ಆಗಸ್ಟ್ 5 ರ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಸಕಲ ಸಿದ್ಧತೆಗಳು ಬಹಳ ಜೋರಾಗಿ ನಡೆದಿವೆ. ಈಗಾಗಲೇ ಅಯೋಧ್ಯಾ ನಗರವನ್ನು ನೂತನ ವಧುವಿನಂತೆ ಅಲಂಕಾರ ಮಾಡಲಾಗಿದ್ದು, ರಾಮಮಂದಿರ ಶಿಲಾನ್ಯಾಸದ ಐತಿಹಾಸಿಕ ಕ್ಷಣಕ್ಕಾಗಿ ಕೋಟ್ಯಂತರ ರಾಮ ಭಕ್ತರು ಕಾಯುತ್ತಿದ್ದಾರೆ. ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸರ್ಕಾರವು ವಿವಿಧ ರೀತಿಯ ವಿಶೇಷ ವ್ಯಕ್ತಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನವನ್ನು ನೀಡುತ್ತಿದ್ದು, ಅಂತಹವರಲ್ಲಿ ಈಗ ಅಯೋಧ್ಯೆಯ ಭೂ ವಿವಾದದ ಪ್ರಮುಖ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿಗೆ ಭೂಮಿ ಪೂಜೆಯ ಆಹ್ವಾನವನ್ನು ನೀಡಲಾಗಿದೆ.

ಆಹ್ವಾನವನ್ನು ಸ್ವೀಕಾರ ಮಾಡಿರುವ ಇಕ್ಬಾಲ್ ಅನ್ಸಾರಿ ಇದು ರಾಮನ ಇಚ್ಛೆ ಎಂದಿದ್ದಾರೆ. ಇಕ್ಬಾಲ್ ಅನ್ಸಾರಿ ಅಯೋಧ್ಯೆಯ ಭೂ ವಿವಾದದಲ್ಲಿ ಕೋರ್ಟ್ ನಲ್ಲಿ ದಾವೆ ಹೂಡಿದ್ದ ಪ್ರಮುಖರಲ್ಲಿ ಒಬ್ಬರಾಗಿದ್ದರು. ತಾನೇ ಮೊದಲ ಆಹ್ವಾನ ಪಡೆಯಬೇಕು ಎಂಬುದು ಆ ಪ್ರಭು ರಾಮನ ಇಚ್ಛೆ ಆಗಿರುಬೇಕು ಎಂದಿರುವ ಅನ್ಸಾರಿ ರಾಮನ ಇಚ್ಛೆಯಾನುಸಾರ ನಾನು ಆಹ್ವಾನವನ್ನು ಸ್ವೀಕರಿಸಿದ್ದೇನೆ. ಅಯೋಧ್ಯೆಯಲ್ಲಿ ಹಿಂದೂ ಹಾಗೂ ಮುಸಲ್ಮಾನರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದು, ರಾಮ ಮಂದಿರ ನಿರ್ಮಾಣವು ಇಲ್ಲಿನ ಭವಿಷ್ಯತ್ತನ್ನು ಬದಲಾಯಿಸಲಿದೆ ಎಂದಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here