ಬಹು ನಿರೀಕ್ಷಿತ ಹಾಗೂ ಕೋಟಿ ಕೋಟಿ ಭಾರತೀಯರು ಬೆರಗುಗಣ್ಣುಗಳಿಂದ ನೋಡುತ್ತಾ, ಕ್ಷಗಣನೆ ಮಾಡುತ್ತಾ ಕಾಯುತ್ತಿದ್ದವರಿಗೆ ಸ್ವಲ್ಪ ನಿರಾಶೆಯಾಗಿದೆ. ಏಕೆಂದರೆ ಕೋಟಿ ಕೋಟಿ ಜನರು ಕಾಯುತ್ತಿದ್ದ ಚಂದ್ರಯಾನ – 2 ನ್ನು ಕೆಲವು ತಾಂತ್ರಿಕ ಕಾರಣಗಳಿಂದ ಅಂದರೆ ರಾಕೆಟ್ ನ ಉಡಾವಣಾ ವಾಹನದಲ್ಲಿ ಸಂಭವಿಸಿದ ತಾಂತ್ರಿಕ ತೊಂದರೆಯಿಂದ ರದ್ದುಗೊಳಿಸಲಾಗಿದೆ. ಚಂದ್ರಯಾನ ಕಾರ್ಯಗತವಾಗಲು, ರಾಕೆಟ್ ಉಡಾವಣೆಯಾಗಲು ಇನ್ನು 56 ನಿಮಿಷಗಳು ಇರುವಾಗಲೇ ತಾಂತ್ರಿಕವಾಗಿ ಉಂಟಾದ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಚಂದ್ರಯಾನ 2 ರದ್ದಾಗಿದೆ.

ತಾಂತ್ರಿಕ ದೋಷ ಪತ್ತೆಯಾದ ನಂತರ ಇಸ್ರೋ ನ ಅಧಿಕಾರಿಗಳು ಸುದ್ದಿ ಗೋಷ್ಠಿ ಕರೆಸಿ , ಚಂದ್ರಯಾನ ರದ್ದಾಗಿರುವ ಮಾಹಿತಿಯನ್ನು ನೀಡಿ, ಮುಂದಿನ ಚಂದ್ರಯಾನದ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಉಡಾವಣಾ ರಾಕೆಟ್ ನಲ್ಲಿ ತಾಂತ್ರಿಕ ದೋಷವಾಗಿರುವ ಕಾರಣ, ಪೂರ್ವ ನಿರ್ಧಾರಿತ ಸಮಯದೊಳಗೆ ದೋಷ ಸರಿಪಡಿಸುವುದಕ್ಕೆ ಸಾಧ್ಯವಿಲ್ಲ. ಆದ ಕಾರಣ ಈಗ ಚಂದ್ರಯಾನ- 2 ನ್ನು ರದ್ದು ಮಾಡುತ್ತಿದ್ದು, ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟ ಮಾಡುವುದಾಗಿ ಹೇಳಿದ್ದಾರೆ.

ಪೂರ್ವ ನಿರ್ಧಾರಿತವಾದಂತೆ ಎಲ್ಲವೂ ಸಮರ್ಪಕವಾಗಿ ನಡೆದಿದ್ದರೆ ಜುಲೈ 15 ರ ಮುಂಜಾನೆ 2:51 ಕ್ಕೆ ಆರ್ಬಿಟರ್ ಲ್ಯಾಂಡರ್ ಹಾಗೂ ರೋವರ್ ಹೊತ್ತುಕೊಂಡು ಜಿಎಸ್ಎಲ್ವಿ ಎಂಕೆ 3 ರಾಕೆಟ್ ನಭದ ಕಡೆ ಹಾರಬೇಕಾಗಿತ್ತು.. ಆದರೆ ಸಣ್ಣ ತಾಂತ್ರಿಕ ದೋಷದಿಂದಾಗಿ ಸದ್ಯಕ್ಕೆ ಚಂದ್ರಯಾನ ಎರಡು ರದ್ದಾಗಿದೆ. ಚಂದ್ರನ ಹುಟ್ಟಿನಿಂದ ಮೊದಲ್ಗೊಂಡು ಅನೇಕ ವಿಷಯಗಳನ್ನು ಅರಿಯಲು ಇಸ್ರೋ ಮಹತ್ವಾಕಾಂಕ್ಷಿ ಉಡಾವಣೆಯನ್ನು ಆಯೋಜಿಸಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here