ಕನ್ನಡದ ನವರಸ ನಾಯಕ ಜಗ್ಗೇಶ್ ತಮ್ಮ ಹುಟ್ಟೂರಾದ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಆನಗೋಡು ಗ್ರಾಮದಲ್ಲಿ ‘ಕಾಲ ಭೈರವ ದೇವಸ್ಥಾನ’ವನ್ನು ‘ಜೀರ್ಣೋದ್ಧಾರ’ ಮಾಡಿಸಿದ್ದಾರೆ. ಇದೇ ಫೆಬ್ರವರಿ 7 ಮತ್ತು 8, 2019ರಂದು ಕಾಲ ಭೈರವ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟು, ಪದ್ಧತಿಯಂತೆ ವಿವಿಧ ಪೂಜೆ-ಪುನಸ್ಕಾರಗಳನ್ನು ನಡೆಸಿ ಕಳಾಸಾರೋಹಣ ಮಾಡಿ ದೇವಾಲಯವನ್ನು ಉದ್ಘಾಟನೆ ಮಾಡಲಾಗಿದೆ. ಈ ಮೂಲಕ ಜಗ್ಗೇಶ್ ಅವರು ತಮ್ಮ ಹುಟ್ಟೂರಿನ ಮೇಲೆ ಅಭಿಮಾನ ಹಾಗೂ ಕಾಲ ಭೈರವನ ಮೇಲಿನ ತಮ್ಮ ಅಪಾರ ಭಕ್ತಿಯನ್ನು ಮೆರೆದಿದ್ದಾರೆ.

ಈ ಬಗ್ಗೆ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ “ಕಾಲಭೈರವನ ಆಲಯ ಚುಂಚನಗಿರಿ ಕಿರಿಯ ಶ್ರೀಗಳು , ಶ್ರೀ ಯದುವೀರ ಕೃಷ್ಣದತ್ತ ಒಡೆಯರ್ ಗ್ರಾಮಸ್ಥರು, ಬಂಧುಗಳು,ನಲ್ಮೆಯ #ಮಾಧ್ಯಮಮಿತ್ರರ ಸಹಕಾರ ಶುಭ ಹಾರೈಕೆಯಿಂದ ಲೋಕಾರ್ಪಣೆ ಆಯಿತು!
ನಾನು ನೆಪಮಾತ್ರ!ಕಲಾರಂಗ ಕನ್ನಡಿಗರ ಚಪ್ಪಾಳೆಯೇ ಈ ಕಾರ್ಯಕ್ಕೆ ಮೂಲ ಪ್ರೇರಣೆ. ಆ ಆಲಯದ ಕಲ್ಲಿನಲ್ಲಿ ಕಲಾಭಿಮಾನಿಗಳ ಹಾರೈಕೆ ಹಾಗು 38ವರ್ಷದ ನನ್ನ ಬೆವರಿದೆ!ಶುಭದಿನ.” ಎಂದು ಟ್ವೀಟ್ ಮಾಡಿದ್ದಾರೆ.

ಸುಮಾರು ಒಂದು ವರ್ಷದ ಹಿಂದೆ ತಮ್ಮ ಹುಟ್ಟೂರಾದ ಆನಗೋಡಿಗೆ ಹೋಗಿದ್ದ ಜಗ್ಗೇಶ್ ದೇವಸ್ಥಾನ ಕಂಡು ಅಲ್ಲಿ ನೂತನ ದೇವಸ್ಥಾನ ಕಟ್ಟುವ ಬಗ್ಗೆ ಯೋಚನೆ ಮಾಡಿದರಂತೆ. ಅದರಂತೆ, ಪುರೋಹಿತರನ್ನು ಸಂಪರ್ಕಿಸಿ ತಮ್ಮ ‘ಯೋಚನೆ’ಯನ್ನು ‘ಯೋಜನೆ’ಯ ಹಂತಕ್ಕೆ ತಂದು ಬೇಕಾದ ಸಕಲಸಿದ್ಧತೆ ಮಾಡಿಕೊಂಡು ದೇವಸ್ಥಾನ ಕಟ್ಟಿಸಲು ಪ್ರಾರಂಭಿಸದರಂತೆ. ತಮ್ಮ ಜ್ಯೋತಿಷಿಗಳ ಸಲಹೆಯಂತೆ ಕಾಶಿ ಪಟ್ಟಣಕ್ಕೆ ಹೋಗಿ ಅಲ್ಲಿ ಕಾಲ ಭೈರವೇಶ್ವರನಿಗೆ ಪೂಜೆ ಮಾಡಿ ಪ್ರಾರ್ಥಿಸಿಕೊಂಡ ಬಳಿಕ ಇಲ್ಲಿ ಆನಗೋಡಿಗೆ ಬಂದು ದೇವಸ್ಥಾನ ಕಟ್ಟುವ ಕೆಲಸ ಶುರು ಮಾಡಿದರಂತೆ.

ಒಟ್ಟಿನಲ್ಲಿ, ಈ ಮೊದಲು ಸಾಮಾಜಿಕ ಬದ್ಧತೆ, ಕಾಳಜಿ ತೋರಿಸಿ ತಮ್ಮ ಟ್ವೀಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದ ಜಗ್ಗೇಶ್, ಈ ಬಾರಿ ತಮ್ಮ ಆಧ್ಯಾತ್ಮಿಕ ನಡೆಯ ಮೂಲಕ ಬಹಳಷ್ಟು ಜನರ ಮೆಚ್ಚುಗೆ ಪಡೆದಿದ್ದಾರೆ. ಹುಟ್ಟೂರು ಬಿಟ್ಟ ಬಂದ ಮೇಲೆ ಅತ್ತ ತಲೆ ಹಾಕಲೂ ಹಿಂದೆಮುಂದೆ ನೋಡುವ ಮಂದಿಯ ಮಧ್ಯೆ ಹುಟ್ಟೂರಿನಲ್ಲಿ ಶಾಸ್ತ್ರೋಕ್ತವಾಗಿ ‘ಕಾಲ ಭೈರವ ದೇವಸ್ಥಾನ’ದ ‘ಜೀರ್ಣೋದ್ಧಾರ’ ಮಾಡಿದ ಜಗ್ಗೇಶ್ ಅವರನ್ನು ಅಭಿನಂದಿಸದೇ ಇರಲು ಹೇಗೆ ಸಾಧ್ಯ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here