ಚಂದನವನದಲ್ಲಿ ಸ್ಟಾರ್ ನಟಿಯಾಗಿ ಟಾಪ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡು, ಎಲ್ಲಾ ಸ್ಟಾರ್‌ ನಟರ ಜೊತೆ ನಟಿಸಿ, ತನ್ನದೇ ಆದ ಛಾಪು ಮೂಡಿಸಿದ್ದ ನಟಿ ರಮ್ಯ. ಅನಂತರದ ದಿನಗಳಲ್ಲಿ ಅವರು ರಾಜಕೀಯ ಪ್ರವೇಶ ಮಾಡಿದರು, ಅವರ ವಿಷಯಗಳು ಟ್ರೋಲ್ ಆದವು‌. ಹಲವು ಸಂದರ್ಭಗಳಲ್ಲಿ ಕಾಂಟ್ರವರ್ಸಿ ವಿಷಯಗಳಲ್ಲಿ ಅವರ ಹೆಸರು ತಳಕು ಹಾಕಿಕೊಂಡಿತು. ರಾಜಕೀಯ ಪ್ರವೇಶ ಮಾಡಿದ ಮೇಲೆ ಸಂಪೂರ್ಣವಾಗಿ ಚಿತ್ರ ಜಗತ್ತಿನಿಂದ ಕಾಣೆಯಾಗಿ ಹೋದರು. ಅನಂತರ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ರಮ್ಯ ಅವರು ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇತ್ತೀಚಿಗೆ ಅವರು ಮತ್ತೆ ಸಿನಿಮಾಗಳಿಗೆ ವಾಪಸಾಗಲಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಹರಡಿತು.

ನಟಿ ರಮ್ಯ ಅವರು ಹಾಗೂ ನವರಸ ನಾಯಕ ಜಗ್ಗೇಶ್ ಅವರಿಗೂ ವೈಯಕ್ತಿಕವಾಗಿ ಯಾವುದೇ ವೈಮನಸ್ಯ ಎಂಬುದಿಲ್ಲ. ಆದರೆ ನೀರ್ ದೋಸೆ ಸಿನಿಮಾ ಮಾಡುತ್ತೇನೆಂದು ಹೇಳಿದ್ದ ನಟಿ ಆಗ ಚುನಾವಣೆ ವಿಷಯಕ್ಕಾಗಿ ಸಿನಿಮಾದಿಂದ ಹಿಂದೆ ಉಳಿದಿದ್ದರು. ಅದರಿಂದಾಗಿ ಜಗ್ಗೇಶ್ ಅವರಿಗೆ ಸ್ವಲ್ಪ ಅಸಮಾಧಾನ ಇದ್ದದ್ದು ಕೂಡಾ ತಿಳಿದಿರುವ ವಿಷಯ. ಆದರೆ ಇತ್ತೀಚಿಗೆ ಜಗ್ಗೇಶ್ ಅವರು ಇತ್ತೀಚಿಗೆ ವಿಡಿಯೋ ಒಂದನ್ನು ಶೇರ್ ಮಾಡುತ್ತಾ, ರಮ್ಯ ಅವರನ್ನು ಸಿನಿಮಾ ರಂಗಕ್ಕೆ ಮತ್ತೆ ಬರುವಂತೆ ಹೇಳಿದ್ದಾರೆ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ರಮ್ಯ ಅವರು ಭಾಗವಹಿಸಿದ್ದಾಗ ಪುನೀತ್ ರಾಜ್‍ಕುಮಾರ್ ಅವರನ್ನು ಜಗ್ಗೇಶ್ ಅವರ ಮಿಮಿಕ್ರಿ ಮಾಡುವಂತೆ ಕೇಳಿದ್ದರು. ಆ ವಿಡಿಯೋ ಪೋಸ್ಟ್ ಮಾಡಿದ ಜಗ್ಗೇಶ್ ಅವರು ಕಲಾಬಂಧು ಪುನೀತ್ ರಾಜ್‍ಕುಮಾರ್ ಅವರು ನನ್ನನ್ನು ಇಮಿಟೇಟ್ ಮಾಡಿದ ವಿಡಿಯೋ ಖುಷಿ ಕೊಟ್ಟಿತು.. ಕೆಲ ವೈಯಕ್ತಿಕ ಸಿದ್ಧಾಂತ ಒಡೆದ ಹಾಲಾಯಿತು ಮನಸ್ಸು..ವೈಯಕ್ತಿಕವಾಗಿ ನಾನು ಈಕೆಯನ್ನು ಬಹಳ ಇಷ್ಟಪಡುವೆ..ಈಕೆ ಒಳ್ಳೆ ನಟಿ..ಮತ್ತೆ ಈಕೆ ನಟಿಸಲಿ ಎಂದು ಹಾರೈಸುವೆ.. ಕಮ್ ಬ್ಯಾಕ್ ರಮ್ಯ ಎಂದು ಬರೆದಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here