ಐಸಿಸಿ 2019 ರಲ್ಲಿ ಬಹಳ ಕುತೂಹಲ ಹಾಗೂ ರೋಚಕತೆಯನ್ನು ಹುಟ್ಟು ಹಾಕಿರುವ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ಅದಕ್ಕಾಗಿ ಕಾಯುತ್ತಿದ್ದಾರೆ ಕೋಟ್ಯಂತರ ಜನರು. ಆದರೆ ಪಂದ್ಯಕ್ಕೆ ಮೊದಲು ಯೋಧ ಅಭಿನವ್ ವರ್ಧಮಾನ್ ಅವರನ್ನು ಅಣಕವಾಡುವ ವಿಡಿಯೋ ಒಂದನ್ನು ಸಿದ್ಧಪಡಿಸಿ ಪ್ರಸಾರ ಮಾಡಿತ್ತು ಪಾಕಿಸ್ತಾನದಲ್ಲಿ ಕ್ರಿಕೆಟ್ ನ ನೇರ ಪ್ರಸಾರದ ಹಕ್ಕನ್ನು ಪಡೆದಿರುವ ಚಾನಲ್ ಒಂದು ಪ್ರಸಾರ ಮಾಡಿತ್ತು.

ಪಾಕಿಸ್ತಾನದ ಯುದ್ಧ ವಿಮಾನವನ್ನು ಧ್ವಂಸ ಮಾಡಿ ಪಾಕಿಸ್ತಾನದಲ್ಲಿ ಸಿಕ್ಕಿ ಬಿದ್ದ ಅಭಿನವ್ ಅವರನ್ನು ಹೋಲುವಂತೆ ಒಬ್ಬ ವ್ಯಕ್ತಿಯನ್ನು ಸಿದ್ಧಪಡಿಸಿ ಅವರನ್ನು ಕ್ರಿಕೆಟ್ ಜೊತೆ ಲಿಂಕ್ ಮಾಡಿ ಪಾಕ್ ಅಣಕವಾಡಿತ್ತು. ಅಲ್ಲದೆ ಅಭಿನವ್ ಅವರು ಟೀ ಕುಡಿದಿದ್ದನ್ನೇ ಗುರಿ ಮಾಡಿ, ಕಪ್ ಎಲ್ಲಿಗೆ ತಗೊಂಡು ಹೋಗ್ತಾ ಇದ್ದೀರಿ ಎಂದೆಲ್ಲಾ ವ್ಯಂಗ್ಯ ಮಾಡಿತ್ತು ಪಾಕಿಸ್ತಾನಿ ವಾಹಿನಿ. ಈ ವಿಡಿಯೋ ಗೆ ಹಾಗೂ ಪಾಕಿಸ್ತಾನಕ್ಕೆ ಸರಿಯಾದ ಉತ್ತರವನ್ನು ನೀಡಿದ್ದಾರೆ ಬಾಲಿವುಡ್ ನಟಿ ಪೂನಂ‌ ಪಾಂಡೆ. ಪೂನಂ ಅವರು ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿ ಪಾಕಿಸ್ತಾನಕ್ಕೆ ಖಡಕ್ ಉತ್ತರ ರವಾನಿಸಿದ್ದಾರೆ.

ಆಕೆ ನಾನು ನಿನ್ನೆಯಷ್ಟೇ ವಾಟ್ಸಾಪ್ ನಲ್ಲಿ ಪಾಕಿಸ್ತಾನದ ಜಾಹೀರಾತು ನೋಡಿದೆ. ವಾರ್ ಹೀರೋನನ್ನೇ ತಮಾಷೆ ಮಾಡುವ ನಿಮಗೆ ಇದುವೇ ಉತ್ತರ ನೋಡಿ ಎನ್ನುತ್ತಾ ತಮ್ಮ ಒಳ ವಸ್ತ್ರವನ್ನು ತೆಗೆದು ಪಾಕಿಸ್ತಾನ ಬರೀ ಟೀ ಕಪ್ ನಿಂದ ಏಕೆ ತೃಪ್ತಿ ಪಡುತ್ತೀರಿ, ಇದರಲ್ಲಿ ನೋಡಿ ಡಬಲ್ ಡೀ ಕಪ್ ಇದೆ. ಇದರಲ್ಲಿ ಬೇಕಾದರೆ ನೀವು ಟೀ ಕೂಡಾ ಕುಡಿಯಬಹುದು ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡುವ ಮೂಲಕ ಪಾಕಿಸ್ತಾನ ಮಾಡಿದ ವ್ಯಂಗ್ಯ ವಿಡಿಯೋಗೆ ತನ್ನದೇ ಆದ ಶೈಲಿಯಲ್ಲಿ ಉತ್ತರ ನೀಡಿದ್ದಾರೆ ಪೂನಂ ಪಾಂಡೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here