ದೇಶದಲ್ಲಿ ಕೊರೊನಾ ಸೋಂಕಿನ ಪ್ರರಕಣಗಳು ದಿನಗಳೆದಂತೆ ಏರುತ್ತಾ ಸಾಗಿದೆ‌. ಕೊರೊನಾ ಸೋಂಕು ಹೆಚ್ಚಿದಂತೆ‌ ಅದರ ತೀವ್ರತೆಗೆ ಬಲಿಯಾಗುವವರ ಸಂಖ್ಯೆ ಕೂಡಾ ಏರುತ್ತಿದೆ. ಸೋಂಕಿನಿಂದ ಮೃತರಾಗುವವರ ಅಂತಿಮ ಸಂಸ್ಕಾರವನ್ನು ಕೊರೊನಾ ವಾರಿಯರ್ಸ್ ನಡೆಸಬೇಕಾದ ಸಂದಿಗ್ಧತೆಯನ್ನು ಕೂಡ ನಾವು ಸುದ್ದಿಗಳಲ್ಲಿ ನೋಡುತ್ತಿದ್ದೇವೆ. ಇನ್ನೂ ಕೆಲವು ಕಡೆಗಳಲ್ಲಿ ಕೊರೊನಾ ಸೋಂಕಿತರ ಅಂತಿಮ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ಮಾಡುವುದು ಕೂಡಾ‌‌ ಕಂಡು ಬರುತ್ತಿದೆ. ‌ಬಡವರಿಗೆ ಅಂತಿಮ ಸಂಸ್ಕಾರ ನಡೆಸುವುದು ಕೂಡಾ ಕಷ್ಟವಾಗತೊಡಗಿದೆ.

ಈ ಎಲ್ಲಾ ಸಮಸ್ಯೆಗಳನ್ನು ಮನಗಂಡ ನೆರೆಯ ಆಂಧ್ರದ ಮುಖ್ಯಮಂತ್ರಿ ಜಗನ್ ​ಮೋಹನ್ ಅವರ ಸರ್ಕಾರವು ಈಗೊಂದು ಮಹತ್ವದ ನಿರ್ಧಾರವನ್ನು ಮಾಡಿದೆ. ಕೊರೊನಾ ಸೋಂಕಿನಿಂದ ಮೃತರಾದವರ ಅಂತ್ಯ ಕ್ರಿಯೆಗಾಗಿ ಸರ್ಕಾರವು 15,000 ರೂಗಳ ಸಹಾಯ ಧನವನ್ನು ಘೋಷಣೆ ಮಾಡಿದೆ. ಈಗಾಗಲೇ ಅಲ್ಲಿನ ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಈಗಾಗಲೇ ಸಾವಿರಕ್ಕಿಂತ ಅಧಿಕ ಆ್ಯಂಬುಲೆನ್ಸ್ ಗಳು, ಕ್ವಾರಂಟೈನ್ ನಲ್ಲಿ ಇರುವವರಿಗೆ ಕೊರೊನಾ ಕಿಟ್ ಗಳು ನೀಡಲಾಗುತ್ತಿದೆ.

ಇದಲ್ಲದೇ ರಾಜ್ಯದಲ್ಲಿನ ಯಾವುದೇ ರೋಗಿಯೂ ಕೂಡಾ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂದು ಸೂಚನೆ ನೀಡಲಾಗಿದೆ. ಆಸ್ಪತ್ರೆಗಳು ಕೂಡಾ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ಮಾಡಬಾರದು, ನಿರಾಕರಣೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದು, ಹಾಗೇನಾದರೂ ಆಸ್ಪತ್ರೆಗಳು ನಡೆದುಕೊಂಡರೆ ಅಂಥಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here