ನಾಳೆಯಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಆಹಾರದ ಪೊಟ್ಟಣಗಳನ್ನು ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಿಳಿಸಿದ್ದಾರೆ. ಇಂದು ಸಿಎಂ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಚಿವ ಸಭೆಯಲ್ಲಿ ಈ ವಿಷಯವಾಗಿ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆದ ಕಾರಣ ಇದರ ನೇರ ಹೊಡೆತ ಬಿದ್ದಿರುವುದು ಬಡವರು ಹಾಗೂ ನಿರ್ಗತಿಕರ ಮೇಲೆ. ಅಂತಹವರ ಹಸಿವನ್ನು ‌ನೀಗಿಸಲಿ ಸರ್ಕಾರ ಇಂತಹುದೊಂದ ಯೋಜನೆಯನ್ನು ಮಾಡಲು ಮುಂದಾಗಿದೆ.

ಇದಕ್ಕೆ ಮುನ್ನ ಕೂಡಾ ಇಂದಿರಾ ಕ್ಯಾಂಟಿನ್ ಗಳ ಮೂಲಕ ಬಡವರಿಗೆ ಉಚಿತವಾಗಿ ಆಹಾರವನ್ನು ಒದಗಿಸಲು ಸೂಚನೆಯನ್ನು ನೀಡಲಾಗಿತ್ತು. ಆದರೆ ಇಂದಿರಾ ಕ್ಯಾಂಟಿನ್ ಗಳ ಬಳಿ ಇದರಿಂದ ಜನಜಂಗುಳಿ ಹೆಚ್ಚಾಗಿದ್ದರಿಂದ ಅದನ್ನು ಕೂಡಲೇ‌ ನಿಲ್ಲಿಸಲಾಗಿತ್ತು. ಈಗ ಮತ್ತೆ ಜನಜಂಗುಳಿ ಉಂಟಾಗದಿರಲಿ ಎನ್ನುವ ಕಾರಣದಿಂದಲೇ ಆಹಾರದ ಪೊಟ್ಟಣಗಳನ್ನು ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. ಸಂಪುಟ ಸಚಿವ ಸಭೆಯ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಲವು ವಿಚಾರಗಳನ್ನು ಮಾತನಾಡಿದ್ದಾರೆ.

ಅವರು ಕೊರೊನಾ ಪಾಸಿಟಿವ್ ಇರುವವರು ಶೇ 98.99 ರಷ್ಟು ಗುಣಮುಖರಾಗುವರು. ಈ ವಿಷಯದ ಬಗ್ಗೆ ಜನರಿಗೆ ಅವಗಾಹನೆ ಇಲ್ಲದೆ ಕೊರೊನಾ ಬಂದರೆ ಅದರಿಂದ ಜೀವಕ್ಕೆ ಅಪಾಯ ಎಂದು ಜನರು ಎಂದು ಭಯಭೀತರಾಗಿದ್ದಾರೆ. ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದು, ನಿನ್ನೆ ಮುಸ್ಲಿಂ ಮುಖಂಡರ ಜೊತೆಗೆ ಸಚಿವರು ಚರ್ಚೆ ನಡೆಸಿದ್ದು ಮುಸ್ಲಿಂ ಸಮುದಾಯರವರು ಮಸೀದಿಗೆ ಬದಲು ಮನೆಯಲ್ಲಿ ನಮಾಜ್ ಮಾಡುವಂತೆ ತಿಳಿಸಿದ್ದು, ಮುಸ್ಲಿಂ ನಾಯಕರು ಅದಕ್ಕೆ ಒಪ್ಪಿಗೆ ‌ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here