ಕರುನಾಡಿನ ರಾಜರತ್ನ, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಇಂದು. ಅವರ ಜನ್ಮದಿನಕ್ಕೆ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ನಾಡಿನ ಮೂಲೆ ಮೂಲೆಯಿಂದ ಅಭಿಮಾನಿಗಳು ಅವರನ್ನು ಅಭಿನಂದಿಸಲು ಬಂದಿದ್ದಾರೆ. ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ನ ನಟ ನಟಿಯರು ಹಾಗೂ ಗಣ್ಯರು ಕೂಡಾ ಅಪ್ಪು ಅವರಿಗೆ ಅವರ ಜನ್ಮದಿನದ ಪ್ರಯುಕ್ತ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ಎಲ್ಲರಿಗೂ ಪುನೀತ್ ಅವರಿಗೆ ನೇರವಾಗಿ ಶುಭಾಶಯ ಹೇಳಬೇಕೆನಿಸಿದರೂ, ಅದು ಸಾಧ್ಯವಿಲ್ಲ. ಅದಕ್ಕೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿದೆ.

ಹೀಗೆ ಲಕ್ಷಾಂತರ ಅಭಿಮಾನಿಗಳು ಶುಭಾಶಯವನ್ನು ಕೋರುತ್ತಿರುವ ಈ ಸಂಭ್ರಮದ ದಿನದಂದು ಒಂದು ಶುಭಾಶಯ ವಿಶೇಷ ಎನಿಸಿದೆ. ಏಕೆಂದರೆ ದೇಶ ಸೇವೆಯಲ್ಲಿರುವ ಕನ್ನಡ ನಾಡಿನ ವೀರ ಯೋಧನೊಬ್ಬ ಇಂದು ತನ್ನ ಅಭಿಮಾನ ನಟನಿಗೆ ಶುಭಾಶಯಗಳನ್ನು ತಿಳಿಸಲು ಒಂದು ಸಣ್ಣ ವೀಡಿಯೋ ಮಾಡಿ ಅದರ ಮೂಲಕ ಅಪ್ಪು ಅವರಿಗೆ ಅವರ ಜನ್ಮ ದಿನದ ಶುಭಾಶಯಗಳನ್ನು ಕೋರಿದ್ದು,ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದ್ದು, ಬಹುಶಃ ಇದು ಅಪ್ಪು ಪುನೀತ್ ರಾಜ್‍ಕುಮಾರ್ ಅವರಿಗೆ ಖಚಿತವಾಗಿ ತಲುಪಲಿದೆ ಎಂಬುದಂತೂ ನಿಜ.

ಅಪ್ಪು ಅವರಿಗೆ ವಿಡಿಯೋ ಮೂಲಕ ಶುಭಾಶಯ ತಿಳಿಸಿರುವ ಯೋಧ ತನ್ನ ಹೆಸರು ಅಭಿ ಎಂದು ಮೈಸೂರು ಎಂದು ಹೇಳಿದ್ದಾರೆ. ಈಗ ಬಿಹಾರದ ಬಾರ್ಡರ್ ನಲ್ಲಿ ಸೇನೆಯ ಸೇವೆಯಲ್ಲಿ ಇರುವುದರಿಂದ ಬರ್ತಡೇ ವಿಶ್ ಮಾಡೋಕೆ ಬರೋಕೆ ಆಗಲಿಲ್ಲ, ಆದ್ದರಿಂದ ಈ ವಿಡಿಯೋ ಮೂಲಕ ಶುಭಾಶಯಗಳು ತಿಳಿಸ್ತಾ ಇದ್ದೀನಿ ಎಂದು ಅಭಿ ಅವರು ತಮ್ಮ ಅಭಿಮಾನ ನಟನಾದ ಪುನೀತ್ ಅವರಿಗೆ ಭಗವಂತ ಆಯುಷ್ಯ ಹಾಗೂ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಅಪ್ಪು ಅವರಿಗೆ ಒಂದು ಶುಭಾಶಯ ಸಂದೇಶವನ್ನು ಕಳುಹಿಸಿದ್ದಾರೆ. ಮರೆಯದೆ ಈ ವೀಡಿಯೋ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here