ಕರ್ನಾಟಕದ ಕಿರುತೆರೆಯಲ್ಲಿ ಜನಪ್ರಿಯ ಹಾಗೂ ಭಾವನಾತ್ಮಕವಾದ ಶೋ ಆಗಿ ಅತ್ಯಧಿಕ ಜನಮನ್ನಣೆ ಪಡೆದಿರುವ ಶೋ ಅಂದರೆ ಅದು ವೀಕೆಂಡ್ ವಿತ್ ರಮೇಶ್. ಈಗ ವೀಕೆಂಡ್ ಶೋ ನ ನಾಲ್ಕನೇ ಆವೃತ್ತಿ ಬರುತ್ತಿದ್ದು, ಈಗಾಗಲೇ ಸಾಧಕರ ಕುರ್ಚಿಯಲ್ಲಿ ವೀರೇಂದ್ರ ಹೆಗ್ಗಡೆಯವರಿಂದ ಆರಂಭವಾಗಿ ರಾಘವೇಂದ್ರ ರಾಜ್‍ಕುಮಾರ್, ಪ್ರೇಮ, ಪ್ರಕಾಶ್ ಬೆಳವಾಡಿ, ಶ್ರೀ ಮುರುಳಿ , ಶಶಿಕುಮಾರ್ ಅವರು ಕುಳಿತಿದ್ದಾಗಿದೆ. ಆದರೆ ಈ ಬಾರಿ ಎಲ್ಲೋ ಒಂದೆಡೆ ಪ್ರೇಕ್ಷಕರು ವೀಕೆಂಡ್ ಶೋ ಕೇವಲ ಸಿನಿಮಾ‌ ಸಾಧಕರಿಗೆ ಮಾತ್ರವೇ ಮೀಸಲಾಗಿದೆಯೇ? ಎಂದು ಪ್ರಶ್ನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಅದಕ್ಕೆ ಉತ್ತರ ಎಂಬಂತೆ ಈ ವೀಕೆಂಡ್ ಗೆ ಬರುತ್ತಿರುವ ಸಾಧಕರು ಎಲ್ಲರ ಅನುಮಾನಕ್ಕೆ ತೆರೆಯೆಳಯಲಿದ್ದಾರೆ.

ಹಾಗಾದರೆ ಈ ಬಾರಿ ಬರುತ್ತಿರುವ ಆ ಸಾಧಕರು ಯಾರು ಎಂದರೆ ಅದು ಇನ್ಫೋಸಿಸ್ ನ ಕೋ ಫೌಂಡರ್ ಚೇರ್ಮನ್ ಅವರು. ಅಂದರೆ ಅದು ಮತ್ತಾರೂ ಅಲ್ಲ ದೇಶ ವಿದೇಶಗಳಲ್ಲಿ ಕೂಡಾ ಹೆಸರು ಮಾಡಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಅವರ ಧರ್ಮಪತ್ನಿಯವರಾದ ಇನ್ಫೋಸಿಸ್ ಸಂಸ್ಥೆಯ ಚೇರ್ ಪರ್ಸನ್ ಆದ ಸುಧಾ ಮೂರ್ತಿಯವರು ಸಾಧಕರ ಕುರ್ಚಿಯಲ್ಲಿ ಕೂತು ಆ ಕುರ್ಚಿಯ ಹಿರಿಮೆಯನ್ನು ಮತ್ತಷ್ಟು ಹೆಚ್ಚು ಮಾಡಲಿದ್ದಾರೆ ಈ ಶನಿವಾರ ಮತ್ತ ಭಾನುವಾರದ ವೀಕೆಂಡ್ ವಿತ್ ರಮೇಶ್ ನಲ್ಲಿ.

ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಮೂರ್ತಿ ಅವರ ಜೀವನ ಹಾಗೂ ಸಾಧನೆಯ ಬಗ್ಗೆ ತಿಳಿಯಲು ಪ್ರೇಕ್ಷಕರು ಕೂಡಾ ಉತ್ಸುಕರಾಗಿದ್ದಾರೆ ಮಾತ್ರವಲ್ಲದೆ ಈ ಬಾರಿಯ ಕಾರ್ಯಕ್ರಮ ಹಲವರಿಗೆ ಪ್ರೇರಣೆಯ ಕಥೆ ಕೂಡಾ ಆಗಬಹುದು ಎಂಬುದನ್ನು ನಿರಾಕರಣೆ ಮಾಡಲು ಸಾಧ್ಯವಿಲ್ಲ. ಸುಧಾ ಮೂರ್ತಿ ಅವರಂತೂ ಈಗಾಗಲೇ ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಕೂಡಾ ತಮ್ಮ ಸೇವಾ ಕಾರ್ಯಗಳಿಂದಲೇ ಜನಪ್ರಿಯರಾಗಿದ್ದು ಅವರ ಬಗ್ಗೆ ಮತ್ತಷ್ಟು ತಿಳಿಯುವ ಸದವಕಾಶವನ್ನು ಕಲ್ಪಿಸುತ್ತಿದೆ ಈ ಬಾರಿಯ ವೀಕೆಂಡ್ ವಿತ್ ರಮೇಶ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here