ನೆರೆಯ ಆಂಧ್ರ ಪ್ರದೇಶದಲ್ಲಿ ಒಂದು ಐತಿಹಾಸಿಕ ನಿರ್ಣಯವನ್ನು ಅಲ್ಲಿನ ಸರ್ಕಾರ ಮಾಡುವ ಮೂಲಕ ದೇಶದ ಗಮನವನ್ನು ಸೆಳೆದಿದೆ. ದಿಶಾ ಪ್ರಕರಣದ ನಂತರ ಆ ಕೃತ್ಯ ಎಸಗಿದವರ ಮೇಲೆ ಎನ್ಕೌಂಟರ್ ಮಾಡಿದ ನಂತರ ಈಗ ಸರ್ಕಾರ ಕೈಗೊಂಡಿರುವ ನಿರ್ಧಾರ ಜನ ಮನ್ನಣೆ ಪಡೆದಿದೆ. ಈಗ ತೆಗೆದುಕೊಂಡಿರುವ ಐತಿಹಾಸಿಕ ನಿರ್ಣಯ ಏನೆಂದರೆ ಇನ್ನು ಮುಂದೆ ಮಹಿಳೆಯರ ಮೇಲೆ ಇಂತಹ ದೌರ್ಜನ್ಯ ನಡೆದು, ಅದು ಸಾಬೀತು ಆದರೆ ಎಫ್.ಐ.ಆರ್ ದಾಖಲಾದ 21 ದಿನಗಳಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ದಿಶಾ ಮಸೂದೆ 2019 ನ್ನು ವಿಧಾನ ಸಭೆ ಅನುಮೋದಿಸಿದೆ.

ಈ ಮೂಲಕ ಮಹಿಳೆಯರು ಹಾಗೂ ಯುವತಿಯರ ಮೇಲೆ ದೌರ್ಜನ್ಯ ಕ್ಕೆ ಮುಂದಾಗುವವರಿಗೆ ತಕ್ಕ ಶಿಕ್ಷೆಯನ್ನು ನೀಡಲು ಮುಂದಾಗಿದೆ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ. ತೆಲುಗು ದೇಶಂ ಪಕ್ಷ ಕೂಡಾ ಈ ಮಸೂದೆಯನ್ನು ಒಮ್ಮತದಿಂದ ಅಂಗೀಕರಿಸಿದ ಹಿನ್ನೆಲೆಯಲ್ಲಿ ಇಂದು ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ಈ ಮಸೂದೆ ಅಂಗೀರಾರಗೊಂಡಿದೆ. ಇತ್ತೀಚಿಗೆ ದಿಶಾ ಮೇಲೆ ನಡೆದ ದೌರ್ಜನ್ಯ ದೇಶ ವ್ಯಾಪಿಯಾಗಿ ತೀವ್ರವಾದ ಚರ್ಚೆಗೆ ಕಾರಣವಾಗಿತ್ತು. ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂಬ ಕೂಗು ಎಲ್ಲೆಡೆಯಿಂದ ಕೇಳಿ ಬಂದಿತ್ತು.

 

ಈ ನಿಟ್ಟಿನಲ್ಲಿ ದಿಟ್ಟ‌ ನಿರ್ಧಾರವನ್ನು ಕೈಗೊಳ್ಳಲು ಮುಂದಾದ ಆಂಧ್ರ ಪ್ರದೇಶದ ಸರ್ಕಾರವು ದಿಶಾ ಮಸೂದೆ 2019 ಅನ್ನು ವಿಧಾನ ಸಭೆಯಲ್ಲಿ ಮಂಡನೆ ಮಾಡಿ ಇದರ ಬಗ್ಗೆ ದೀರ್ಘವಾದ ಚರ್ಚೆಯನ್ನು ಕೂಡಾ ಮಾಡಲಾಗಿತ್ತು. ಕಡೆಗೆ ಇಂದು ಸರ್ವಾನುಮತದಿಂದ ಈ ಮಸೂದೆಯನ್ನು ಅಂಗೀಕರಿಸಿದ್ದು, ಇನ್ನು ಮುಂದೆ ಇಂತಹ ದೌರ್ಜನ್ಯ ಮೆರೆದು ಅದು ಸಾಬೀತಾದಲ್ಲಿ ಘಟನೆ ನಡೆದ 21 ದಿನಗಳಲ್ಲಿ ಶಿಕ್ಷೆಯನ್ನು ವಿಧಿಸಲಾಗುವುದು. ತ್ವರಿತ ನ್ಯಾಯ ನಿರ್ಣಯ ಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಕೂಡಾ ಸ್ಥಾಪನೆ ಮಾಡಲಾಗುವುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here