ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ತೆಲುಗಿನ ನಟಿ ಶ್ರೀ ರೆಡ್ಡಿ ದನಿ ಎತ್ತಿದ ಮೇಲೆ, ಅದಕ್ಕೆ ಹಲವರು ಕೂಡಾ ಹೌದು ಎಂದರು. ಅದಾದ ನಂತರ ಒಬ್ಬೊಬ್ಬರೂ ತಮ್ಮ ಅನುಭವಗಳನ್ನು ಹೇಳುತ್ತಾ ಹೋದರು. ಈ ಬೆನ್ನಲ್ಲೇ ಕಳೆದ 21 ವರ್ಷಗಳಿಂದ ಚಿತ್ರ ರಂಗದಲ್ಲಿ ಇರುವ ಬಹು ಭಾಷಾ ನಟಿ ಇಶಾ ಕೋಪಿಕರ್ ಕೂಡಾ ಈಗ ಕಾಸ್ಟಿಂಗ್ ಕೌಚ್ ಬಗ್ಗೆ ತನ್ನ ಅನುಭವವನ್ನು ಹೇಳಿದ್ದಾರೆ. ಬಾಲಿವುಡ್ ಸಿನಿಮಾ ವೆಬ್ ಸೈಟ್ ವೊಂದು ನಡೆಸಿದಂತಹ ಸಂದರ್ಶನದಲ್ಲಿ ಇಶಾ ಅವರು ತಮ್ಮ ಈ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಕಾಸ್ಟಿಂಗ್ ಕೌಚ್ ನಿಜ ಎಂಬುದರ ಬಗ್ಗೆ ಅವರು ಕೂಡಾ ಹೌದು ಎನ್ನುವಂತಾಗಿದೆ.

ಚಿತ್ರ ರಂಗದಲ್ಲಿ ಇರುವ ಈ ಕಾಸ್ಟಿಂಗ್ ಕೌಚ್ ನಿಂದಾಗಿ ತನಗೆ ಅದೆಷ್ಟೋ ಚಿತ್ರಗಳ ಆಫರ್ ಕೈ ತಪ್ಪಿ ಹೋಯಿತೆಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ತಮಗೆ ಬಂದ ಅನೇಕ ಆಫರ್ ಗಳು ಬೇರೆಯವರ ಪಾಲಾದವು ಎಂದು ಕೂಡಾ ಅವರು ಹೇಳಿದ್ದಾರೆ. ಹೀಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಾ ಒಬ್ಬ ಸೂಪರ್ ಸ್ಟಾರ್ ನಟನ ಮೇಲೆ ಇಶಾ ಆರೋಪವನ್ನು ಮಾಡಿದ್ದಾರೆ. ನಿರ್ಮಾಪಕರೊಬ್ಬರು ಹೊಸ ಸಿನಿಮಾವೊಂದಕ್ಕೆ ಇಶಾ ಅವರಿಗೆ ಆಫರ್ ನೀಡಿದಾಗ, ಒಬ್ಬ ದೊಡ್ಡ ನಟನಿಗೆ ಕರೆ ಮಾಡಲು ಹೇಳಿದರಂತೆ. ಅವರ ಮಾತಿನಂತೆ ಆ ನಟನಿಗೆ ಕರೆ ಮಾಡಿದ ಇಶಾ ಅವರಿಗೆ ಆಘಾತ ಕಾದಿತ್ತಂತೆ.

ಆ ನಟ ಇಶಾ ಅವರ ಕರೆ ಸ್ವೀಕರಿಸಿ ನಾಳೆ ನನ್ನನ್ನು ಭೇಟಿಯಾಗಲು ಒಬ್ಬಳೇ ಬರಬೇಕು ಎಂದು ಹೇಳಿದರಂತೆ. ಅಲ್ಲದೆ ಇಶಾ ಅವರು ತನ್ನ ಡ್ರೈವರ್ ಜೊತೆ ಬರುವುದಾಗಿ ಹೇಳಿದಾಗಲೂ ಆ ನಟ ಒಬ್ಬಳೇ ಬರಬೇಕು ಎಂದಾಗ, ವಿಷಯವನ್ನು ಅರಿತ ಇಶಾ ಆ ನಟನಿಂದ ದೂರ ಉಳಿದಿದ್ದು ಮಾತ್ರವಲ್ಲದೇ, ಪ್ರತಿಭೆ ನೋಡಿ ಅವಕಾಶ ನೀಡುವುದಾದರೆ ನೀಡಿ ಎಂದು ನಿರ್ಮಾಪಕರಿಗೆ ಹೇಳಿದರಂತೆ. ಸ್ಟಾರ್ ನಟ ಮಾತ್ರವಲ್ಲ ಕೆಲವರು ಸೆಕ್ರೆಟರಿ ಗಳು ಕೂಡಾ ಇಂತಹುದೇ ಅಸಭ್ಯ ವರ್ತನೆ ತೋರಿದ್ದರೆಂದು ತನ್ನ ಅನುಭವ ಹಂಚಿಕೊಂಡಿರುವ ಇಶಾ ಅವರು ಆ ಸೂಪರ್ ಸ್ಟಾರ್ ನಟನ ಹೆಸರನ್ನು ಮಾತ್ರ ಬಹಿರಂಗ ಪಡಿಸಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here