ಹಿರಿಯ ನಟ, ನವರಸನಾಯಕ ಹಾಗೂ ಬಿಜೆಪಿ ಮುಖಂಡರೂ ಆಗಿರುವ ಜಗ್ಗೇಶ್ ಅವರು ಇಂದು ಇಂದು ವೀಡಿಯೋವನ್ನು ನೋಡಿ ಮರುಕ ಪಟ್ಟಿದ್ದಾರೆ‌. ಟ್ವಿಟರ್ ನಲ್ಲಿ ಸಕ್ರಿಯವಾಗಿರುವ ಅವರು ತಮ್ಮದೇ ಆಡಳಿತ ಪಕ್ಷದ ವಿರುದ್ಧ ಪರೋಕ್ಷವಾಗಿ ತಮ್ಮ‌‌ ಅಸಮಾಧಾನವನ್ನು ಹೊರಹಾಕಿದ್ದಾರೆ.‌ ನಟ ಜಗ್ಗೇಶ್ ಅವರು ಮೋದಿಯವರ ಅಪ್ಪಟ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದಿದೆ.‌ ಅಲ್ಲದೇ ಅವರು ಬಿಜೆಪಿಯ ಬಗ್ಗೆ ಕೂಡಾ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಆದರೆ ಇಂದು ಅವರು ಹಂಚಿಕೊಂಡಿರುವ ವೀಡಿಯೋದಲ್ಲಿನ ದೃಶ್ಯ ನೋಡಿ ಅವರಿಗೆ ಬೇಸರ, ಅಸಮಾಧಾನ ಎರಡೂ ಆಗಿ ಕೆಲವು ಸಾಲುಗಳನ್ನು ಕೂಡಾ ಬರೆದಿದ್ದಾರೆ.‌

ಟ್ವಿಟರ್ ನಲ್ಲಿ ಕಣ್ಣಿಲ್ಲದ ವ್ಯಕ್ತಿಯೊಬ್ಬರು ಸರ್ಕಾರದಿಂದ ಆಗಬೇಕಿರುವ ತಮ್ಮ ಕೆಲಸ ಐದು ವರ್ಷಗಳಿಂದ ಆಗಿಲ್ಲ, ತಾನು ಅದಕ್ಕಾಗಿ ಅಲೆಯುವಂತಾಗಿದೆ ಎಂದು ಹೇಳುತ್ತಾ ಕಣ್ಣೀರನ್ನು ಹಾಕಿದ್ದಾರೆ. ಇದನ್ನು ನೋಡಿದ ಜಗ್ಗೇಶ್ ಅವರು ಬೇಸರವನ್ನು ಮಾಡಿಕೊಂಡು, ತಮ್ಮದೇ ಪಕ್ಷದವರು ಅಧಿಕಾರದಲ್ಲಿರುವ ತಮ್ಮವರ ಬಗ್ಗೆಯೇ ಪರೋಕ್ಷವಾಗಿ ಹಾಗೂ ತುಸು ಕಟುವಾಗಿಯೇ ತಮ್ಮ ಅಸಮಾಧಾನದ ಚಾಟಿಯನ್ನು ಬೀಸಿದ್ದಾರೆ. ಅವರು ಆ ವ್ಯಕ್ತಿಯ ಕಣ್ಣೀರನ್ನು ಕಂಡು ಆಡಳಿತ ಹಾಗೂ ಅಧಿಕಾರದಲ್ಲಿ ಇರುವವರ ಬಗ್ಗೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಜಗ್ಗೇಶ್ ಅವರು ಟ್ವೀಟ್ ನಲ್ಲಿ, ” ಇಂಥ ಅನೇಕ ಅಮಾಯಕರ ಕಣ್ಣಾರೆ ಕಂಡು ಏನು ಮಾಡಲಾಗದೆ ರಾಜಕೀಯ ವ್ಯೆವಸ್ಥೆ ನಾನು ಶಪಿಸುವೆ!
ಜನರಿಗಾಗಿ ಎಂದು ಜನರಿಂದ ಗೆದ್ದುಬಂದು ಜಾಣಕುರುಡು ಪ್ರದರ್ಶನ ಮಾಡುವವರೆ ಇಂಥ ಅಮಾಯಕರಿಗೆ ಸಹಾಯ ಮಾಡಿ! ಇಲ್ಲದಿದ್ದರೆ ನಿಮ್ಮ ಯಾವ ದೇವರು ಕ್ಷಮಿಸೋಲ್ಲಾ! ಅದಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ! ಬಡವರ ಶಾಪ ಒಂದುದಿನ ಸುಟ್ಟುಬಿಡುತ್ತದೆ!” ಎಂದು ಬರೆದುಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here