ಮಾರ್ಚ್ 23 ರಿಂದ 2019ರ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಸದ್ಯ ಆರಂಭಿಕ 19 ಪಂದ್ಯಗಳ ಐಪಿಎಲ್ ಪಂದ್ಯದಳ ವೇಳಾಪಟ್ಟಿ ಪ್ರಕಟಗೊಂಡಿದೆ. ಎಪ್ರಿಲ್ 5ರ ವರೆಗಿನ ವೇಳಾಪಟ್ಟಿಯನ್ನ ಬಿಸಿಸಿಐ ಅನೌನ್ಸ್ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೋರಾಟ ನಡೆಸಲಿದೆ. ಲೋಕಸಭಾ ಚುನಾವಣೆಯಿಂದಾಗಿ 12ನೇ ಆವೃತ್ತಿ ಐಪಿಎಲ್ ವೇಳಾಪಟ್ಟಿ ಪ್ರಕಟಿಸಲು ಮೀನಾಮೇಷ ಎಣಿಸುತ್ತಿದ್ದ ಬಿಸಿಸಿಐ ಕೊನೆಗೂ ವೇಳಾಪಟ್ಟಿ ಪ್ರಕಟಿಸಿದೆ.

ಆದರೆ ಆರಂಭಿಕ 2 ವಾರಗಳ ವೇಳಾಪಟ್ಟಿಯನ್ನ ಮಾತ್ರ ಪ್ರಕಟಿಸಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿಯನ್ನ ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ಬಳಿಕ ಬಿಸಿಸಿಐ ಪ್ರಕಟಿಸಲಿದೆ.ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ ಆಯೋಜಿಸಲಾಗಿದೆ. ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. ತವರಿನ RCB ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡಸಲಿದೆ. ಆರಂಭಿಕ ವೇಳಾಪಟ್ಟಿಯ ಅಂತಿಮ ಪಂದ್ಯ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ.

ಎಪ್ರಿಲ್ 5 ರಂದು RCB ತಂಡ ಕೋಲ್ಕತ್ತಾ ನೈಟ್ ರೈಡಸ್ಸ್ ವಿರುದ್ದ ಹೋರಾಟ ನಡೆಸಲಿದೆ.
ಮಾರ್ಚ್ 23 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ. ಮಾರ್ಚ್ 24 ರಂದು ಮುಂಬೈ ಇಂಡಿಯನ್ಸ್-ಡೆಲ್ಲಿ ಡೇರ್ ಡೆವಿಲ್ಸ್‍ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್-ಸನ್ ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ.

ಉಳಿದ ಪಂದ್ಯಗಳ ವಿವರಗಳು ಇಂತಿವೆ:

ಮಾರ್ಚ್ 25: ರಾಜಸ್ಥಾನ್ ರಾಯಲ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ (ಜೈಪುರದಲ್ಲಿ)

ಮಾರ್ಚ್ 26: ಡೆಲ್ಲಿ ಡೇರ್ ಕ್ಯಾಪಿಟಲ್ಸ್-ಚೆನ್ನೈ ಸೂಪರ್ ಕಿಂಗ್ಸ್ (ದೆಹಲಿ)

ಮಾರ್ಚ್ 27: ಕೋಲ್ಕೊತ್ತಾ ನೈಟ್ ರೈಡರ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ (ಕೋಲ್ಕೊತ್ತಾ)

ಮಾರ್ಚ್ 28: ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮುಂಬೈ ಇಂಡಿಯನ್ಸ್ (ಬೆಂಗಳೂರು)

ಮಾರ್ಚ್ 29: ಸನ್ ರೈಸರ್ಸ್ ಹೈದರಾಬಾದ್-ರಾಜಸ್ಥಾನ್ ರಾಯಲ್ಸ್ (ಹೈದರಾಬಾದ್)

ಮಾರ್ಚ್‍ 30: ಕಿಂಗ್ಸ್ ಇಲೆವೆನ್ ಪಂಜಾಬ್-ಮುಂಬೈ ಇಂಡಿಯನ್ಸ್ (ಮೊಹಾಲಿ)

ಡೆಲ್ಲಿ ಕ್ಯಾಪಿಟಲ್ಸ್-ಕೋಲ್ಕೊತ್ತಾ ನೈಟ್ ರೈಡರ್ಸ್ (ದೆಹಲಿ)

ಮಾರ್ಚ್ 31: ಸನ್ ರೈಸರ್ಸ್ ಹೈದರಾಬಾದ್-ರಾಯಲ್ ಚಾಲೆಂಜರ್ಸ್ ಬೆಂಗಳೂರು (ಹೈದರಾಬಾದ್)

ಚೆನ್ನೈ ಸೂಪರ್ ಕಿಂಗ್ಸ್-ರಾಜಸ್ಥಾನ್ ರಾಯಲ್ಸ್ (ಚೆನ್ನೈ)

ಏಪ್ರಿಲ್ 1: ಕಿಂಗ್ಸ್ ಇಲೆವೆನ್ ಪಂಜಾಬ್-ಡೆಲ್ಲಿ ಕ್ಯಾಪಿಟಲ್ಸ್ (ಮೊಹಾಲಿ)

ಏಪ್ರಿಲ್ 2: ರಾಜಸ್ಥಾನ್ ರಾಯಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು (ಜೈಪುರ)

ಏಪ್ರಿಲ್ 3: ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ (ಮುಂಬೈ)

ಏಪ್ರಿಲ್ 4: ಡೆಲ್ಲಿ ಕ್ಯಾಪಿಟಲ್ಸ್-ಸನ್ ರೈಸರ್ಸ್ ಹೈದರಾಬಾದ್ (ದೆಹಲಿ)

ಏಪ್ರಿಲ್ 5: ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕೊತ್ತಾ ನೈಟ್ ರೈಡರ್ಸ್ (ಬೆಂಗಳೂರು)

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here