ಇಂದು ಉದ್ಘಾಟನೆಯಾದ ಐ.ಪಿ.ಎಲ್ ಚುಟುಕು ಕ್ರಿಕೆಟ್ ನ ಪ್ರಥಮ ರೋಚಕ ಪಂದ್ಯದಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ದ ಒಂದು ವಿಕೆಟ್ ನಿಂದ  ಭರ್ಜರಿ ಜಯಭೇರಿ ಬಾರಿಸಿದೆ.


ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದುಕೊಂಡ ಮುಂಬೈ ಇಂಡಿಯನ್ಸ್ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳನ್ನು ಉತ್ತಮ ಮೊತ್ತ ಸೇರಿಸಿ ಚೆನ್ನೈಗೆ 166 ರನ್ ಗಳ ಗೆಲುವಿನ ಗುರಿ ನೀಡಿತು.

ಮುಂಬೈ ಪರ ರೋಹಿತ್ ಶರ್ಮಾ 15 ರನ್ ಗಳಿಸಿ ಬೇಗ ಪೆವಿಲಿಯನ್ ಅತ್ತ ಮುಖ ಮಾಡಿದರು‌. ಜೊತೆಯಲ್ಲಿ ಓಪನರ್ ಹೆವಿನ್ ಲೆವಿಸ್ ಡಕ್ ಔಟ್ ಆಗಿ ಶಾಕ್ ನೀಡಿದರು. ಆದರೆ ನಂತರ ಬಂದ ವಿಕೆಟ್ ಕೀಪರ್ ಇಸಾನ್ ಕಿಸಾನ್ ಮತ್ತು ಸೂರ್ಯ ಕುಮಾರ್ ಜಾಧವ್ ಭರ್ಜರಿ ಜೊತೆಯಾಟ ಆಡಿದರು.

29 ಎಸೆತ ಎದುರಿಸಿದ ಇಸಾನ್ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಭರ್ಜರಿ 40 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ 29 ಎಸೆತದಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 43 ರನ್ ಗಳಿಸಿ ನಿರ್ಗಮಿಸಿದರು

ಹಾರ್ದಿಕ್ ಪಾಂಡೆ ಔಟಾಗದೆ 22 ರನ್ ಗಳಿಸಿದರೆ ಕುನಾಲ್ ಪಾಂಡೆ ಮಿಂಚಿನ ವೇಗದಲ್ಲಿ ಭರ್ಜರಿ 22 ಎಸೆತದಲ್ಲಿ ಐದು ಬೌಂಡರಿ ಎರಡು ಸಿಕ್ಷರ್ ಸಮೇತ 41 ರನ್ ಗಳಿಸಿ ನಾಟೌಟ್ ಆಗಿ ಉಳಿದರು.


ಚೆನ್ನೈ ಪರ ಶೇನ್ ವಾಟ್ಸನ್ ಎರಡು ,ದೀಪಕ್ ಚಹಾರ್ ಒಂದು ,ಇಮ್ರಾನ್ ತಹೀರ್ ಒಂದು ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ 27 ರನ್ ಗಳಿಸುವಷ್ಟರಲ್ಲೇ ಶೇನ್ ವಾಟ್ಸನ್ 16 ರನ್ ಗಳಿಸಿದ್ದಾಗ ಔಟಾದರು

ನಂತರ ಸುರೇಶ್ ರೈನಾ ಕೇವಲ ನಾಲ್ಕು ರನ್ ಗಳಿಸಿ ಔಟಾದರೆ ಅಂಬಾತಿ ರಾಯುಡು 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.ನಂತರ ಬಂದ ಕ್ಯಾಪ್ಟನ್ ಧೋನಿ ಕೇವಲ 5 ರನ್ ಗಳಿಸಿ ನಿರಾಶೆ ಮೂಡಿಸಿದರು.

ನಂತರ ಬಂದ ರವೀಂದ್ರ ಜಡೇಜ 12 ರನ್ ಗಳಿಸಿ ರೆಹಮಾನ್ ಗೆ ವಿಕೆಟ್ ಒಪ್ಪಿಸಿದರು.ದೀಪಕ್ ಚಹರ್ ಕೂಡ ಕೇವಲ 1 ರನ್ ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಚೆನೈ ಸೂಪರ್ ಕಿಂಗ್ಸ್ ತಂಡ ಸೋಲಿನ ಸುಳಿಗೆ ಸಿಲುಕಿತು.

ನಂತರ ಹರ್ಭಜನ್ ಸಿಂಗ್ 8 ರನ್ ಗಳಿಸಿ ಔಟ್ ಆದರು.ನಂತರ ವೆಸ್ಟ್ ಇಂಡೀಸ್ ನ ಸ್ಪೋಟಕ ಬ್ಯಾಟ್ಸ್‌ಮನ್ ಬ್ರಾವೋ ಉತ್ತಮ ಪ್ರದರ್ಶನ ನೀಡಿದ ಬ್ರಾವೋ ತಂಡದ ದಿಕ್ಕನ್ನೇ ಬದಲಿಸಿದರು.ಪಂದ್ಯದ 17 ಮತ್ತು 18 ನೇ ಓವರ್ ಗಳಲ್ಲಿ ಸಿಕ್ಸರ್ ಗಳ ಸುರಿಮಳೆ ಸುರಿಸಿದ ಬ್ರಾವೋ 30 ಎಸೆತಗಳಲ್ಲಿ  ಭರ್ಜರಿ 7 ಸಿಕ್ಸರ್ ಗಳ ನೆರವಿನಿಂದ 68 ರನ್ ಗಳಿಸಿ ಮುಂಬೈ ಇಂಡಿಯನ್ಸ್ ತಂಡದ ಗೆಲುವನ್ನು ಕಸಿದುಕೊಂಡರು.

ಇಂಡಿಯನ್ಸ್ ಪರ ಮಾಯಾಂಕ್ ಮಾರ್ಕಂಡೆ ಭರ್ಜರಿ ಬೌಲಿಂಗ್ ನಡೆಸಿ 23 ರನ್ ಗೆ ಚೆನೈ ತಂಡದ ಪ್ರಮುಖ 3 ವಿಕೆಟ್ ಪಡೆದುಕೊಂಡರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here