ಈ ಬಾರಿಯ ಐ ಪಿ ಎಲ್ ಬಿಡ್ಡಿಂಗ್ ವೇಳೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಯ್ಕೆಗಾರರು ಐಪಿಎಲ್ 11 ನೇ ಆವೃತ್ತಿಗೆ ತನ್ನನ್ನು ಉಳಿಸಿಕೊಳ್ಳುವ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಆದ್ರೆ ಬಳಿಕ ಅವರು ತನ್ನನ್ನು ಸಂಪರ್ಕಿಸಲಿಲ್ಲ

ನಂತರ ನನ್ನ ಆಯ್ಕೆ ಮಾಡಲಿಲ್ಲ ಇದರಿಂದ ತನಗೆ ನಿರಾಸೆ ಅನುಭವ ಉಂಟಾಗಿತ್ತು ಎಂದು ಕಿಂಗ್ಸ್ ಇಲೆವೆನ್ ತಂಡ ಹಾಗೂ ಕೆರೆಬಿಯನ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಖಾಸಗಿ ಟಿವಿಗೆ ಹೇಳಿದ್ದಾರೆ. IPL ನಲ್ಲಿ ಅತ್ಯುತ್ತಮ ಆಟ ಆಡಿ 21 ಶತಕ ಕೂಡ ಹೊಡೆದಿರುವ ನನ್ನನ್ನು ಆರ್ ಸಿ ಬಿ ಆಯ್ಕೆ

ಮಾಡದಿರುವುದು ನನ್ನ ಮನಸ್ಸಿಗೆ ನೋವು ನೀಡಿತ್ತು ಎಂದು ಕ್ರಿಸ್ ಗೇಲ್ ತಿಳಿಸಿದ್ದಾರೆ.
ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ವೇಳೆ ತನ್ನನ್ನು ಎರಡು ಬಾರಿಯೂ ಆಯ್ಕೆ ಮಾಡಿರಲಿಲ್ಲ. ಆದರೆ ಮೂರನೇ ಬಾರಿ ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಅವಕಾಶ ನೀಡಿದ್ದರು.

ಇದು ತನಗೆ ಅಚ್ಚರಿ ಮೂಡಿಸಿತ್ತು. ಈ ಮೊದಲು ತಾನು ಟೂರ್ನಿಗೆ ಅಗತ್ಯವಿಲ್ಲ `ಇಟ್ಸ್ ಫೈನ್’ ಎಂದು ಗೇಲ್ ಸಮಾಧಾನಗೊಂಡಿದ್ದೆ ಎಂದು ಹೇಳಿದರು.
ಏನೆ ಆದರು ಆಗಿಹೋಗಿರುವುದರ ಬಗ್ಗೆ ನನಗೆ ಬೇಸರವಿಲ್ಲ ಆದರೆ ಈ ಬಾರಿ ಕಪ್ ಗೆಲ್ಲಬೇಕು.ಈ ಬಾರಿಯ ಟೂರ್ನಿಯಲ್ಲಿ ತಾನು ಕೇವಲ ಒಂದು ಉದ್ದೇಶ ಹೊಂದಿದ್ದೇನೆ.

ಅದು ಪಂಜಾಬ್ ಕಪ್ ಗೆಲ್ಲುವಂತೆ ಮಾಡುವುದು. ತಂಡದ ಮಾಲೀಕರಾದ ಪ್ರೀತಿ ಜಿಂಟಾ ಅವರಿಗೆ ಕಪ್ ಗೆದ್ದು ನೀಡುತ್ತೇವೆ. ಇದಾದ ಬಳಿಕ 2019 ರ ವಿಶ್ವಕಪ್ ಅನ್ನು ತನ್ನ ದೇಶಕ್ಕೆ ಗೆಲ್ಲಿಸಿಕೊಡ ಬೇಕಿದೆ. ಆದ್ರೆ ವಿಶ್ವಕಪ್ ಗೆ ಆಯ್ಕೆಯಾಗಲು ಸಾಕಷ್ಟು ಹೋರಾಟ ನಡೆಸಬೇಕಾಯಿತು ಎಂದು ಹೇಳಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here