ಕರ್ನಾಟಕದ ಮಾಜಿ ಮುಖ್ಯಮಂತ್ರಿ ಅಧಿಕಾರ ವಹಿಸುತ್ತಿದ್ದಂತೇ ಬಿ ಎಸ್ ಯಡಿಯೂರಪ್ಪ ಅವರು ಮಹತ್ವದ ಸರ್ಜರಿ ಮಾಡಿದ್ದರು..ಗೃಹ ಇಲಾಖೆಯ ಮೇಜರ್ ಸರ್ಜರಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪೋಲೀಸ್ ಇಲಾಖೆಯಲ್ಲಿ ಹಲವು ಮಹತ್ವದ ವರ್ಗಾವಣೆ ಮಾಡಿದ್ದರು ಅವುಗಳಲ್ಲಿ ಪ್ರಮುಖವಾಗಿ

ಚಿಕ್ಕಮಗಳೂರಿನಲ್ಲಿ ತಮ್ಮ‌ ಖಡಕ್ ಕೆಲಸದಿಂದಲೇ ದುಷ್ಟರಿಗೆ ಸಿಂಹಸ್ವಪ್ನವಾಗಿದ್ದ ಕೆ.ಅಣ್ಣಾಮಲೈ ಅವರನ್ನು ರಾಮನಗರದ ಎಸ್ ಪಿ ಆಗಿ ವರ್ಗಾವಣೆ ಮಾಡಿದ್ದರು.ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಾದ್ಯಂತ ತನ್ನ ನಿಷ್ಠಾವಂತ ಕಾರ್ಯ ಮತ್ತು ಮಾನವೀಯತೆ ಕೆಲಸಗಳ ಮೂಲಕ ಭ್ರಷ್ಟರು ಮತ್ತು ದುಷ್ಟರಿಗೆ ಅಕ್ಷರಶಃ IPS ಅಣ್ಣಾಮಲೈ ಅವರು ಸಿಂಹಸ್ವಪ್ನವಾಗಿದ್ದರು.

ಅದರಲ್ಲೂ ಅಲ್ಲಿನ ಯುವಜನತೆಗೆ ಕೆ ಅಣ್ಣಾಮಲೈ ಅವರ ಕಾರಗಯವೈಖರಿ ಎಂದರೆ ಬಹಳಷ್ಟು ಪ್ರೀತಿ ಇದೆ.ಅಣ್ಣಾಮಲೈ ಅವರು ಅಧಿಕಾರ ವಹಿಸಿಕೊಂಡ ನಂತರ ಸುತ್ತಮುತ್ತಲಿನ ಎಷ್ಟೋ ಅಕ್ರಮಗಳು ,ಪುಂಡರ ಪುಂಡಾಟಗಳು ಕಮ್ಮಿಯಾಗಿದ್ದು ಅಣ್ಣಾ ಅವರ ಕಾರ್ಯವೈಖರಿಗೆ ಅಲ್ಲಿನ ಯುವಜನತೆ ಅಣ್ಣಾಮಲೈ ಅವರನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ.

ಈಗ ಕುಮಾರಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಅಣ್ಣಾಮಲೈ ಅವರು ಮತ್ತೆ ಚಿಕ್ಕಮಗಳೂರಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಯಡಿಯೂರಪ್ಪ ಅವರ ಯಾವುದೇ ಆದೇಶಗಳು ಚಾಲ್ತಿಯಲ್ಲಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದ ಹಿನ್ನೆಲೆಯಲ್ಲಿ ಸದ್ಯಕ್ಕೆ ಇನ್ನೂ ಅಣ್ಣಾಮಲೈ ಅವರು ರಾಮನಗರ I P S  ಆಗಿ ಅಧಿಕಾರ ವಹಿದಿಕೊಂಡಿಲ್ಲ.

ಹೀಗಾಗಿ ಸದ್ಯದ ಮಟ್ಟಿಗೆ ಅಣ್ಣಾಮಲೈ ಅವರು ತಟಸ್ಥವಾಗಿದ್ದಾರೆ.ಬುಧವಾರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಅಣ್ಣಾಮಲೈ ಅವರು ಮತ್ತೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಆಗುತ್ತಾರ ಅಥವಾ ಬೇರೆಕಡೆ ಹೋಗುತ್ತಾರ ಇಲ್ಲವೆಂದರೆ ರಾಮನಗರದಲ್ಲಿ ಮುಂದುವರಿಯಲಿದ್ದಾರಾ ಕಾದುನೋಡಬೇಕಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here