ಬೆಂಗಳೂರು: ರಾಜ್ಯದಲ್ಲಿ ಸತತವಾಗಿ ಐಟಿ ದಾಳಿಗಳು ನಡೆಯುತ್ತಿದ್ದು, ಉದ್ಯಮಿಗಳು ಮತ್ತು ಸರ್ಕಾರಿ ನೌಕರಗಳು ಕಂಗಾಲಾಗಿದ್ದಾರೆ.
ಕೇವಲ ಉದ್ಯಮಿಗಳು ಮತ್ತು ಸರಕಾರಿ ನೌಕರಿ ಅಧಿಕಾರಿಗಳ ಮೇಲೆ ಮಾತ್ರವಲ್ಲದೆ ಆಭರಣ, ಜ್ಯೂವೆಲರ್ಸ್ ಮಳಿಗೆಗಳ ಮೇಲು ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಇದಕ್ಕೆ ಬೆಂಗಳೂರಿನ ಜ್ಯೂವೆಲರ್ಸ್ ಓನರ್ ಗಳು ಶಾಕ್ ಆಗಿದ್ದಾರೆ.
ಹೌದು ರಾಜ್ಯದಲ್ಲಿಉಡುಪಿ ಹಾಗೂ ಮಂಗಳೂರಿನಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲೂ ಸಹ ಚಿನ್ನಾಭರಣ ಮಳಿಗೆಗಳಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಎಂ.ಜಿ ರಸ್ತೆ, ಮಹಾಲಕ್ಷ್ಮಿ ಲೇಔಟ್, ಗಿರಿನಗರ, ಬನಶಂಕರಿಯಲ್ಲಿರುವ ಆಭರಣ ಜ್ಯೂವೆಲರ್ಸ್ ಮಳಿಗೆಗಳ ಮೇಲೆ ಐಟಿ ದಾಳಿಯಾಗಿದೆ. ಒಟ್ಟು 30 ಕಾರುಗಳಲ್ಲಿ ತೆರಳಿರುವ ಐಟಿ ಅಧಿಕಾರಿಗಳ ತಂಡ, ಬೆಂಗಳೂರಿನಲ್ಲಿರುವ ಆಭರಣ ಜ್ಯೂವೆಲರ್ಸ್ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.