ಚಂದ್ರಯಾನ-೨ ಇಸ್ರೋ ದ ಒಂದು ದೊಡ್ಡ ಸಾಧನೆ ಎಂದೇ ಇಡೀ ದೇಶ ಶ್ಲಾಘನೆ ಮಾಡಿದೆ‌. ಕಡೆಯ ಕ್ಷಣಗಳಲ್ಲಿ ವಿಕ್ರಂ ಲ್ಯಾಂಡರ್ ನಿಂದ ಸಂಪರ್ಕವನ್ನು ಕಳೆದುಕೊಂಡು ನಿರಾಸೆಯನ್ನು ಮೂಡಿಸಿತ್ತಾದರೂ, ಅನಂತರ ನಡೆದ ಬೆಳವಣಿಗೆಗಳಲ್ಲಿ ಮತ್ತೆ ಸಂಪರ್ಕ ಸಾಧ್ಯವಿದೆ, ಆದ ಸಮಸ್ಯೆಗೆ ಸರಿಯಾದ ಕಾರಣಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಲಾಗುತ್ತದೆ ಎಂಬ ಆಶಾಭಾವನೆ ವ್ಯಕ್ತವಾಗಿದ್ದು, ವಿಕ್ರಂ ಲ್ಯಾಂಡರ್ ಜೊತೆ ಶೀಘ್ರದಲ್ಲೇ ಸಂಪರ್ಕ ಸಿಗುತ್ತದೆ ಎಂಬ ಇಸ್ರೋದ ಮಾಹಿತಿಗೆ ಭಾರತೀಯರ ಉತ್ಸಾಹವು ಮತ್ತೊಮ್ಮೆ ಗರಿಗೆದರಿದಂತೆ ಆಗಿದೆ.

ಇದೇ ಸಂದರ್ಭದಲ್ಲಿ ಅರ್ಜುನ್ ಅವಧೂತ ಗುರೂಜಿಗಳು ಸಹಾ ಕೆಲವು ಉತ್ತಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಚಂದ್ರಯಾನ-೨ ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುವ ಜೊತೆಗೆ ಭವಿಷ್ಯವಾಣಿ ಕೂಡಾ ನುಡಿದಿದ್ದಾರೆ. ಅರ್ಜುನ್ ಗುರೂಜಿಗಳು ತಮ್ಮ ಮಾತಿನಲ್ಲಿ ಕೆಲವು ದೇಶಗಳು ಚಂದ್ರಯಾನ-೨ ವಿಫಲವಾಗಿದೆ ಎಂದು ಸಂತೋಷ ಪಟ್ಟಿವೆ ಆದರೆ ಇನ್ನು ಕೆಲವು ದಿನಗಳಲ್ಲೇ ಮತ್ತೆ ವಿಕ್ರಂ ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸುವಲ್ಲಿ ಇಸ್ರೋ ಯಶಸ್ವಿಯಾಗಿ, ಎಲ್ಲರಿಗೂ ಒಂದು ಒಳ್ಳೆಯ ಸುದ್ದಿಯು ದೊರಕಲಿದೆ ಎಂದಿದ್ದಾರೆ.

ಭಾರತ ಒಂದು ಧರ್ಮರಹಿತವಾದ ದೇಶ, ಇಲ್ಲಿ ವಿಫಲತೆ ಅನ್ನೋದು ಇರುವುದಿಲ್ಲ ಎಂದಿದ್ದಾರೆ. ಭಾರತ ದೈವ ಪ್ರಧಾನವಾದ ದೇಶ ಸಾಧು ಸಂತರ ಜೊತೆ ಇದ್ದು, ಪವಿತ್ರ ಗಂಗೆ ಗೆ ಒಂದು ಶ್ರೇಷ್ಠತೆ ಕೊಟ್ಟ ಭಾರತೀಯರಿಗೆ ಯಾವುದೇ ಕಾರಣಕ್ಕೂ ಮುಖಭಂಗ ಆಗೋದಿಲ್ಲ ಎಂದು ಅವರು ಹೇಳಿದ್ದಾರೆ. ಸಿವನ್  ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತೆ , ಆ ಗಣೇಶನ ಆಶೀರ್ವಾದ ಇದ್ದೇ ಇದ್ದು, ಬಹಳ ಬೇಗ ನಮಗೆ ಸಿಹಿ ಸುದ್ದಿ ಸಿಗುತ್ತದೆ ಎಂದು ಅರ್ಜುನ ಅವಧೂತ ಗುರೂಜಿಗಳು ನುಡಿದಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here