ಕೊರೊನಾ ವೈರಸ್ ನಿಂದ ಉಂಟಾಗಿರುವ ಭೀತಿ ವಿಶ್ವವನ್ನೇ ನಡುಗಿಸಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಕೂಡಾ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದು, ಅದರ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವತ್ತ ಮುಂದಾಗಿದ್ದರೂ, ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಮಹಾ ಮಾರಿ ಭಾರತಕ್ಕೆ ಕೂಡಾ ಅಡಿಯಿಟ್ಟ ನಂತರ ಭಾರತ ಸರ್ಕಾರ ಸೋಂಕು ಹರಡದಂತೆ ಮುನ್ನೆಚ್ಚರಿಕೆಯನ್ನು ವಹಿಸಲು ಈಗಾಗಲೇ ದೇಶವನ್ನು ಲಾಕ್ ಡೌನ್ ಮಾಡಿದ್ದು, ಏಪ್ರಿಲ್ 14 ರ ವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಈ ಸಂಕಷ್ಟದಲ್ಲಿ ದೇಶಕ್ಕೆ ನೆರವು ನೀಡಲು ಸೆಲೆಬ್ರಿಟಿಗಳು, ಗಣ್ಯರು, ಉದ್ದಿಮೆದಾರರು ದೊಡ್ಡ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ.

ಇನ್ಫೋಸಿಸ್ ಫೌಂಡೇಶನ್ ನ ಸುಧಾ ಮೂರ್ತಿಯವರು ಜನರು ಸಂಕಷ್ಟಕ್ಕೆ ಗುರಿಯಾದಾಗ ಪ್ರತಿ ಬಾರಿಯು ಕೂಡಾ ತಮ್ಮ ಸೇವೆಗಳನ್ನು ನೀಡಲು ಮುಂದಾಗುತ್ತಾರೆ. ಈಗಾಗಲೇ ಅಗತ್ಯ ವೈದ್ಯಕೀಯ ಮಾಸ್ಕ್ ಗಳು, ಸ್ಯಾನಿಟೈಸರ್ ಗಳು, ಗ್ಲೌಸ್ ಗಳು, ವೈದ್ಯಕೀಯ ಸಿಬ್ಬಂದಿಗೆ ರಕ್ಷಣಾ ವಸ್ತ್ರಗಳನ್ನು ನೀಡಿರುವುದು ಮಾತ್ರವೇ ಅಲ್ಲದೆ, ಬಡವರು ಹಾಗೂ ನಿರ್ಗತಿಕರಿಗೆ ಅಗತ್ಯ ಆಹಾರ ವಸ್ತುಗಳ ಕಿಟ್ ಗಳನ್ನು ಕೂಡಾ ತಯಾರಿಸಿ ಸ್ವಯಂ ಸೇವಕರ ಮೂಲಕ ಅಗತ್ಯ ಇರುವವರಿಗೆ ತಲುಪಿಸುತ್ತಿದ್ದಾರೆ.

ಇದೆಲ್ಲದರ ನಡುವೆ ಅವರು ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರದ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ. ಸುಧಾ ಮೂರ್ತಿಯವರು ಸಿಎಂ ಅವರ ಪರಿಹಾರ ನಿಧಿಗೆ 100 ಕೋಟಿ ರೂಗಳ ದೇಣಿಗೆಯನ್ನು ಕೂಡಾ ನೀಡಿದ್ದಾರೆ. ಈ ಮೂಲಕ ತಮ್ಮ ಸಂಸ್ಥೆಯ ಮುಖಾಂತರ ಮಾಡುತ್ತಿರುವ ಸೇವೆಗಳ ಜೊತೆಗೆ ಅವರು ಸರ್ಕಾರದ ಜೊತೆ ಕೂಡಾ ತಮ್ಮ ಕೈ ಜೋಡಿಸಿ, ಕೊರೊನಾ ವಿರುದ್ಧ ಸಮರಕ್ಕೆ ಜೊತೆಯಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here