ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಯಶಸ್ವಿ ನಟರಲ್ಲಿ ನವರಸನಾಯಕ ಜಗ್ಗೇಶ್ ಕೂಡಾ ಒಬ್ಬರು.‌ ಚಿತ್ರರಂಗದ ಸುದೀರ್ಘ ಪಯಣ ಅವರಿಗೆ ಹೂವಿನ ಹಾಸಾಗಿರಲಿಲ್ಲ. ತನ್ನ ಶ್ರಮ, ಶ್ರದ್ಧೆ ಹಾಗೂ ಕಲೆಯ ಬಗ್ಗೆ ತನ್ನ ಸಮರ್ಪಣಾ ಮನೋಭಾವದಿಂದ ಹಂತ ಹಂತವಾಗಿ ಬೆಳೆದು ಬಂದ ಜಗ್ಗೇಶ್ ಅವರು ಇಂದು ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾವಿದ ಹಾಗೂ ಚಿತ್ರರಂಗದ ಒಂದು ಆಧಾರಸ್ತಂಭ ಕೂಡಾ ಎನ್ನುವ ಮಟ್ಟಕ್ಕೆ ಸಾಧನೆ ಮೆರೆದಿದ್ದು, ನವರಸ ನಾಯಕ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡು, ಜನ ಮೆಚ್ಚಿದ ನಟನಾಗಿ, ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದ್ದು, ಇಂದು ಅಂತಹ ಕಲಾವಿದನ ಜನ್ಮದಿನ. ಅಭಿಮಾನಿಗಳಿಗೆ ಇದು ಸಂಭ್ರಮದ ದಿನ ಕೂಡಾ‌.

ಜಗ್ಗೇಶ್ ಅವರು ಸಿನಿಮಾ ರಂಗದಲ್ಲಿ ಮಾತ್ರವಲ್ಲ ಕಿರು ತೆರೆ ಹಾಗೂ ಸಾಮಾಜಿಕ ಕಾರ್ಯಗಳಿಂದ ಕೂಡಾ ಜನರಿಗೆ ಹತ್ತಿರವಾಗಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವ ಮೂಲಕ ಸಾರ್ವಜನಿಕರಿಗೆ ಇನ್ನಷ್ಟು ನಿಕಟವಾಗಿದ್ದಾರೆ‌. ಕಷ್ಟ ಎನ್ನುವವರಿಗೆ ಸ್ಪಂದಿಸಲು ಸದಾ ಮುಂದಾಗುವ ಅವರ ಗುಣವೇ ಜನರಿಗೆ ಅವರ ಬಗ್ಗೆ ಮತ್ತಷ್ಟು ಗೌರವವನ್ನು ನೀಡುವಂತೆ ಮಾಡುತ್ತದೆ‌. ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿರುವ ಈ ನಟ, ಸಾರ್ವಜನಿಕ ಜೀವನದಲ್ಲಿ ಕೂಡಾ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.

ಜಗ್ಗೇಶ್ ಅವರು ಇಂದು ಒಬ್ಬ ನಟ, ಕಲಾವಿದರಾಗಿ ಉಳಿದಿಲ್ಲ. ಒಬ್ಬ ಸಾಮಾಜಿಕ ಕಳಕಳಿಯುಳ್ಳ, ತನ್ನ ಸುತ್ತ ಮುತ್ತಲ ಜನರ ಬಗ್ಗೆ ಆಲೋಚಿಸುವ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕರುಣಾಮಯಿ ಹೃದಯದ ವ್ಯಕ್ತಿಯಾಗಿ ಕೂಡಾ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರನ್ನು ನಟನಾಗಿ ಅಭಿಮಾನಿಸುವವರು ಕೋಟ್ಯಂತರ ಜನ, ಅದರ ಜೊತೆಗೆ ಅವರ ಮೌಲ್ಯ ಭರಿತ ಮಾತು, ಅವರ ಮಾನವೀಯ ಕಾರ್ಯಗಳನ್ನು ನೋಡಿ ಅವರನ್ನು ಅಭಿಮಾನಿಸುವ ಅಭಿಮಾನಿಗಳು ಕೂಡಾ ಇದ್ದಾರೆ ಎಂಬುದು ವಿಶೇಷ. ಜಗ್ಗೇಶ್ ಅವರು ನೂರು ಕಾಲ ತಮ್ಮ ವೃತ್ತಿ ರಂಗದಲ್ಲಿ ಇನ್ನಷ್ಟು ಹೆಸರು ಮಾಡಲಿ ಹಾಗೂ ಸಮಾಜಕ್ಕಾಗಿ ತುಡಿಯುವ ಅವರಿಗೆ ದೇವರು ಮತ್ತಷ್ಟು ಶಕ್ತಿಯನ್ನು ‌ನೀಡಲೆಂದು ಅವರ ಜನ್ಮದಿನದಂದು ಸುದ್ದಿಮನೆ ತಂಡವು ಹಾರೈಸುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here