ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಪ್ ತಲುಪುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿದೆ‌.ಐಪಿಎಲ್ 11ರ ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫ್ಲೇ-ಆಫ್ ಹಂತಕ್ಕೆ ಪ್ರವೇಶಿಸಿವೆ.

ಮೊದಲು ನಡೆಯಲಿರುವ ಕ್ವಾಲಿಫೈಯರ್ 1′ ಮುಖಾಮುಖಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಕ್ವಾಲಿಫೈಯರ್ 1ರಲ್ಲಿ ಸೋತ ತಂಡಕ್ಕೆ ಮಗದೊಂದು ಅವಕಾಶ ಸಿಗಲಿದೆ.

ಬಳಿಕ ನಡೆಯಲಿರುವ ‘ಎಲಿಮಿನೇಟರ್’ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಹೋರಾಡಲಿದೆ. ಇಲ್ಲಿ ಗೆದ್ದ ತಂಡವು ‘ಕ್ವಾಲಿಫೈಯರ್ 2’ ಪಂದ್ಯದಲ್ಲಿ ಕ್ವಾಲಿಫೈಯರ್ 1ರಲ್ಲಿ ಸೋತ ತಂಡದ ಜತೆ ಸ್ಪರ್ಧಿಸಲಿದೆ. ಇಲ್ಲಿ ಗೆದ್ದ ತಂಡವು ಫೈನಲ್‌ಗೆ ಹಾಗೂ ಸೋತ ತಂಡವು ನೇರವಾಗಿ ಮನೆಗೆ ಸೇರಲಿದೆ.

ಪ್ಲೇ-ಆಫ್ ವೇಳಾಪಟ್ಟಿ ಇಂತಿದೆ:
ಕ್ವಾಲಿಫೈಯರ್ 1: ಹೈದರಾಬಾದ್ vs ಚೆನ್ನೈ 22 ಮೇ, 2018, ಮಂಗಳವಾರ, ಸ್ಥಳ: ಮುಂಬೈ
ಎಲಿಮಿನೇಟರ್: ಕೋಲ್ಕತ್ತಾ vs ರಾಜಸ್ಥಾನ 23 ಮೇ, 2018, ಬುಧವಾರ, ಸ್ಥಳ: ಕೋಲ್ಕತ್ತಾ
ಕ್ವಾಲಿಫೈಯರ್ 2: TBC vs TBC 25 ಮೇ, 2018, ಶುಕ್ರವಾರ, ಸ್ಥಳ: ಕೋಲ್ಕತ್ತಾ ಫೈನಲ್: TBC vs TBC 27 ಮೇ, 2018, ಭಾನುವಾರ, ಸ್ಥಳ: ಮುಂಬೈ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here