ಇನ್ಸ್ಟಾಗ್ರಾಂ ಖಾತೆಯಲ್ಲಿ ಒಬ್ಬ ವಿದೇಶಿ ಮಹಿಳೆ ತಮ್ಮ ಕೈ ಮೇಲೆ ಇರುವ ಒಂದು ಅಸಾಮಾನ್ಯವಾದ ಟ್ಯಾಟು ಫೋಟೋವನ್ನು ಹಾಕಿದ್ದಾರೆ. ಟ್ಯಾಟೂ ಫೋಟೋದಲ್ಲೇನು ವಿಶೇಷ? ಚಿತ್ರ ವಿಚಿತ್ರವಾಗಿರೋ ಟ್ಯಾಟೂ ಹಾಕಿಸಿಕೊಂಡು ಫೋಟೋ ಹಾಕಿ ವೈರಲ್ ಮಾಡೋ ಮಂದಿಗೇನು ಕಡಿಮೆ ಎಂದರೆ, ಇಲ್ಲಿರುವ ಕಥೆ ಅಂತಹುದಲ್ಲ. ಆಕೆ ಆ ಟ್ಯಾಟೂ ಹಿಂದೆ ಅಡಗಿರುವ ವಿಷಯವನ್ನು ಕೂಡಾ ಹೇಳಿದ್ದು ಇದೊಂದು ಅಸಾಮಾನ್ಯ ಹಾಗೂ ಒಂದು ಅಪರೂಪದ, ಅಲ್ಲದೆ ಹಲವರಿಗೆ ನಂಬಲು ಸಾಧ್ಯವಿಲ್ಲದಂತಹ ಒಂದು ಘಟನೆಯ ವಿವರವನ್ನು ಆಕೆ ನೀಡಿದ್ದಾರೆ.

ಕೈಮೇಲೆ ಇರುವ ಟ್ಯಾಟೂ ನೋಡಿದಾಗ ಇದಾವುದೋ ಪ್ರಾಚೀನ ಭಾಷೆ ಎನಿಸಬಹುದು. ಆದರೆ ಅದನ್ನು ಸರಿಯಾಗಿ ಗಮನಿಸಿದರೆ ಅಲ್ಲಿ its real ಎಂಬ ಪದವನ್ನು ಗಮನಿಸಬಹುದು. ಕ್ಯಾಲಿಫೋರ್ನಿಯಾದ ಮೇಡಿ ಜಾನ್ಸನ್ ಎಂಬ ಮಹಿಳೆಯ ಕೈ ಮೇಲೆ ಈ ಟ್ಯಾಟೂ ಇದ್ದು, ಅದನ್ನು ಆಕೆ ತಮ್ಮ ಆಂಟಿಗೆ ಅರ್ಪಿಸಿದ್ದಾರೆ. ಒಂದು ವರ್ಷದ ಹಿಂದೆ ಅವರ ಆಂಟಿ ಟಿನಾ ಅವರು ಆರೋಗ್ಯ ಸಮಸ್ಯೆಯಿಂದ ನಿಧನ ಹೊಂದಿದ್ದರು. ಆದರೆ ಆರೋಗ್ಯ ಹದಗೆಟ್ಟಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ, ಅಲ್ಲಿ ಆಕೆಯ ಆರೋಗ್ಯ ಹದಗೆಟ್ಟು ವೈದ್ಯರು ಆಕೆ ಉಸಿರು ನಿಂತಿದೆ. ಆಕೆ ಮರಣ ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.

ಆದರೆ ಕೆಲವು ನಿಮಿಷಗಳ ನಂತರ ಪವಾಡ ಎಂಬಂತೆ ಆಕೆ ಎಚ್ಚರಗೊಂಡು, ಕೋಣೆಯಲ್ಲಿದ್ದ ತಮ್ಮವರೊಬ್ಬರನ್ನು ಪೆನ್ ಮತ್ತು ಪೇಪರ್ ಕೇಳಿದ್ದಾರೆ. ಅನಂತರ ಆ ಸ್ಥಿತಿಯಲ್ಲಿ ಏನೋ ಬರೆದಿದ್ದಾರೆ. ಅದರಲ್ಲಿ ಆಕೆ ನಡುಗುವ ಕೈಗಳಲ್ಲಿ ಇಟ್ಸ್ ರಿಯಲ್ ಎಂದು ಬರೆದಿದ್ದಾರೆ. ಕೋಣೆಯಲ್ಲಿದ್ದವರು ಏನು ನೈಜ(ರಿಯಲ್) ಎಂದಾಗ ಮಾತನಾಡಲು ಶಕ್ತಿಯಿಲ್ಲದ ಆಕೆ ತಲೆ ಎತ್ತಿ ಆಕಾಶದ ಕಡೆ ನೋಡಿ ಕಣ್ಣೀರಿಟ್ಟರು ಎಂದು ಮೆಡಿ ಜಾನ್ಸನ್ ಹೇಳಿದ್ದಾರೆ. ಆಕೆ ಪರೋಕ್ಷವಾಗಿ ದೇವರು ನಿಜ , ಸ್ವರ್ಗವನ್ನು ಆಕೆ ನೋಡಿದ್ದಾಳೆ ಎಂಬುದನ್ನು ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ. ಆಕೆ ಕಡೆಯದಾಗಿ ಬರೆದ its real ಪದ ಈಗ ರಹಸ್ಯ ಪದವಾಗಿ ಎಲ್ಲರ ಗಮನ ಸೆಳೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here