದ ಬಾಲಕನನ್ನು ಎತ್ತಿಕೊಂಡು, ಭಾವುಕರಾಗಿದ್ದಾರೆ. ಪುಟ್ಟ ಬಾಲಕನಿಗೆ , ತಂದೆಗೆ ಏನಾಗಿದೆ ಎಂದೂ ಅರಿಯದ ವಯಸ್ಸಿನಲ್ಲಿರುವ ಬಾಲಕನಿಗೆ ಏನು ಹೇಳುವುದೆಂದು ಹಿರಿಯ ಅಧಿಕಾರಿ ಗದ್ಗದಿತರಾಗಿದ್ದಾರೆ.

ಅಂತಿಮ ನಮನದ ಸಂದರ್ಭದಲ್ಲಿ ಫೋಟೋಗಳನ್ನು ತೆಗೆಯುವಾಗ ಅನಿರೀಕ್ಷಿತವಾಗಿ ಸೆರೆಯಾದ ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರ ಮನಕಲಕುವಂತಿದೆ. ಉಗ್ರರ ಅಟ್ಟಹಾಸದಿಂದ ಎಳೆಯ ಬಾಲಕನೊಬ್ಬ ತಂದೆಯ ಪ್ರೀತಿಯಿಂದ ವಂಚಿತನಾಗಿದ್ದಾನೆ. ಇಂತಹ ಇನ್ನೆಷ್ಟು ಕುಟುಂಬಗಳ ಸಂತೋಷವನ್ನು ಉಗ್ರರು ತಮ್ಮ ಸ್ವಾರ್ಥಕ್ಕಾಗಿ ಬಲಿಕೊಡಲಿದ್ದಾರೆ ಎಂಬ ಆಕ್ರೋಶ ಮೂಡುತ್ತದೆ. ಆದರೆ ಅದೇ ಸಂದರ್ಭದಲ್ಲಿ ದೇಶಕ್ಕಾಗಿ ಉಗ್ರರಿಗೆ ಎದೆಯೊಡ್ಡುವ ಯೋಧರ ಬಗ್ಗೆ ಹೆಮ್ಮೆ ಎನಿಸುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here