ಕೊರೊನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಎನ್ನುವಂತೆ ಹರಡುತ್ತಾ ರಾಜ್ಯ ರಾಜಧಾನಿಗೂ ಕೂಡಾ ಕಾಲಿಟ್ಟಿರುವ ವಿಷಯ ತಿಳಿದೇ ಇದೆ. ದಿನ ಬೆಳಗಾದರೆ ಬೆಂಗಳೂರು ಮಹಾನಗರದಲ್ಲಿ ಕೊರೊನಾ ಸೋಂಕಿತರು, ಕೊರೊನಾ ಲಕ್ಷಣಗಳುಳ್ಳವರು ಪತ್ತೆಯಾಗುತ್ತಿದ್ದಾರೆ. ಕಳೆದ 11 ದಿನಗಳ ಅಂತರದಲ್ಲಿ ರಾಜ್ಯಕ್ಕೆ ವಿದೇಶಗಳಿಂದ ಬಂದಿಳಿದವರ ಸಂಖ್ಯೆ 43 ಸಾವಿರ ಮಂದಿ ಎನ್ನಲಾಗಿದೆ. ಇನ್ನು ದೇಶದಲ್ಲಿ ಕೊರೊನಾ ವೈರಸ್ ಎರಡನೇ ಹಂತವನ್ನು ದಾಟಿ ಮೂರನೇ ಹಂತಕ್ಕೆ ಕಾಲಿಡುತ್ತಿರುವುದರಿಂದ ಈ ಹಂತದಲ್ಲಿ ಕಟ್ಟೆಚ್ಚರವನ್ನು ವಹಿಸಬೇಕಾದ ಅನಿವಾರ್ಯತೆ ಕೂಡಾ ಇದೆ.‌

ಈ ಹಿನ್ನೆಲೆಯಲ್ಲಿ ವಿದೇಶಗಳಿಗೆ ಹೋಗಿ ಬಂದಿರುವ ಸಹಸ್ರಾರು ಸಂಖ್ಯೆಯಲ್ಲಿರುವ ಜನರಿಂದ ಸೋಂಕು ಹರಡುವ ಶಂಕೆ ಎದುರಾಗಿದೆ. ಅದಕ್ಕಾಗಿಯೇ ಡಿಸಿಪಿ ಇಶಾ ಪಂತ್ ಅವರು ಮುನ್ನೆಚ್ಚರಿಕೆಯ ಕ್ರಮವಾಗಿ ವಿದೇಶಗಳಿಂದ ಬಂದಿರುವವರ ವಿವರವನ್ನು ಕಲೆ ಹಾಕುವ ಕೆಲಸದಲ್ಲಿ ತೊಡಗಿಕೊಂಡಿದ್ದು ಈಗಾಗಲೇ 20 ಸಾವಿರ ಮಂದಿಯ ವಿವರವನ್ನು ಅವರು ಪತ್ತೆ ಹಚ್ಚಿದ್ದು ಅವರನ್ನು ಅವರ ಮನೆಗಳಲ್ಲಿಯೇ ದಿಗ್ಭಂದನದಲ್ಲಿ ಇಡಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳಿಂದ ವಿವರವನ್ನು ಪಡೆದಿದ್ದಾರೆನ್ನಲಾಗಿದೆ.

ಉಳಿದಿರುವವರ ಹುಡುಕಾಟ ಮುಂದುವರೆಸಲಾಗಿದ್ದು, ಪತ್ತೆಯಾದವರಿಗೆ ಹದಿನಾಲ್ಕು ದಿನ ಕ್ವಾರಂಟೈನ್ ನಲ್ಲಿರುವಂತೆ ತಿಳಿಸಲಾಗಿದೆ. ಇವರ ಚಲನ ವಲನಗಳ ಮೇಲೆ ನಿಗಾ ವಹಿಸಲಾಗುವುದು ಹಾಗೂ ಗಸ್ತು ಸಿಬ್ಬಂದಿ ಅನಿರೀಕ್ಷಿತ ಭೇಟಿ ನೀಡಿ ಅವರ ಮನೆಗಳನ್ನು ಪರಿಶೀಲನೆ ಮಾಡಲಾಗುವುದು ಎಂದು, ಅಲ್ಲದೆ ಸ್ಥಳೀಯರ ಸಹಾಯವನ್ನು ಕೂಡಾ ಪಡೆಯಲಾಗುವುದು ಎಂದಿದ್ದು, ನಿಯಮ ಪಾಲನೆ ಮಾಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡಾ ತಿಳಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here