ನೀವು ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಕಾಫಿ ಟೀ ಕುಡಿದಿರುತ್ತೀರಿ.ಆದರೆ ನೀವು ಈ ಮಾಹಿತಿ ಓದಿ ವೀಡಿಯೋ ನೋಡಿದ್ರೆ ಮುಂದೆಂದೂ ರೈಲಿನಲ್ಲಿ ಟೀ ಕಾಫಿ ಕುಡಿಯುವುದೇ ಇಲ್ಲ.ಹೌದು ಹೈದರಾಬಾದ್ ನ ರೈಲಿನಲ್ಲೊಬ್ಬ ಟೀ ಕಾಫಿ ಮಾಡಲು ರೈಲಿನ ಶೌಚಾಲಯದ ನೀರು ಬಳಸಿರುವ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

ಕಳೆದ ಡಿಸೆಂಬರ್‌ನಲ್ಲಿ ಚೆನ್ನೈ ಸೆಂಟ್ರಲ್ –ಹೈದರಾಬಾದ್ ಚಾರ್ಮೀನಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿನ ಶೌಚಾಲಯದ ನೀರನ್ನು ಟೀ, ಕಾಫಿಗೆ  ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಗುತ್ತಿಗೆದಾರನಿಗೆ 1 ಲಕ್ಷ ದಂಡ ವಿಧಿಸಲಾಗಿದೆ.ಗುತ್ತಿಗೆದಾರ ಪಿ. ಶಿವಪ್ರಸಾದ್ ಟೀ ಕಾಫಿಯ ಕ್ಯಾನ್ ಹಿಡಿದು ಶೌಚಾಲಯದಿಂದ ಹೊರಬರುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶಿವಪ್ರಸಾದ್ ಸಿಕಂದರಾಬಾದ್ –ಕಾಜಿಪೇಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈ ಕೃತ್ಯದಲ್ಲಿ ಇನ್ನಿಬ್ಬರು ಭಾಗಿಯಾಗಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು.ಈ ಬಗ್ಗೆ ರೈಲ್ವೇ ಇಲಾಖೆ ತನಿಖೆ ನಡೆಸಿದೆ. ಆಗ ಈ ಘಟನೆ ಕಳೆದ ಡಿಸೆಂಬರ್  ನಲ್ಲಿ ಸಿಕಿಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

ಚೆನ್ನೈಗೆ ಹೋಗುತ್ತಿದ್ದ ಹೈದರಾಬಾದ್ ಚಾರ್ಮಿನರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಟೀ ವ್ಯಾಪಾರಿ ಪಿ.ಶಿವಪ್ರಸಾದ್ ಈ ಕೃತ್ಯ ಎಸಗಿದ್ದಾನೆ. ತನಿಖೆ ಮಾಡಿ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡವಿಧಿಸಿ ರೈಲ್ವೆ ಇಲಾಖೆ ಕ್ರಮ ತೆಗೆದುಕೊಂಡಿದೆ ಎಂದು ಹಿರಿಯ ರೈಲ್ವೇ ಅಧಿಕಾರಿ ಎ. ಉಮಾಶಂಕರ್ ಕುಮಾರ್ ತಿಳಿಸಿದ್ದಾರೆ. ವೀಡಿಯೋ ಕೆಳಗಿದೆ ನೋಡಿ.

 

https://m.youtube.com/watch?v=BMZILny61R8

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here