ಇಂದು ಭಾರತದ ಇತಿಹಾಸದಲ್ಲಿ ಮತ್ತೊಂದು ಹೊಸ ಸಾಧನೆಯು ದಾಖಲಾದ ಮಹತ್ವದ ದಿನ. ಏಕೆಂದರೆ ಬಾಹ್ಯಾಕಾಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಯನ್ನು ಮಾಡಿದೆ. ಭಾರತ ಇಂದು ಮಿಷನ್ ಶಕ್ತಿ ಎಂಬ ಮಹತ್ವದ ಮಿಷನ್ ಒಂದನ್ನು ಕೇವಲ ಮೂರು ನಿಮಿಷಗಳಲ್ಲಿ ಮುಗಿಸುವ ಮೂಲಕ ಅಂತರಿಕ್ಷ ಅಥವಾ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಏನೆಂದು ಸಾಬೀತು ಪಡಿಸಿದೆ. ಈ ವರೆಗೂ ಅಮೆರಿಕ ,ರಷ್ಯಾ ಹಾಗೂ ಚೀನಾದ ಮಾತ್ರ ಹೊಂದಿದ್ದ ಶಕ್ತಿಯನ್ನು ಈಗ ಭಾರತ ಕೂಡಾ ಪಡೆದುಕೊಂಡು ಆ ಮೂರು ರಾಷ್ಟ್ರಗಳ ಜೊತೆ ನಾಲ್ಕನೆಯ ರಾಷ್ಟ್ರವಾಗಿ ತನ್ನ ಸ್ಥಾನ ಪಡೆದು ಜಗತ್ತು ಇತ್ತ ನೋಡುವಂತೆ ಮಾಡಿದೆ.

ಆ್ಯಂಟಿ ಸ್ಯಾಟಲೈಟ್ ವೆಪನ್ ಎ-ಸ್ಯಾಟ್ , ಲೋ ಆರ್ಬಿಟ್ ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವ ಮೂಲಕ ಮಹತ್ತರ ಹೆಜ್ಜೆ ಇಡುವ ಮೂಲಕ ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿಯನ್ನು ಸೇರಿದೆ ಭಾರತ. ಇದು ನಿಜಕ್ಕೂ ಹೆಮ್ಮೆ ಪಡಲೇಬೇಕಾಗಿದ್ದು, ಇದನ್ನು ಸಾಧಿಸಿದ ನಾಲ್ಕನೇ ರಾಷ್ಟ್ರ ಭಾರತ ಎಂದು ಪ್ರಧಾ‌ನಿ ನರೇಂದ್ರ ಮೋದಿಯವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ. ಈ ತಂತ್ರಜ್ಞಾನ ಪರಿಪೂರ್ಣವಾಗಿ ಸ್ವದೇಶಿಯಾಗಿರುವುದು ಕೂಡಾ ಮತ್ತಷ್ಟು ಹೆಮ್ಮೆ ಪಡುವ ವಿಚಾರವಾಗಿದೆ. ಕೇವಲ ಮೂರೇ ನಿಮಿಷಗಳಲ್ಲಿ ಈ ಆಪರೇಷನ್ ಅನ್ನು ಪೂರ್ಣಗೊಳಿಸಲಾಗಿದೆ. ಈ ಆಪರೇಷನ್ ಹೆಸರು ಆಪರೇಷನ್ ಶಕ್ತಿ. ನಿಜಕ್ಕೂ ಭಾರತದ ಶಕ್ತಿ ಏನೆಂದು ಜಗತ್ತಿಗೆ ತಿಳಿಸಿದೆ.

ಇದಕ್ಕಾಗಿ ಶ್ರಮಿಸಿದವರು ಡಿ.ಆರ್.ಡಿ.ಓ. ನ ವಿಜ್ಞಾನಿಗಳು. ಅವರೆಲ್ಲರ ಪರಿಶ್ರಮವನ್ನು ಪರಿಗಣಿಸಿ ಪ್ರಧಾನಿ ಮೋದಿಯವರು ಎಲ್ಲರಿಗೂ ಅಭಿನಂದನೆಯನ್ನು ತಿಳಿಸಿದ್ದಾರೆ. ಇಂದು ಸಂಪೂರ್ಣ ಮಾನವ ಜೀವನ ಉಪಗ್ರಹಗಳ ಮೇಲೆ ಅವಲಂಬಿತವಾಗಿದ್ದು, ಅವುಗಳ ಸುರಕ್ಷತೆಯು ಕೂಡಾ ಬಹಳ ಮಹತ್ವದ್ದಾಗಿದ್ದು, ಎ-ಸ್ಯಾಟ್ ಮಿಸೈಲ್ ಭಾರತಕ್ಕೆ ಒಂದು ಹೊಸ ಶಕ್ತಿಯನ್ನು ಒದಗಿಸಿದೆ ಎಂದು ಸಂತಸ ವ್ಯಕ್ತ ಪಡಿಸಿರುವ ಮೋದಿಯವರು, ಇದು ಯಾವುದೇ ದೇಶದ ಮೇಲಿನ ದ್ವೇಷಕ್ಕಾಗಿ ಅಲ್ಲ, ಬದಲಿಗೆ ಅಭಿವೃದ್ಧಿಯ ಕಡೆ ನಡೆದಿರುವ ಭಾರತದ ರಕ್ಷಣೆಗಾಗಿ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here