ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜನಪರ ಯೋಜನೆಗಳಲ್ಲೊಂದು ಇಂದಿರಾ ಕ್ಯಾಂಟೀನ್‌. ಆದರೆ ಈಗ ಈ ಯೋಜನೆಗೆ ಎಳ್ಳು ನೀರು ಬಿಡುವಂತಹ ಸ್ಥಿತಿ ಎದುರಾಗಿದೆ. ದೋಸ್ತಿ ನಾಯಕರಿಗೆ ಇಂದಿರಾ ಕ್ಯಾಂಟೀನ್ ಬಗ್ಗೆ ಆಸಕ್ತಿ ಇಲ್ಲದಂತಿದೆ. ದಿನದಿಂದ ದಿನಕ್ಕೆ ಇಂದಿರಾ ಕ್ಯಾಂಟೀನ್ ಗಳ ಪರಿಸ್ಥಿತಿ ಶೋಚನೀಯವಾಗಿದೆ‌. ಜನ ಸಾಮಾನ್ಯರಿಗಾಗಿ ಆರಂಭವಾದ ಈ ಕ್ಯಾಂಟೀನ್ ಗಳಲ್ಲಿ ಈಗ ಕುಡಿಯುವ ನೀರು ಕೂಡಾ ಲಭ್ಯವಿಲ್ಲದಂತ ಪರಿಸ್ಥಿತಿ. ಮಾಜಿ ಸಿಎಂ ಅವರು ಬಡವರಿಗಾಗಿ ಮಾಡಿದ ಕ್ಯಾಂಟೀನ್ ಗಳ ಬಗ್ಗೆ ಸರ್ಕಾರಕ್ಕೆ ಏಕೆ ಗಮನವಿಲ್ಲ ಎಂಬುದೇ ತಿಳಿಯುತ್ತಿಲ್ಲ.

ಇಂದಿರಾ ಕ್ಯಾಂಟೀನ್ ಗಳು ಕಳೆದ ಒಂದು ವರ್ಷದಿಂದ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಇದರಿಂದಾಗಿ ಕ್ಯಾಂಟೀನ್ ಗಳಿಗೆ ಪೂರೈಕೆ ಆಗುವ ವಿದ್ಯುತ್ ಹಾಗೂ ನೀರಿನಲ್ಲಿ ವ್ಯತ್ಯಯವಾಗಿದೆ. ಇದರಿಂದ ಬಹುತೇಕ ಕ್ಯಾಂಟೀನ್ ಗಳಲ್ಲಿ ನೀರು ಈಗಾಗಲೇ ಬಂದ್ ಆಗಿದೆ. ಈ ಕ್ಯಾಂಟೀನ್ ಗಳಿಗೆ ಪೂರೈಕೆ ಮಾಡುವ ನೀರು ಹಾಗೂ ವಿದ್ಯುತ್ ಗೆ ಕಮರ್ಷಿಯಲ್ ಅಥವಾ ವಾಣಿಜ್ಯ ಬೆಲೆಯನ್ನು ನಿಗಧಿ ಮಾಡಿದ್ದಾರೆ. ಇದರಿಂದ ಗುತ್ತಿಗೆದಾರರು ಇದು ಸಾರ್ವಜನಿಕ ಸೇವೆಯಾಗಿದ್ದು, ರಿಯಾಯಿತಿಯನ್ನು ಒದಗಿಸುವ ತನಕವೂ ಬಿಲ್ ಪಾವತಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ..

ಪ್ರತಿ ಇಂದಿರಾ ಕ್ಯಾಂಟೀನ್ ನಲ್ಲೂ ಸಾವಿರಾರು ರೂಪಾಯಿಗಳ ವಿದ್ಯುತ್ ಬಿಲ್ ಬಾಕಿಯಿದೆ. ಅದು ಹಾಗೆ ಮುಂದುವರೆದರೆ ಸಂಪೂರ್ಣ ವಿದ್ಯುತ್ ಕಟ್ ಆದರೂ ಆಗಬಹುದು. ಈಗ ಕಾರ್ಯಾಚರಣೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರ ನೀಡುತ್ತಾರೆ ಆದರೆ ನೀರಿನ ಸಮರ್ಪಕವಾದ ಪೂರೈಕೆಯೇ ಇಲ್ಲ ಎಂಬುದು ಗ್ರಾಹಕರ ಅಳಲಾಗಿದೆ. ಬಡ ಹಾಗೂ ಸಾಮಾನ್ಯ ವರ್ಗದ ಜನರಿಗಾಗಿ ನಿರ್ಮಾಣವಾಗಿರುವ ಈ ಇಂದಿರಾ ಹೋಟೆಲ್ ಗಳ ಕಡೆ ಸರ್ಕಾರ ಗಮನ ನೀಡದೆ ಹೋದರೆ ಅವುಗಳು ನೆಲಕಚ್ಚುವುದು ಖಚಿತ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here