ಸಿನಿಮಾ, ಕಿರುತೆರೆಗಳಲ್ಲಿ ಸದಾ ಸಕ್ರಿಯರಾಗಿರುವ ನಟ ನವರಸ ನಾಯಕ ಜಗ್ಗೇಶ್ ಅವರು. ಇತ್ತೀಚಿನ ದಿನಗಳಲ್ಲಿ ಜಗ್ಗೇಶ್ ಅವರು ಒಬ್ಬ ನಟನಾಗಿ, ಕಲಾವಿದನಾಗಿ ಮಾತ್ರವಲ್ಲದೇ ಕಷ್ಟದಲ್ಲಿರುವವರಿಗೆ ತನ್ನಿಂದಾಗುವ ಸಹಾಯ ನೀಡಲು ಮುಂದೆ ಇದ್ದು, ಅಪಾರ ಜನರ ಹೃದಯದಲ್ಲಿ ತಮ್ಮ ಮಾನವೀಯ ಕಾರ್ಯಗಳಿಂದಾಗಿಯೇ ಅಪಾರ ಅಭಿಮಾನವನ್ನು ಗಳಿಸುತ್ತಿದ್ದಾರೆ. ಸಹ ಕಲಾವಿದನ ಆರೋಗ್ಯ ಸರಿಯಿಲ್ಲ ಎಂದು ತಿಳಿದೊಡನೆ ನೆರವಿಗೆ ಧಾವಿಸಿದ್ದು ಮಾತ್ರವೇ ಅಲ್ಲದೇ, ರಿಯಾಲಿಟಿ ಶೋ‌ ಗೆ ಬಂದ ಅಂಧ ಹೆಣ್ಣು ಮಕ್ಕಳ ಸಂಕಷ್ಟಕ್ಕೆ ಮಿಡಿದು ಅವರಿಗೊಂದು ಭದ್ರತೆ ನೀಡಲು ಹೊಸ ಮನೆಯನ್ನು ನಿರ್ಮಾಣ ಮಾಡಿಸಿಕೊಟ್ಟು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಈಗ ಅದೇ ಹಾದಿಯಲ್ಲಿ ನಡೆದಿರುವ ಜಗ್ಗೇಶ್ ಅವರು ಇಟಲಿಯ ರೋಂ ನಲ್ಲಿ ಸಂಕಷ್ಟ ಪಡುತ್ತಿರುವ ಬೆಂಗಳೂರು ಮೂಲದ ಗರ್ಭಿಣಿ ಮಹಿಳೆಯೊಬ್ಬರ ರಕ್ಷಣೆಗೆ ಮುಂದಾಗುವಂತೆ ಅವರು ಕರ್ನಾಟಕ ಸರ್ಕಾರಕ್ಕೆ ತಮ್ಮ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಒಂದನ್ನು ಮಾಡಿ ಮನವಿಯನ್ನು ಮಾಡಿದ್ದಾರೆ.
ಜಗ್ಗೇಶ್ ಅವರು ಅನಾಮಿಕರೊಬ್ಬರು ಮಾಡಿರುವ ಮನವಿಯ ಪತ್ರವನ್ನು ತಮ್ಮ ಟ್ವಿಟರ್ ನಲ್ಲಿ ಟ್ಯಾಗ್ ಮಾಡಿದ್ದು, ಅದರಲ್ಲಿ ಬೆಂಗಳೂರು ಮೂಲದ ಗರ್ಭಿಣಿಯೊಬ್ಬರು ರೋಮ್‌ನಲ್ಲಿ ಸಂಕಷ್ಟದಲ್ಲಿದ್ದು, ಅವರು ಬಹಳ ನೋವಿನಲ್ಲಿದ್ದು, ಆಕೆ ಭಾರತಕ್ಕೆ ಬರಲು ಬಯಸಿದ್ದಾರೆ. ಆದರೆ ಸರ್ಕಾರ ಹೇಳುವ ಪ್ರಕಾರ ಆಕೆಯ ಬೇಡಿಕೆಗೆ ಸಮ್ಮತಿ ಸಿಗಲು 7 ದಿನ ಬೇಕಾಗುತ್ತದೆ.

ಆದ್ದರಿಂದ ಗರ್ಭಿಣಿ ಹೆಂಗಸು ಈ ಸಮಯದಲ್ಲಿ ಮಾತೃಭೂಮಿಯಲ್ಲಿ ಇರುವುದು ಒಳ್ಳೆಯದು.
ಕೊರೊನಾ ಕಾರಣದಿಂದ ಇಟಲಿಯ ಆಸ್ಪತ್ರೆಗಳು ಸಾಕಷ್ಟು ಸುರಕ್ಷಿತವಲ್ಲ. ಆದಕಾರಣ ಗರ್ಭಿಣಿ ಹೆಂಗಸು ನೋವು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾದರೂ ಕೂಡಾ ಅದರಿಂದ ತೊಂದರೆ ಆಗಬಹುದು. ಅಲ್ಲದೆ ಆಕೆಗೆ ಇಟಲಿಯಲ್ಲಿ ಸಾಯಲು ಇಷ್ಟವಿಲ್ಲ ಎಂದು ತಿಳಿಸಿದ್ದು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಮಾನ್ಯ ಶ್ರೀರಾಮುಲು ಹಾಗು ಸಂತೋಷ್ ಜೀ ದಯಮಾಡಿ ಈ ಹೆಣ್ಣು ಮಗಳಿಗೆ ಸಹಾಯಮಾಡಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here